ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಬಗ್ಗೆ ಸುಳ್ಸುದ್ದಿ ಹರಿಬಿಟ್ರೆ ಹೀಗೇ ಆಗೋದು!?

Suvarna News   | Asianet News
Published : Mar 19, 2020, 12:49 PM ISTUpdated : Mar 19, 2020, 12:51 PM IST
ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಬಗ್ಗೆ ಸುಳ್ಸುದ್ದಿ ಹರಿಬಿಟ್ರೆ ಹೀಗೇ ಆಗೋದು!?

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಿಬಿಟ್ಟ ಉಪನ್ಯಾಸಕರು| ಆರೋಪಿಗಳನ್ನ ಬಂಧಿಸಿದ ಬೀದರ್ ಪೊಲೀಸರು| ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ವೈರಸ್ ಸೋಂಕಿತನೊಬ್ಬ ಪರಾರಿಯಾಗಿದ್ದಾ‌ನೆ ಎಂದು ಸುಳ್ಳು ಸುದ್ದಿ ಪೋಸ್ಟ್‌ ಮಾಡಿದ್ದ ಆರೋಪಿಗಳು| 

ಬೀದರ್(ಮಾ.19): ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ಇಂದು(ಗುರುವಾರ) ನಡೆದಿದೆ. ಮಹಮ್ಮದ್ ಅರ್ಷದ್ ಖಾನ್, ಮುಜಿಬೊದ್ದಿನ್ ಬಂಧಿತ ಆರೋಪಿಗಳಾಗಿದ್ದಾರೆ. 

ಕೊರೋನಾ ಆತಂಕ: DCM ಕಾರಜೋಳಗೆ ಕಲಬುರಗಿ ಮಂದಿಯಿಂದ ಶೃದ್ಧಾಂಜಲಿ!

ನಗರದ ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ವೈರಸ್ ಸೋಂಕಿತನೊಬ್ಬ ಪರಾರಿಯಾಗಿದ್ದಾ‌ನೆ. ಲ್ಯಾಬ್ ರಿಪೋರ್ಟ್ ಪಾಸಿಟಿವ್ ಬರುತ್ತಿದ್ದಂತೆ ವ್ಯಕ್ತಿ ಪರಾರಿಯಾಗಿದ್ದಾ‌ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು‌ ಸುದ್ದಿ ಹರಿದು ಬಿಟ್ಟಿದ್ದರು. ಬೀದರ್‌ನ ಶಿವನಗರ ಕಡೆಗೆ ಓಡಿ ಹೋಗಿದ್ದಾನೆ ಎಚ್ಚರ ಎಚ್ಚರ ಎಂದು ಬಂಧಿತರು ಪೋಸ್ಟ್ ಮಾಡಿದ್ದರು. 

ಕೊರೋನಾ ಭೀತಿ: 165 ವರ್ಷದಲ್ಲಿ ಇದೇ ಮೊದಲ ಬಾರಿ 155 ರೈಲು ರದ್ದು

ಹೀಗೆ ಸುಳ್ಳು ಹರಿಬಿಟ್ಟ ಆರೋಪಿಗಳನ್ನ ಬೀದರ್ ನಗರದ ಗಾಂಧಿ ಗಂಜ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ವೃತ್ತಿಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದಾರೆಂದು ತಿಳಿದು ಬಂದಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 505ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡುಸ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 
 

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!