ರಾಷ್ಟ್ರವಾದ ಮತ್ತು ಹಿಂದುತ್ವ ನಮ್ಮ ಸರಕಾರಿ ಕಾರ್ಯಕ್ರಮದ ಪ್ರಮುಖ ಅಜೆಂಡಾ: ವಿ.ಸುನೀಲ್ ಕುಮಾರ್

By Suvarna News  |  First Published Feb 13, 2023, 6:59 PM IST

ರಾಷ್ಟ್ರವಾದ ಹಾಗೂ ಹಿಂದುತ್ವದ ಪ್ರಚಾರದ ಉದ್ದೇಶದಿಂದಲೇ ಸರಕಾರ ಹಲವು ಕಾರ್ಯಕ್ರಮಗಳನ್ನು ಯೋಚಿಸಿದೆ ಮುಂದೆಯು ಅನೇಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.


ಉಡುಪಿ (ಫೆ.13): ರಾಷ್ಟ್ರವಾದ ಹಾಗೂ ಹಿಂದುತ್ವದ ಪ್ರಚಾರದ ಉದ್ದೇಶದಿಂದಲೇ ಸರಕಾರ ಹಲವು ಕಾರ್ಯಕ್ರಮಗಳನ್ನು ಯೋಚಿಸಿದೆ ಮುಂದೆಯು ಅನೇಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ಸಮಾರೋಪದಲ್ಲಿ ಮಾತ ನಾಡಿದ ಸಚಿವರು,ರಾಷ್ಟ್ರೀಯತೆ ಮತ್ತು ಹಿಂದುತ್ವದ ಬಗ್ಗೆ ಸರ್ಕಾರದ ದೃಢ ನಿಲುವು ಪ್ರಕಟಿಸಿದ್ದಾರೆ. ಯಕ್ಷಗಾನ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆ.ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ರಾಷ್ಟ್ರೀಯತೆ ಮತ್ತು ಹಿಂದುತ್ವದ ವಿಚಾರವನ್ನು ಹೇಳುತ್ತೇವೆ.ಆಡಳಿತದಲ್ಲಿಯೂ ಇದನ್ನ ಪ್ರಕಟೀಕರಿಸುತ್ತೇವೆ. ಈ ವಿಚಾರ ಧಾರೆಯ ಭಾಗವಾಗಿಯೇ ಪರಶುರಾಮ ಥೀಮ್ ಪಾರ್ಕ್ ಆಗಿದೆ.ಕೋಟಿಕಂಠ ಗಾಯನ ಮತ್ತು ಯಕ್ಷಗಾನ ಸಮ್ಮೇಳನವು ಇದರ ಭಾಗವಾಗಿದೆ.

ಈ ರೀತಿಯ ಆಯೋಜನೆಗಳು ನಾನು ಸಚಿವನಾಗಿರುವಾಗಲೇ ನಡೆಯುತ್ತಿದೆ.ಇದು ನನಗೆ ಅತ್ಯಂತ ಸಂತಸದ ವಿಚಾರ.ಇದು ಇನ್ನಷ್ಟು ಮುಂದುವರಿಯಬೇಕು ಎನ್ನುವ ಆಗ್ರಹ ಎಲ್ಲಾ ಕಡೆಯಿಂದ ಇದೆ ಎಂದರು.

Tap to resize

Latest Videos

undefined

ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನದ ನಿರ್ಣಯಗಳು
ಉಡುಪಿಯಲ್ಲಿ ನಡೆದ ರಾಜ್ಯದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಯಕ್ಷಗಾನ ಕ್ಷೇತ್ರದ ಪ್ರಮುಖರು ಸೇರಿ ಸಮ್ಮೇಳನ ಅಧ್ಯಕ್ಷ ಡಾ. ಎಂ ಪ್ರಭಾಕರ ಜೋಶಿ ಅವರ ನೇತೃತ್ವದಲ್ಲಿ 13 ನಿರ್ಣಯಗಳನ್ನು ಮಂಡಿಸಿದ್ದಾರೆ.

ಸಮ್ಮೇಳದಾದ್ಯಕ್ಷರು ಸೂಚಿಸಿರುವ ಯಕ್ಷಗಾನ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸರಕಾರವು ಪರಿಗಣಿಸಿ ಅದಕ್ಕೆ ಅನ್ವಯವಾಗಿ ಸಮಿತಿಯನ್ನು ರಚಿಸಬೇಕು. ವರದಿಯನ್ನು ಕೊಡಬೇಕು ಮತ್ತು ಈ ವರದಿಯ ಪ್ರಸ್ತಾವಗಳನ್ನು ಕಾಲಮಿತಿಯ ಒಳಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಸಾಂಸ್ಕೃತಿಕವಾಗಿ ಕರ್ನಾಟಕದ ಭಾಗವೇ ಆಗಿರುವ ಕಾಸರಗೋಡನ್ನು ಕರ್ನಾಟಕ ಸರಕಾರ ಪರಿಗಣಿಸಬೇಕು‌ ಕರ್ನಾಟಕ ಸರಕಾರದ ವಿವಿಧ ಅಧಿಕೃತ ಪ್ರಶಸ್ತಿ, ಸಾಂಸ್ಕೃತಿಕ ಉತ್ಸವ , ಮನ್ನಣೆ ವಿವಿಧ ಸಮಿತಿಗಳ, ಅಕಾಡೆಮಿಗಳ ಸದಸ್ಯತ್ವದಲ್ಲಿ ಕಾಸರಗೋಡಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು

ಸಮಗ್ರ ಕರ್ನಾಟಕದ ಯಕ್ಷಗಾನ ಮತ್ತು ಇತರ ಸಾಂಪ್ರದಾಯಿಕ ಬಯಲಾಟಗಳ ವೃತ್ತಿನಿರತ ಕಲಾವಿದರು, ರಂಗಕರ್ಮಿಗಳು ಮತ್ತು ರಂಗ ಸಹಾಯಕರಿಗಾಗಿ ಅಡಕವಾದ ಕಲ್ಯಾಣ ಕಾರ್ಯಕ್ರಮ ಯೋಜನೆಯನ್ನು ಸಹಾಯಧನ, ಕ್ಷೇಮ ನಿಧಿ, ನಿವೃತ್ತಿ ಮಾಸಾಶನ, ಆರೋಗ್ಯ ವಿಮೆ, ಇವುಗಳನ್ನೊಳಗೊಂಡು ರೂಪಿಸಿ ಜಾರಿಗೊಳಿಸಬೇಕು.

ಈ ಸಮ್ಮೇಳನದ ಮಾದರಿಯಲ್ಲಿ ಇನ್ನಷ್ಟು ವಿಸ್ತೃತವಾದ ಆಯಾಮಗಳೊಂದಿಗೆ ನಿಶ್ಚಿತ ಅವಧಿಯ ಅಂತರದಲ್ಲಿ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಮುಂದೆಯೂ ನಿರಂತರವಾಗಿ ನಡೆಸಬೇಕು. ಈಗ ನೀಡಲಾಗುತ್ತಿರುವ ಕಲಾವಿದರ ಗೌರವ ಮಾಸಾಶನವನ್ನು 5,000 ಕ್ಕೆ ಏರಿಸಬೇಕು.

ಯಕ್ಷರಂಗಾಯಣವನ್ನು ಯಕ್ಷಗಾನ ಅಸ್ತಿತ್ವದಲ್ಲಿರುವ ಇತರ ಜಿಲ್ಲೆಗಳಿಗೂ ವಿಸ್ತರಿಸಬೇಕು. ರಾಷ್ಟ್ರೀಯ ನಾಟಕ ಶಾಲೆ ಯಂತೆ ಯಕ್ಷಗಾನ ರಾಷ್ಟ್ರೀಯ ಶಾಲೆ ರಚನೆ ಆಗಬೇಕು. ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನಕ್ಕೆ ನಾಂದಿ ಹಾಡಿದ ಸರಕಾರವು ಮುಂದಿನ ದಿನಗಳಲ್ಲಿ ವಿಶ್ವ ಯಕ್ಷಗಾನ ಸಮ್ಮೇಳನ ನಡೆಸಲು ತೀರ್ಮಾನಿಸಬೇಕು. 

ಕೇರಳ ರಾಜ್ಯದಲ್ಲಿ ಕಥಕಳಿಯನ್ನು, ಒರಿಸ್ಸಾದಲ್ಲಿ ಒಡಿಸ್ಸೀ ಕಲೆಯನ್ನು ರಾಜ್ಯದ ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಿರುವಂತೆ ಕರ್ನಾಟಕ ರಾಜ್ಯದಲ್ಲಿ ಯಕ್ಷಗಾನ ಕಲೆಯನ್ನು ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಬೇಕು.

ಶಾಲೆಗಳಲ್ಲಿ ಯಕ್ಷಗಾನ ಕಲಿಸಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಶೈಕ್ಷಣಿಕ ಪಠ್ಯಗಳಲ್ಲಿ ಹಂತ ಹಂತವಾಗಿ ಪರಿಚಯಾತ್ಮಕ ಯಕ್ಷಗಾನದ ವಿಷಯಗಳನ್ನು ಸೇರಿಸಬೇಕು. ಔಪಚಾರಿಕ ಶಿಕ್ಷಣದಲ್ಲಿ ಡಿಪ್ಲೋಮೋ, ಸರ್ಟಿಫಿಕೇಟ್ ಹಾಗೂ ಪದವಿ ಕೋರ್ಸುಗಳನ್ನು ಆರಂಭಿಸುವವರಿಗೆ ಪ್ರಶಸ್ತಿ ನೀಡಬೇಕು. ಪ್ರತಿ ವರ್ಷ ನಡೆಸುವ ಯಕ್ಷಗಾನ ಸಮ್ಮೇಳನವನ್ನು ಅನುಕೂಲವಾಗುವ ರೀತಿಯಲ್ಲಿ ಹಾಗೂ ಆರು ತಿಂಗಳ ಮೊದಲ ದಿನಾಂಕ ನಿರ್ಧರಿಸಬೇಕು.

ಯಕ್ಷ​ಗಾ​ನದ ಡಾಟಾ ಬ್ಯಾಂಕ್‌ ಆಗ​ಬೇ​ಕಿ​ದೆ: ಸಚಿವ ಸುನಿ​ಲ್‌

ಜಯಪ್ರಕಾಶ ಮಂಡ್ಯ ಇವರು ಮುಂದಿನ ಯಕ್ಷಗಾನ ಸಮ್ಮೇಳನವನ್ನು ಮಂಡ್ಯದಲ್ಲಿ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.ಮಂಡ್ಯದಲ್ಲಿ ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ನಿರ್ಣಯ ವಾಗಿರುವ ಕಾರಣ ದಕ್ಷಿಣ ಕನ್ನಡದ ಯಕ್ಷಗಾನ ಪ್ರೇಮಿಗಳ ಅಪೇಕ್ಷೆಯಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಸಮ್ಮೇಳನ ನಡೆಸಲು ಸಮಿತಿಯು ತೀರ್ಮಾನಿಸಿದೆ.

click me!