ಉಕ್ರೇನ್‌ನಲ್ಲಿ ಮೃತಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿ: ಪ್ರಧಾನಿ ಭೇಟಿಯಾಗಲಿರುವ ನವೀನ್‌ ಪೋಷಕರು

By Kannadaprabha News  |  First Published Jun 19, 2022, 4:15 AM IST

*  ಮಾ. 1ರಂದು ಉಕ್ರೇನ್‌ನಲ್ಲಿ ಶೆಲ್‌ ಬಡಿದು ಮೃತಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿ ನವೀನ್‌ 
*  ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿರುವ ನವೀನ್‌ ಪೋಷಕರು
*  ನವೀನ್‌ ಪೋಷಕರ ಜೊತೆ 10 ನಿಮಿಷಗಳ ಕಾಲ ಚರ್ಚೆ ನಡೆಸಲಿರುವ ಪ್ರಧಾನಿ 
 


ಹಾವೇರಿ(ಜೂ.19):  ಕಳೆದ ಮಾರ್ಚ್‌ನಲ್ಲಿ ಉಕ್ರೇನ್‌ನಲ್ಲಿ ಶೆಲ್‌ ಬಡಿದು ಮೃತಪಟ್ಟಿದ್ದ ನವೀನ್‌ ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುವ ಅವಕಾಶ ಕಲ್ಪಿಸಲಾಗಿದ್ದು, ನಾಳೆ(ಭಾನುವಾರ) ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. 

ನವೀನ್‌ ತಂದೆ ಶೇಖರಗೌಡ ಹಾಗೂ ತಾಯಿ ವಿಜಯಲಕ್ಷ್ಮಿ ಹಾಗೂ ಸಹೋದರ ಹರ್ಷಾಗೆ ಮೋದಿ ಭೇಟಿ ಅವಕಾಶ ಕಲ್ಪಿಸಲಾಗಿದ್ದು, ಅಂದು ನವೀನ್‌ ಪೋಷಕರ ಜೊತೆ ಪ್ರಧಾನಿಗಳು 10 ನಿಮಿಷಗಳ ಕಾಲ ಚರ್ಚೆ ನಡೆಸಿವುದಾಗಿ ತಿಳಿದುಬಂದಿದ್ದು, ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಕೂಡಾ ನವೀನ್‌ ತಂದೆ ಶೇಖರಗೌಡಗೆ ಕರೆ ಮಾಡಿ ಒಂದು ದಿನ ಮುಂಚೆನೇ ಬೆಂಗಳೂರಿಗೆ ಬರಲು ತಿಳಿಸಿದ್ದಾರೆ.

Tap to resize

Latest Videos

undefined

Naveen Body ನವೀನ್‌ ದೇಹ ತರಲು 9 ದಿನದ ಸಾಹಸ,ಕೇಂದ್ರದ ರಾಜತಾಂತ್ರಿಕ ಬಲ, ರಾಜ್ಯದ ಶ್ರಮಕ್ಕೆ ಸಂದ ಫಲ!

ಪ್ರಧಾನಿ ಮೋದಿ ಕಾರ್ಯಾಲಯದಿಂದಲೂ ನವೀನ್‌ ಪೋಷಕರಿಗೆ ಕರೆ ಬಂದಿದ್ದು, ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಸದ್ಯ ಧಾರವಾಡ ಕರ್ನಾಟಕ ಯುನಿವರ್ಸಿಟಿ ಜಾಯಿಂಟ್‌ ಡೈರೆಕ್ಟರ್‌ ಕೃಷ್ಣಮೂರ್ತಿ ಬೆಳಗೇರಿ ಅವರಿಗೆ ನವೀನ್‌ ಪೋಷಕರನ್ನು ಕರೆ ತರುವ ಜವಾಬ್ದಾರಿ ನೀಡಲಾಗಿದೆ. ಮೃತ ನವೀನ್‌ ಪೋಷಕರು ಶನಿವಾರ ರಾತ್ರಿಯೇ ಬೆಂಗಳೂರಿಗೆ ಹೊರಟಿರುವುದಾಗಿ ತಿಳಿದು ಬಂದಿದೆ.

ಕಳೆದ ಮಾರ್ಚ್‌ 1ರಂದು ರಾಣಿಬೆನ್ನೂರು ತಾಲೂಕು ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಉಕ್ರೇನ್‌ನಲ್ಲಿ ಶೆಲ್‌ ಬಡಿದು ಮೃತಪಟ್ಟಿದ್ದರು. 21 ದಿನಗಳ ಬಳಿಕ ತಾಯ್ನಾಡಿಗೆ ಮೃತ ನವೀನ್‌ ಪ್ರಾರ್ಥಿವ ಶರೀರ ಮರಳಿತ್ತು. ದಾವಣಗೆರೆ ಎಸ್‌.ಎಸ್‌. ಮೆಡಿಕಲ್‌ ಕಾಲೇಜಿಗೆ ಪೋಷಕರು ನವೀನ್‌ನ ದೇಹದಾನ ಮಾಡಿದ್ದರು.
 

click me!