ಮಲೆನಾಡಿಗೂ ಇದ್ಯಾ ಟೆರರಿಸ್ಟ್‌ ನಂಟು?: ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಮನೆ ತಪಾಸಣೆ

By Suvarna News  |  First Published Mar 19, 2020, 1:23 PM IST

ಶಂಕಿತ ಭಯೋತ್ಪಾದಕರ ಮನೆ ತಪಾಸಣೆ ನಡೆಸಿದ ರಾಷ್ಟ್ರೀಯ ತನಿಖಾ ದಳ| ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ಶಂಕಿತ ಭಯೋತ್ಪಾದಕರ ಮನೆ ತಪಾಸಣೆ| 


ಶಿವಮೊಗ್ಗ(ಮಾ.19): ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತ ಭಯೋತ್ಪಾದಕರ ಮನೆಗಳನ್ನ ತಪಾಸಣೆ ನಡೆಸಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ಮತೀನ್ ಹಾಗೂ ಸಾಜಿದ್ ಎಂಬ ಶಂಕಿತ ಭಯೋತ್ಪಾದಕರ ಮನೆಗಳನ್ನ ರಾಷ್ಟ್ರೀಯ ತನಿಖಾ ದಳ ತಪಾಸಣೆ ನಡೆಸಿದೆ. 

Tap to resize

Latest Videos

ಇಂದು ಬೆಳಿಗ್ಗೆ 6 ಗಂಟೆಯಿ೦ದ 9ರ ವರೆಗೆ ರಾಷ್ಟ್ರೀಯ ತನಿಖಾ ದಳ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ. ಕೇಂದ್ರ ತನಿಖಾ ತ೦ಡ ಮತ್ತು ಶಿವಮೊಗ್ಗ ತನಿಖಾ ತ೦ಡ, ತೀರ್ಥಹಳ್ಳಿ ಪೊಲೀಸ್ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಒಟ್ಟು 8 ವಾಹನಗಳಲ್ಲಿ ಆಗಮಿಸಿ ಇಬ್ಬರು ಶ೦ಕಿತ ಟೆರೆರಿಸ್ಟ್‌ಗಳ ಮನೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತೀರ್ಥಹಳ್ಳಿ ಪಟ್ಟಣದ ಮೀನು ಮಾರ್ಕೆಟ್ ರಸ್ತೆಯಲ್ಲಿರವ ಎರಡೂ ಮನೆಗಳನ್ನ ರಹಸ್ಯವಾಗಿ ಪರಿಶೀಲನೆ ನಡೆಸಿ ರಾಷ್ಟ್ರೀಯ ತನಿಖಾ ದಳ ತೆರಳಿದೆ ಎಂದು ತಿಳಿದು ಬಂದಿದೆ.
 

click me!