ನಿವಾಸಿಗಳು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಪಟ್ಟಣದ ಕೇಂದ್ರಸ್ಥಾನಕ್ಕೆ ಬರಬೇಕಾದರೆ ಇರುವುದೊಂದೇ ಮಾರ್ಗ. ಆದರೆ, ಅದೇ ಮಾರ್ಗ ಮಧ್ಯದಲ್ಲಿರುವ ಕೋಟೆಗೋಡೆಗೆ ಅಂಟಿಕೊಂಡಿರುವ 4 ಶತಮಾನದ ಮುಖ್ಯದ್ವಾರದ ಕಮಾನ್ ಅಪಾಯದಂಚಿನಲ್ಲಿದೆ. ದುರಸ್ತಿ ಮಾಡದಿರುವುದಿರುವುದರಿಂದ ಜನರು ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ.
ನಾರಾಯಣ ಮಾಯಾಚಾರಿ
ಮುದ್ದೇಬಿಹಾಳ (ಸೆ.9) : ನಿವಾಸಿಗಳು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಪಟ್ಟಣದ ಕೇಂದ್ರಸ್ಥಾನಕ್ಕೆ ಬರಬೇಕಾದರೆ ಇರುವುದೊಂದೇ ಮಾರ್ಗ. ಆದರೆ, ಅದೇ ಮಾರ್ಗ ಮಧ್ಯದಲ್ಲಿರುವ ಕೋಟೆಗೋಡೆಗೆ ಅಂಟಿಕೊಂಡಿರುವ 4 ಶತಮಾನದ ಮುಖ್ಯದ್ವಾರದ ಕಮಾನ್ ಅಪಾಯದಂಚಿನಲ್ಲಿರುವುದು ಐತಿಹಾಸಿಕ ಕಮಾನ್‌ಗೆ ದುರಸ್ತಿ ಕಾಣದೇ ಜೀವ ಭಯದಲ್ಲಿಯೇ ಕ್ರಮಿಸಬೇಕಾದ ಅನಿವಾರ‍್ಯವಿದೆ.ಪಟ್ಟಣದ ಹಳೇ ಕಿಲ್ಲಾಗಲ್ಲಿಯಲ್ಲಿರುವ ಐತಿಹಾಸಿಕ ಕೋಟೆಗೋಡೆಗೆ ಅಂಟಿಕೊಂಡಿದ್ದ ಕಿಲ್ಲಾಗಲ್ಲಿಯ ಅಗಸಿ ಕಮಾನ್ ಸದ್ಯ ಯಾವಾಗ ಬೀಳುತ್ತದೆಯೋ? ಎಂಬ ಭೀತಿಯ ನಡುವೆ ಜನ ಸಂಚರಿಸುತ್ತಿದ್ದಾರೆ.
undefined
ವಿಜಯಪುರ: ಸೆ. 9ರಂದು 1000 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಚಾಲನೆ, ಯತ್ನಾಳ
ರಕ್ಷಣೆಗೆ ಬೇಕು ಇಚ್ಛಾಶಕ್ತಿ:
ತಾಲೂಕಿನ ಬಸರಕೋಡ ನಾಡಗೌಡರ ಪೂರ್ವಜರಾದ ಪರಮಣ್ಣನವರಿಂದ 1680ರಲ್ಲಿ ಕಮಾನ್ ಸ್ಥಾಪಿಸಲಾಯಿತು. ಅದೇ ಮನೆತನದ ಹುಚ್ಚಪ್ಪನವರು 1720ರಲ್ಲಿ ಕೋಟೆ ಕಟ್ಟಿಸಿದ್ದರಿಂದಾಗಿ ಮುದ್ದಬ್ಬೇ ಊರಾಗಿ ತದನಂತರ ಮುದ್ದೇಬಿಹಾಳಾಗಿ ಪರಿವರ್ತನೆಗೊಂಡಿತು. ಇಂದು ಈ ನಗರ ಬೃಹದಾಕಾರವಾಗಿ ಬೆಳೆದು ನಿಂತಿದೆ. ಸದ್ಯ ಕಿಲ್ಲಾಗಲ್ಲಿಯೂ ಈ ಹಿಂದೆ ಮುದ್ದೇಬಿಹಾಳ ಹಳೇ ಊರಾಗಿತ್ತು. ಇಲ್ಲಿ ರಾಜ ಕಾಲುವೆ ಕೂಡ ಇದ್ದು, ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅದರಂತೆ ಈ ಕೋಟೆ ಗೋಡೆಯ ಒಳಗೆ ಐದು ಬಾವಿಗಳನ್ನು ಬಸರಕೋಡ ನಾಡಗೌಡ ಮನೆತನದವರು ನಿರ್ಮಿಸುವ ಮೂಲಕ ಒಂದೊಂದು ಬಾವಿಗೆ ಒಂದೊಂದು ತಮ್ಮ ಮನೆತನದ ಹೆಣ್ಣು ಮಕ್ಕಳ ಹೆಸರಿಡಲಾಗಿತ್ತು.
ತೊಂದರೆ ಮುನ್ನ ಎಚ್ಚೆತ್ತುಕೊಳ್ಳಲಿ:
ಕೋಟೆಗೋಡೆಗಳ ಅಗಸಿಗೆ ಹೊಂದಿಕೊಂಡು ನೂರಕ್ಕೂ ಹೆಚ್ಚು ಕುಟುಂಬಗಳು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿವೆ. ಈಗಾಗಲೇ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿಪರೀತ ಮಳೆ ಸುರಿಯುವಿಕೆಯಿಂದಾಗಿ ಗೊಡೆಗಳು ಸಂಪೂರ್ಣ ನೆನೆದು ಬೀಳುವ ಹಂತದಲ್ಲಿವೆ. ಒಂದು ವೇಳೆ ಹಾಗೇನಾದರೂ ಕೋಟೆಗೋಡೆಗಳಾಗಲಿ ಅಥವಾ ಕಿಲ್ಲಾಗಲ್ಲಿಯ ಅಗಸಿ ಮುಖ್ಯದ್ವಾರದ ಕಮಾನ್ ಆಗಲಿ ಕುಸಿದು ಬಿದ್ದರೆ ಭಾರಿ ತೊಂದರೆಯುಂಟಾಗಲಿದೆ. ವಿಜಯಪುರ ಜಿಲ್ಲಾಧಿಕಾರಿಗಳು ಮತ್ತು ಪುರಾತತ್ವ ಇಲಾಖೆಯವರು ಈ ಸ್ಥಳಕ್ಕೆ ಭೇಟಿ ನೀಡಿ ಇತಿಹಾಸವನ್ನು ಹೊಂದಿದ ಕೋಟೆಗೋಡೆಗಳ ರಕ್ಷಣೆ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಬೇಕಿದೆ ಎಂಬುವುದು ಸ್ಥಳೀಯರ ಆಗ್ರಹ.
ಇರುವುದೊಂದೇ ಮಾರ್ಗ!
ಪಟ್ಟಣದ ಹಳೇ ಕಿಲ್ಲಾಗಲ್ಲಿಯಲ್ಲಿರುವ ಐತಿಹಾಸಿಕ ಕೋಟೆಗೋಡೆಗೆ ಅಂಟಿಕೊಂಡಿದ್ದ ಕಿಲ್ಲಾಗಲ್ಲಿಯ ಅಗಸಿ ಕಮಾನ್ ದಾಟಿಕೊಂಡು ಬಂದರೇ ಸಾವಿರಾರು ಮನೆಗಳಿದ್ದು, ಪಟ್ಟಣದ ಕೇಂದ್ರ ಸ್ಥಾನಕ್ಕೆ ಈ ಕಮಾನ್ ಕೆಳಗಡೆಯಿಂದಲೇ ಹಾದು ಹೋಗಬೇಕಾಗಿದ್ದು, ಬೇರೆ ಮಾರ್ಗಗಳು ಇಲ್ಲದೇ ಕೇವಲ ಬೇರೆ ಬೇರೆ ಬಡಾವಣೆಯಲ್ಲಿ ಕಾಲುದಾರಿ ಮೂಲಕ ಮಾತ್ರ ಸಂಚರಿಸಬಹುದು. ಪಟ್ಟಣಕ್ಕೆ ವಾಹನಗಳ ಮೂಲಕ ಬರಲು ಇದೊಂದೇ ಮಾರ್ಗ ಇರುವುದರಿಂದ ದುರಸ್ತಿ ಕಾರ್ಯ ಬೇಗ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ. ಹಲವು ಶತಮಾನಗಳ ಇತಿಹಾಸವುಳ್ಳ ಕಮಾನ್ ಈಗಾಗಲೇ ಶಿಥಿಲಾಸ್ಥಿತಿಯಲ್ಲಿದ್ದು ಮೇಲಾಗಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಬಿಳುವ ಹಂತದಲ್ಲಿದೆ. ಕಮಾನ್ ಬಿದ್ದರೇ ಹೀಗಾಗಿ ಸಂಪೂರ್ಣ ಬಿಳುವ ಮುನ್ನ ದುರಸ್ತಿ ಮಾಡಿದರೇ ಐತಿಹಾಸಿ ಕಮಾನ್ ರಕ್ಷಣೆಗೆ ಮುಂದಾಗಬೇಕಾಗಿದೆ.
ಪ್ರವಾಸಿ ತಾಣವನ್ನಾಗಿಸುವುದು ಯಾವಾಗ?
ಜತೆಗೆ ಈ ಭಾಗದಲ್ಲಿ ಅಮರಶಿಲ್ಪಿ ಜಕಣಾಚಾರಿಯವರು ನಿರ್ಮಿಸಿದ ಪ್ರಾಚಿನ ಈಶ್ವರ ದೇವಸ್ಥಾನ, ಹನುಮಂತ ದೇವಸ್ಥಾನಗಳಿವೆ. ಹಾಗೇ ತಾಳಿಕೋಟೆಯ ಮಹಾನ ತಪಸ್ವಿ ಶರಣ ಖಾಸ್ಗತೇಶ್ವರ ಶ್ರೀಗಳು ತಪೋವನವೂ ಕೂಡ ಇದೆ. ಆದರೆ, ಸದ್ಯ ಪುರಾತತ್ವ ಇಲಾಖೆಯವರಾಗಲಿ ಅಥವಾ ತಾಲೂಕು ಆಡಳಿತವಾಗಲಿ, ಸ್ಥಳೀಯ ಪುರಸಭೆ ಇಲಾಖೆ ಅಧಿಕಾರಿಗಳಾಗಲಿ, ಈ ಹಳೆ ತಲೆ ಮಾರಿನ ಇತಿಹಾಸ ಹೊಂದಿದ ಕಿಲ್ಲಾಗಲ್ಲಿಯ ಕೊಟೆಗೋಡೆ ಹಾಗೂ ಅಗಸಿಯ ಮುಖ್ಯದ್ವಾರದ ಕಮಾನ್ ಹಾಗೂ ದೇವಸ್ಥಾನಗಳನ್ನು ಸಂರಕ್ಷಣೆ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡುವಲ್ಲಿ ಮನಸ್ಸು ಮಾಡಿಲ್ಲ. ವಿಶ್ವದ ಅತೀ ಎತ್ತರದ ರೈಲು ಸೇತುವೆ ಕಮಾನು ಕಾಮಗಾರಿ ಪೂರ್ಣ; ಹೆಚ್ಚಾಯ್ತು ಕಾಶ್ಮೀರದ ಸೌಂದರ್ಯ!
ಈ ಬಗ್ಗೆ ಈಗಾಗೇ ಮಾಹಿತಿ ತಿಳಿದು ಬಂದಿದೆ. ಹಳೇ ಪುರಾತನ ಐತಿಹಾಸಿಕ ಸ್ಮಾರಕಗಳನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಅದರಲ್ಲೂ ಅದರಿಂದ ಅಪಾಯವಿದೆ ಎಂದು ತಿಳಿದಿದ್ದೇನೆ. ಸದ್ಯ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ವಿಜಯಪುರ ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ ಮತ್ತು ಪುರಾತತ್ವ ಇಲಾಖೆಗೆ ಪತ್ರ ಬರೆದು ಅವರ ಮಾರ್ಗದರ್ಶನದ ಮೂಲಕ ಯಾವುದೇ ಅನಾಹುತ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಬಿ.ಎಸ್.ಕಡಕಬಾವಿ, ತಹಸೀಲ್ದಾರ್ ಮುದ್ದೇಬಿಹಾಳ.
ಈ ಗಾಗಲೇ ಈ ಬಗ್ಗೆ ಸಾಕಷ್ಟುಮನವಿಯನ್ನು ಪುರಸಭೆ ಸೇರಿದಂತೆ ಸಂಬಂಧಪಟ್ಟಎಲ್ಲ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಕಿಲ್ಲಾ ಗಲ್ಲಿಯ ಅಗಸಿ ಮುಖ್ಯ ದ್ವಾರದ ಕಮಾನವಾಗಲಿ ಅಥವಾ ಕೋಟೆಗೋಡೆಗಳನ್ನು ಸಂರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ಮನಸ್ಸು ಮಾಡಿಲ್ಲ. ಸದ್ಯ ಒಂದು ವೇಳೆ ಏನಾದರೂ ಅದು ಕುಸಿಬಿದ್ದು ಏನಾದರೂ ಅನಾಹುತ ಸಂಭವಿಸಿದರೇ ಸಂಬಂಧಪಟ್ಟಎಲ್ಲ ಇಲಾಖೆ ಅಧಿಕಾರಿಗಳೆ ನೇರ ಹೋಣೆಯಾಗಿಲಿದ್ದಾರೆ. ಕಾರಣ ಆದಷ್ಟುಬೇಗ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪ್ರಯತ್ನಿಸಬೇಕಿದೆ.
ಉದಯ ರಾಯಚೂರ, ಸಾಮಾಜ ಸೇವಕ ಮುದ್ದೇಬಿಹಾಳ.