ರಾಜಕೀಯ ನಾಯಕರ ಪುತ್ರರ ಕಾರು ಅಪಘಾತ ಪ್ರಕರಣಗಳು ಹೆಚ್ಚಾಗತೊಡಗಿದೆ. ಹ್ಯಾರಿಸ್ ಪುತ್ರ ಮೊಹಮ್ಮದ್ ನಳಪಾಡ್, ಆರ್ ಅಶೋಕ್ ಪುತ್ರನ ಪ್ರಕರಣದ ಬಳಿಕ ಇದೀಗ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಪುತ್ರನ ಕಾರು ಅಪಘಾತವಾಗಿದ್ದು, ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ(ಮಾ.19): ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಪುತ್ರ ರಾಹುಲ್ ಪಾಟೀಲ್ ದುಬಾರಿ ಪೊರ್ಶೆ ಕಾರು ಅಪಘಾತವಾಗಿದೆ. ಜಗಳೂರು ತಾಲೂಕಿನ ದೊಣ್ಣೆ ಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ರಾಹುಲ್ ಕಾರು ಎದುರಿನಿಂದ ಬರುತ್ತಿದ್ದ ಅಪ್ಪೆ ಆಟೋಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ಚಾಲನಕನಿಗೆ ಸಣ್ಣ ಗಾಯಗಳಾಗಿವೆ.
ನಲಪಾಡ್ ಕಾರು ರೇಸ್ ಕ್ರೇಝ್, ಅಮಾಯಕನ ಕಾಲು ಕಟ್!
undefined
ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಈ ಅವಘಡ ಸಂಭವಿಸಿದೆ. ಲಾರಿಯನ್ನು ಓವರ್ ಟೇಕ್ ಮಾಡಲು ಹೋದ ವೇಳೆ ಎದುರಿನಿಂದ ಬಂದ ಅಪ್ಪೆ ಆಟೋಗೆ ಕಾರು ಗುದ್ದಿದೆ. ಹೀಗಾಗಿ ಅಪಘಾತ ಸಂಭವಿಸಿದೆ. ಅಪ್ಪೆ ಆಟೋ ಚಾಲಕನ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜಗಳೂರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗಿದೆ.
ನಲಪಾಡ್ ಪುಂಡಾಟಕ್ಕೆ ಮೂರುವರೆ ಕೋಟಿ ಕಾರು, ಬೆಂಟ್ಲಿ ಅಡಿಗೆ ನಾಲ್ವರು!
ಅಪಘಾತದ ವೇಳೆ ಎಂ.ಬಿ.ಪಾಟೀಲ್ ಪುತ್ರ ರಾಹುಲ್ ಪಾಟೀಲ್ ಕಾರಿನಲ್ಲಿ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ಪುತ್ರ ಮೊಗಮ್ಮದ್ ನಳಪಾಡ್ ಕಾರು ಅಪಘಾತ ಪ್ರಕರಣ ತೀವ್ರ ಕೋಲಾಹಲ ಎಬ್ಬಿಸಿತ್ತು. ಇದರ ಬಳಿಕ ಬಿಜೆಪಿ ನಾಯಕ, ಕಂದಾಯ ಸಚಿವ ಆರ್.ಅಶೋಕ್ ಪುತ್ರನ ಕಾರು ಅಪಘಾತ ಪ್ರಕರಣ ಕೂಡ ಸದ್ದು ಮಾಡಿತ್ತು.