ಸಂಸದ ರಮೇಶ ಜಿಗಜಿಣಗಿ ಅವರು ಪರಿಶ್ರಮ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಒತ್ತಡದ ಪರಿಣಾಮದಿಂದ ಇಂದು ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಇಂಡಿ ಮಾರ್ಗವಾಗಿ 103 ಕಿಮೀ ವರೆಗೆ ಸಾಗಲಿರುವ ರಾಷ್ಟ್ರೀಯ ಹೆದ್ದಾರಿ ವಿಜಯಪುರ ತಲುಪಲಿದೆ.ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಇಂಡಿ ಪಟ್ಟಣ ಸೇರಿದಂತೆ ಅಥರ್ಗಾ,ನಾಗಠಾಣ ಗ್ರಾಮಗಳಿಗೆ ಬೈಪಾಸ್ ರಸ್ತೆ ಭಾಗ್ಯ ದೊರೆತಿದ್ದು, ಗ್ರಾಮಸ್ಥರು ಬೈಪಾಸ್ ರಸ್ತೆ ನಮ್ಮೂರಿಗೆ ಬರಲಿದೆ ಎಂಬ ಸಂತಸದಲ್ಲಿದ್ದಾರೆ.
ಖಾಜು ಸಿಂಗೆಗೋಳ
ಇಂಡಿ(ಫೆ.21): ಭೀಮಾಸಿರಿಯ ಗಡಿಭಾಗದಲ್ಲಿರುವ ತಾಲೂಕು ಕೇಂದ್ರ ಲಿಂಬೆ ನಾಡು ಇಂಡಿ ಪಟ್ಟಣಕ್ಕೆ ಕೊನೆಗೂ ರಾಷ್ಟ್ರೀಯ ಹೆದ್ದಾರಿ ಭಾಗ್ಯ ದೊರೆತಿದ್ದು, ಇಂಡಿ ಪಟ್ಟಣದಿಂದ ಅಂತರಾಜ್ಯದ ನಗರ,ಪಟ್ಟಣಗಳಿಗೆ ಸಂಪರ್ಕ ಕ್ರಾಂತಿಯುಂಟು ಮಾಡುವುದರ ಜೊತೆಗೆ ಹೆದ್ದಾರಿ ರಸ್ತೆಯ ಬದಿಯಲ್ಲಿರುವ ಗ್ರಾಮಗಳಿಗೆ ವ್ಯಾಪಾರ, ವಹಿವಾಟಕ್ಕೆ ಅನುಕೂಲವಾಗಲಿದೆ.
undefined
ಸಂಸದ ರಮೇಶ ಜಿಗಜಿಣಗಿ ಅವರು ಪರಿಶ್ರಮ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಒತ್ತಡದ ಪರಿಣಾಮದಿಂದ ಇಂದು ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಇಂಡಿ ಮಾರ್ಗವಾಗಿ 103 ಕಿಮೀ ವರೆಗೆ ಸಾಗಲಿರುವ ರಾಷ್ಟ್ರೀಯ ಹೆದ್ದಾರಿ ವಿಜಯಪುರ ತಲುಪಲಿದೆ.ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಇಂಡಿ ಪಟ್ಟಣ ಸೇರಿದಂತೆ ಅಥರ್ಗಾ,ನಾಗಠಾಣ ಗ್ರಾಮಗಳಿಗೆ ಬೈಪಾಸ್ ರಸ್ತೆ ಭಾಗ್ಯ ದೊರೆತಿದ್ದು, ಗ್ರಾಮಸ್ಥರು ಬೈಪಾಸ್ ರಸ್ತೆ ನಮ್ಮೂರಿಗೆ ಬರಲಿದೆ ಎಂಬ ಸಂತಸದಲ್ಲಿದ್ದಾರೆ.
Nanna votu nanna matu: ನಮ್ಮ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಿಲ್ಲ: ವಿಜಯಪುರದ ರೈತರು
ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಮಂಥಾದಿಂದ ಶುರುವಾಗಲಿರುವ 548 ಬಿ ಹೊಸ ದ್ವಿಪಥ (ಟು ಲೇನ್ ವಿತ್ ಪೇವ್ಡ್ ಶೌಲ್ಡರ್ ಸ್ಟ್ರಕ್ಚರ್) ರಾಷ್ಟ್ರೀಯ ಹೆದ್ದಾರಿ ಯೋಜನೆ ಮಹಾರಾಷ್ಟ್ರದ ಹೆಸರಾಂತ ಜ್ಯೋತಿರ್ಲಿಂಗ್ ಕ್ಷೇತ್ರ ಪರಳಿ ವೈಜನಾಥ, ಅಂಬಾ ಜೋಗಾಯಿ, ಲಾತೂರ, ಔಸಾ, ಉಮರ್ಗಾ, ಮುರುಮ್, ಆಲೂರ, ಅಕ್ಕಲಕೋಟೆ, ನಾಗಣಸೂರ ಹಾಗೂ ಕರ್ನಾಟಕದ ಗಡಿ ಭಾಗವಾಗಿರುವ ಮಾಶಾಳ, ಕರಜಗಿ, ಮಣ್ಣುರ, ಹಿರೇಬೇವನುರ, ಇಂಡಿ, ಅಥರ್ಗಾ, ನಾಗಠಾಣ, ವಿಜಯಪುರ ನಗರದ ಮೂಲಕ ಸಾಗಿ ಬೆಳಗಾವಿಯ ಸಂಕೇಶ್ವರದವರೆಗೂ ಸಾಗಲಿದೆ. ಒಟ್ಟು 491 ಕಿಮೀ ಉದ್ದದ ಈ ಹೆದ್ದಾರಿ ಯೋಜನೆಯಲ್ಲಿ 404 ಕಿಮೀ ಮಹಾರಾಷ್ಟ್ರ ರಾಜ್ಯದಲ್ಲಿ ಸಾಗಿದರೆ,ಉಳಿದಂತೆ 168 ಕಿಮೀ ಹೆದ್ದಾರಿ ಕರ್ನಾಟಕದಲ್ಲಿ ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ರಸ್ತೆಯಂತ ಮೂಲ ಸೌಕರ್ಯ ವಂಚಿತವಾಗಿರುವ ಇಂಡಿ ತಾಲೂಕಿನ ಗಡಿ ಗ್ರಾಮಗಳಗುಂಟ ಸಾಗಿ 103 ಕಿಮೀ ರಾಹೆ ವಿಜಯಪುರಕ್ಕೆ ಸೇರಲಿದ್ದು, ಬರುವ ದಿನಗಳಲ್ಲಿ ಈ ರಾಹೆ ಸಂಕರ್ಪ ಕ್ರಾಂತಿಯನ್ನೇ ಉಂಟು ಮಾಡುವ ಸಾಧ್ಯತೆಗಳು ನಿಶ್ಚಳವಾಗಿವೆ.
954 ಕೋಟಿ ಮೊತ್ತದ ಟೆಂಡರ್:
548 ಬಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸದರಿ ನೂತನ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಮಹತ್ವದ ಭಾಗವೆಂದೇ ಹೇಳಲಾಗುತ್ತಿರುವ ಮಹಾರಾಷ್ಟ್ರ ಗಡಿಯಿಂದ ಶುರುವಾಗುವ 0 ಕಿ.ಮೀ. ದಿಂದ 103 ಕಿ.ಮೀ ವರೆಗಿನ ರಸ್ತೆ ಕಾಮಗಾರಿಗೆ 957 ಕೋಟಿ ರೂ.ಮೊತ್ತದ ಟೆಂಡರ್ ಪ್ರಕ್ರಿಯೆಯನ್ನು ಶುರುಮಾಡಿದ್ದು ಫೆ.20 ಟೆಂಡರ್ ಕೊನೆಯ ದಿನವಾಗಿದ್ದು, 24ತಿಂಗಳ ಕಾಲಾವದಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ಷರತ್ತಿಗೆ ಒಳಪಟ್ಟಿದೆ.
ಮಹಾರಾಷ್ಟ್ರ ಗಡಿಯಲ್ಲಿ ಬರುವ ಅಕ್ಕಲಕೋಟೆ ತಾಲೂಕಿನ ಮುರುಮ್‌ನಿಂದ ಶುರುವಾಗಲಿರುವ ದ್ವಿಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯ 103 ಕಿಮೀ ರಸ್ತೆ ನಿರ್ಮಾಣಕ್ಕೆ 954 ಕೋಟಿ ರೂ.ಮೊತ್ತದ ಟೆಂಡರ್ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ.
ಗಡಿಯಲ್ಲಿ ಸಂಪರ್ಕ ಕ್ರಾಂತಿ:
ರಾಜಕೀಯ ಇಚ್ಚಾಶಕ್ತಿ ಸೇರಿದಂತೆ ಹಲವು ಕಾರಣಗಳಿಂದಾಗಿ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಮಹಾರಾಷ್ಟ್ರ ಗಡಿಭಾಗದಲ್ಲಿರುವ ತಾಲೂಕಿನ ಮಣ್ಣುರ, ಅಗರಖೇಡ ಸೇರಿದಂತೆ ನೂರಾರು ಹಳ್ಳಿಗಳಿಗೆ ಇಂದಿಗೂ ಸುರಕ್ಷಿತ, ಸುಗಮ ಸಂಚಾರದ ರಸ್ತೆಗಳಿಲ್ಲ ಎಂಬುದೇ ದುರಂತ. ಆದರೆ, ಇಂದು ಸಂಸದ ರಮೇಶ ಜಿಗಜಿಣಗಿ ಅವರ ಇಚ್ಚಾಶಕ್ತಿಯಿಂದ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪ್ರಾಮಾಣಿಕ ಪ್ರಯತ್ನದಿಂದ ಗಡಿಭಾಗದ ಗ್ರಾಮಗಳಿಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಂಜೂರು ಆಗಿದ್ದು, ಈ ಭಾಗದ ಜನತೆ ನಿಟ್ಟುಸಿರುವ ಬಿಟ್ಟಂತಾಗಿದೆ.
ಹೆದ್ದಾರಿ ಯೋಜನೆಯಿಂದಾಗಿ ಕಿರಿದಾದ ಗುಂಡಿ ಬಿದ್ದಿರುವ ರಸ್ತೆಯಲ್ಲಿಯೇ ಪ್ರಯಾಣ ಮಾಡುವ ಜನರ ಸಂಕಷ್ಟಗಳಿಗೆ ಕಾಯಂ ಪರಿಹಾರ ದೊರಕುವ ಆಶಾಭಾವನೆ ಮೂಡಿದೆ.ಭೀಮಾತೀರದಲ್ಲಿ ಯಲ್ಲಮ್ಮ ದೇವಿ, ಚೆನ್ನಕೇಶವ, ಗಡ್ಡಿಲಿಂಗ ಹಾಗೂ ಭೀಮಾನದಿಯ ಪುಣ್ಯಸ್ಥಾನ ಮಾಡುವ ಪುಣ್ಯಕ್ಷೇತ್ರ ಸೇರಿದಂತೆ ಇಲ್ಲಿನ ಧಾರ್ಮಿಕ ತಾಣಗಳಿಗೆ ನಿತ್ಯ ಸಾವಿರಾರು ಜನರು ಬಂದು ಹೋಗುವುದುಕ್ಕೆ,ಅಂತರಾಜ್ಯ ನಗರ,ಪಟ್ಟಣಗಳಿಗೆ ಸರಕು ಸಾಗಾಟ, ವ್ಯಾಪಾರ ವಹಿವಾಟು ಮಾಡಲು ಈ ರಾಷ್ಟ್ರೀಯ ಹೆದ್ದಾರಿ ಅನುಕೂಲ ಕಲ್ಪಿಸಲಿದೆ.
ಅಂತರಾಜ್ಯ ಸಂಪರ್ಕ:
ಇಂಡಿ ತಾಲೂಕಿನಿಂದ ಅಕ್ಕಲಕೋಟೆ ಮೂಲಕ ಮಹಾರಾಷ್ಟ್ರ ರಾಜ್ಯದ ವಿವಿಧ ನಗರಗಳಿಗೆ ತೆರಳಲು ಈ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲವಾಗಿ ಪರಿಣಮಿಸಲಿದೆ.ರಾಹೆ 548 ಬಿ ಯೋಜನೆಯ ಟೆಂಡರ್ ಅಂತಿಮಗೊಂಡು ಕಾಮಗಾರಿ ಶುರುವಾದಲ್ಲಿ ಈ ದಾರಿಯಲ್ಲಿ ನಿತ್ಯ ಸಾಗುವ ಇಂಡಿ ತಾಲೂಕಿನ ಭೀಮಾಸಿರಿಯ ಗಡಿಯಲ್ಲಿರುವ ಲಿಂಬೆನಾಡಿನ ಜನರಿಗೆ ತುಂಬ ಅನುಕೂಲವಾಗಲಿದೆ.ಜೊತೆಗೆ ಈ ಹೆದ್ದಾರಿ ಯೋಜನೆಯಿಂದಾಗಿ ಇಂಡಿಯ ಹಿಂದುಳಿದ ಗಡಿ ಗ್ರಾಮಗಳಲ್ಲಿ ಹಾದುಹೋಗುವುದರಿಂದು ಅಂಗಡಿ,ಮುಂಗಟ್ಟು ಸೆರಿದಂತೆ ಇತರೆ ಆರ್ಥಿಕ ಅಭಿವೃದ್ದಿಗೆ ಅನುಕೂಲವಾಗಿ ಈ ಗ್ರಾಮಗಳ ಭಾಗ್ಯದ ಬಾಗಿಲು ಸಹ ತೆರೆಯಲಿದೆ.
ಇಲ್ಲಿ ಅದಾಗಲೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ, ನಾದ ಕೆಡಿಯ ಜಮಖಂಡಿ ಶುಗರ್ಸ್, ಹಾವಿನಾಳದ ಇಂಡಿಯನ್ ಸಕ್ಕರೆ ಕಾರ್ಖಾನೆಗಳಿವೆ.ಜೊತೆಗೆ ಹಲವು ಕಾರ್ಖಾನೆಗಳು ಬರುತ್ತಿವೆ. ರೈತರು ಕಬ್ಬು ಬೆಳೆಯುತ್ತಾರೆ. ಹೆದ್ದಾರಿಯಾದಲ್ಲಿ ಕಬ್ಬು ಸೇರಿದಂತೆ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಹೆಚ್ಚು ಅನುಕೂಲವಾಗಲಿದ್ದು, ತಾನಾಗಿಯೇ ಕೃಷಿ ಕೇಂದ್ರೀತ ಹಾಗೂ ಔದ್ಯೋಗಿಕ ಆರ್ಥಿಕ ಅಭಿವೃದ್ಧಿಗೆ ಇಂಡಿ ಭಾಗದಲ್ಲಿ ಬಹುದೊಡ್ಡ ಪ್ರೋತ್ಸಾಹ ದೊರಕುವ ಸಂಭವಗಳಿವೆ.
ಭ್ರಷ್ಟ ಬಿಜೆಪಿಯನ್ನು ಜನ ಕಿತ್ತೊಗೆಯುತ್ತಾರೆ: ರಣದೀಪಸಿಂಗ್ ಸುರ್ಜೇವಾಲಾ
ಅಕ್ಕಲಕೋಟ-ಇಂಡಿ-ವಿಜಯಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಆಗಬೇಕು ಎಂಬ ಕನಸು ಇಂಡಿ ಭಾಗದ ಜನರದಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಈ ಕನಸು ನನಸು ಮಾಡಿದೆ.ಇಂದು ಅಕ್ಕಲಕೋಟದಿಂದ ವಿಜಯಪುರದವರೆಗೆ 103 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ .954 ಕೊಟಿ ಮಂಜೂರು ಆಗಿದ್ದು, ಟೆಂಡರ್ ಕರೆಯಲಾಗಿದ್ದು, ಫೆ.20 ಟೆಂಡರ್ ಕೊನೆಯ ದಿನವಾಗಿದೆ. ಈ ಕಾಮಗಾರಿ 24 ತಿಂಗಳ ಅವದಿಯಲ್ಲಿ ಪೂರ್ಣಗೊಳ್ಳಲಿದೆ.ಇಂಡಿ ಭಾಗದ ಜನರ ಇನ್ನೊಂದು ಬೇಡಿಕೆಯಾಗಿರುವ ಶಿರಾಡೋಣ-ಲಿಂಗಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಫೈಲ್ ಪಿಎಂ ಕಚೇರಿಯಲ್ಲಿ ಪೆಂಡಿಂಗ್ ಬಿದ್ದಿದ್ದು,ಅದನ್ನು ಮಂಜೂರು ಮಾಡಿಸಲು ಶ್ರಮಿಸುತ್ತಿದ್ದೇನೆ. ಈ ಕಾಮಗಾರಿ ಮಂಜೂರು ಆಗುವವರೆಗೆ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ರಸ್ತೆಯ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗಾಗಿ ರಾಜ್ಯ ಸರ್ಕಾರದಿಂದ .50 ಕೋಟಿ ಮಂಜೂರು ಮಾಡಿಸಿದ್ದೇನೆ ಅಂತ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಮಹಾರಾಷ್ಟ್ರದ ಅಕ್ಕಲಕೋಟದ ಮುರಮ್‌ದಿಂದ ಇಂಡಿ ಮಾರ್ಗವಾಗಿ ಬೈಪಾಸ್ ರಸ್ತೆಯ ಮೂಲಕ ವಿಜಯಪುರ ಸೇರಲಿಸುವ ರಾಷ್ಟ್ರೀಯ ಹೆದ್ದಾರಿ ಮಂಜೂರು ಆಗಿರುವುದರಿಂದ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಹಾಗೂ ಸಾರಿಗೆ ಸಂಪರ್ಕದಲ್ಲಿ ಬಹುದೊಡ್ಡ ಕ್ರಾಂತಿಯಾಗಲಿದೆ.ರಾಹೆ ಮಂಜೂರು ಮಾಡಿರುವ ಕೇಂದ್ರ ಸಚಿವ ಗಡ್ಕರಿ ಅವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಅಂತ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.