ಸಾಂಬ್ರಾದಲ್ಲಿ ತಪ್ಪು ರನ್‌ ವೇನಲ್ಲಿ ವಿಮಾನ ಲ್ಯಾಂಡ್‌! ಪೈಲಟ್ ವಜಾ

By Kannadaprabha NewsFirst Published Oct 26, 2021, 7:37 AM IST
Highlights
  • ಹೈದರಾಬಾದ್‌-ಬೆಳಗಾವಿ ಮಾರ್ಗ ಮಧ್ಯೆ ಸಂಚರಿಸುವ ಸ್ಪೈಸ್‌ ಜೆಟ್‌ ವಿಮಾನವು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ
  • ಅದೃಷ್ಟವಶಾತ್‌ ಆ ರನ್‌ ವೇನಲ್ಲಿ ಯಾವುದೇ ವಿಮಾನ ಇಲ್ಲದೇ ಇರುವುದರಿಂದ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ

 ಬೆಳಗಾವಿ (ಅ.26):  ಹೈದರಾಬಾದ್‌-ಬೆಳಗಾವಿ (Belagavi) ಮಾರ್ಗ ಮಧ್ಯೆ ಸಂಚರಿಸುವ ಸ್ಪೈಸ್‌ ಜೆಟ್‌ (Spice Jet) ವಿಮಾನವು ಬೆಳಗಾವಿಯ ಸಾಂಬ್ರಾ ವಿಮಾನ (Sambra) ನಿಲ್ದಾಣದಲ್ಲಿ ರಾಂಗ್‌ ರನ್‌ ವೇನಲ್ಲಿ (Run way) ಲ್ಯಾಂಡ್‌ ಆದ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶಾತ್‌ ಆ ರನ್‌ ವೇನಲ್ಲಿ ಯಾವುದೇ ವಿಮಾನ ಇಲ್ಲದೇ ಇರುವುದರಿಂದ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

ರಾಂಗ್‌ ರನ್‌ವೇನಲ್ಲಿ ವಿಮಾನ ಲ್ಯಾಂಡ್‌ ಆದರೂ, ಪೈಲಟ್‌ ಹಾಗೂ ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದ (Airport) 26ನೇ ರನ್‌ ವೇನಲ್ಲಿ ಲ್ಯಾಂಡ್‌ ಆಗಬೇಕಿದ್ದ ವಿಮಾನ 8ರ ರನ್‌ ವೇನಲ್ಲಿ ಲ್ಯಾಂಡ್‌ ಆಗಿದೆ. ರನ್‌ ವೇ 26ರಲ್ಲಿ ಈ ಸಮಯದಲ್ಲಿ ಬೇರೆ ವಿಮಾನಗಳ ಲ್ಯಾಂಡ್‌ ಇಲ್ಲದಿದ್ದಕ್ಕೆ ದುರಂತ ತಪ್ಪಿದೆ.

ಏರ್‌ ಇಂಡಿಯಾ ಖರೀದಿ: ಅಂತಿಮ ಬಿಡ್‌ಗೆ ಟಾಟಾ, ಸ್ಪೈಸ್‌ ಜೆಟ್‌!

ಭಾನುವಾರ ಬೆಳಗ್ಗೆ 11.26ಕ್ಕೆ ಲ್ಯಾಂಡ್‌ ಆಗಿದ್ದ ಈ ವಿಮಾನ ಮಧ್ಯಾಹ್ನ 12.05ಕ್ಕೆ ಮರಳಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ತೆರಳಿತು. ಪ್ರಕರಣವನ್ನು ಏರ್‌ ಕ್ರಾಪ್ಟ್‌ ಆ್ಯಕ್ಸಿಡೆಂಟ್‌ ಇನ್ವೆಸ್ಟಿಗೇಶನ್‌ ಬ್ಯೂರೋ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ, ಅಜಾಗರೂಕತೆ ತೋರಿದ ಪೈಲಟ್‌ಗಳನ್ನು ಭಾರತೀಯ ವಿಮಾನ ಅಪಘಾತ ತನಿಖಾದಳ ತನಿಖೆಗೆ ಒಳಪಡಿಸಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ ಮತ್ತು ಏರ್‌ಕ್ರಾಪ್ಟ್‌ ಆಕ್ಸಿಡೆಂಟ್‌ ಇನ್ವೆಸ್ಟಿಗೇಶನ್‌ ಬ್ಯೂರೋ ( ಎಎಐಬಿ) ಮಾಹಿತಿಯನ್ನಾಧರಿಸಿ, ತನಿಖೆಯನ್ನು ಕಾಯ್ದಿರಿಸಿ ಇಬ್ಬರೂ ಪೈಲಟ್‌ಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ. 

ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಎಂದು ಸ್ಪೈಸ್‌ ಜೆಟ್‌ ವಿಮಾನ ಕಂಪನಿ ವಕ್ತಾರರು ತಿಳಿಸಿದ್ದಾರೆ.

ತುರ್ತು ಭೂ ಸ್ಪರ್ಷ

 

 ತಾಂತ್ರಿಕ ದೋಷ (Technical issue)  ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಚೆನ್ನೈ-ಗೋವಾ (Goa) ನಡುವೆ ಹಾರಾಟ ಮಾಡುತ್ತಿದ್ದ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಸ್ಪೈಸ್‌ ಜೆಟ್‌ನಲ್ಲಿ ಬಾಲಿವುಡ್ ನಟ ಸೋನು ಸೂದ್‌ ಫೋಟೋ; ಭಾವುಕನಾದ ನಟ!

68 ಮಂದಿ ಪ್ರಯಾಣಿಕರನ್ನು ಹೊತ್ತ ಸ್ಪೈಸ್‌ ಜೆಟ್‌ ಎಸ್‌ಜಿ-3105 ವಿಮಾನ ಬೆಳಗ್ಗೆ 11.04ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 12.10ಕ್ಕೆ ಗೋವಾ ತಲುಪಬೇಕಿತ್ತು. ಆದರೆ, ಚೆನ್ನೈನಿಂದ ಹೊರಟ ನಂತರ ವಿಮಾನದ ಕಾಕ್‌ಪಿಟ್‌ನ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ತಕ್ಷಣ ವಿಮಾನದ ಪೈಲೆಟ್‌ 11.56ಕ್ಕೆ ತುರ್ತು ಭೂಸ್ಪರ್ಶಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂದೇಶ ಕಳುಹಿಸಿದ್ದರು.

ಪೈಲೆಟ್‌ ಕಳುಹಿಸಿದ ಸಂದೇಶ ಪಡೆದ ಕೆಐಎ ಅಧಿಕಾರಿಗಳು ಸ್ಪೈಸ್‌ಜೆಟ್‌ ಎಸ್‌ಜಿ-3105 ವಿಮಾನದ ಭೂಸ್ಪರ್ಶಕ್ಕಾಗಿ ವ್ಯವಸ್ಥೆ ಮಾಡಿಕೊಂಡು ಸಂದೇಶ ರವಾನಿಸಿದ್ದರು. ಇದರಿಂದಾಗಿ ಮಧ್ಯಾಹ್ನ 12.17ಕ್ಕೆ ವಿಮಾನ ಅತ್ಯಂತ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು, ವಿಮಾನದಲ್ಲಿದ್ದ 68 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

click me!