ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ ಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಸದಸ್ಯರ ವಾಗ್ವಾದ

By Suvarna News  |  First Published Feb 21, 2023, 7:56 PM IST

ದಾವಣಗೆರೆ ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ 17.91 ಕೋಟಿ ಉಳಿತಾಯದ ಬಜೆಟ್ ಮಂಡಿಸಿದರು.


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ(ಫೆ.21): ದಾವಣಗೆರೆ ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ 17.91 ಕೋಟಿ ಉಳಿತಾಯದ ಬಜೆಟ್ ಮಂಡಿಸಿದರು. ಮಂಗಳವಾರ ಮೇಯರ್ ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸತತ ಎರಡನೇಯ ಬಜೆಟ್ ಮಂಡಿಸಿದರು. ಆರಂಭಿಕ ಶಿಲ್ಕು 6725.65 ಲಕ್ಷ, 16, 401. 85   ರಾಜ್ಯ ಸರ್ಕಾರದ ಅನುದಾನ, ತೆರಿಗೆ ಮತ್ತಿತರ ಮೂಲಗಳಿಂದ ಒಟ್ಟು 49063.60 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ಜನಪರ ಅಭಿವೃದ್ಧಿ ಕಾರ್ಯ, ನೌಕರರು ಮತ್ತು ಸಿಬ್ಬಂದಿ ವೇತನ, ನಿರ್ವಹಣೆ ಇತರೆಗೆ ಖರ್ಚು 53998.17 ಲಕ್ಷ ಅಂದಾಜಿಸಲಾಗಿದೆ. ಮುಂದುವರಿದ ಶಿಲ್ಕು, ರಾಜ್ಯ ಸರ್ಕಾರದ ಅನುದಾನ, ತೆರಿಗೆ ಸಂಗ್ರಹ, ಇತರೆ ಮೂಲಗಳಿಂದ ಬರುವ 49063.60 ಲಕ್ಷ  ಆದಾಯದಲ್ಲಿ ಅಭಿವೃದ್ಧಿ ಕಾರ್ಯ, ವೇತನ, ನಿರ್ವಹಣೆ ಒಳಗೊಂಡಂತೆ ಇತರೆಯದಕ್ಕೆ 53998.17 ಲಕ್ಷ  ಖರ್ಚು ಮಾಡಿದರೂ 1791.08 ಲಕ್ಷ ಉಳಿತಾಯ ಆಗಲಿದೆ ಎಂದು ಸೋಗಿ ಶಾಂತಕುಮಾರ್ ತಿಳಿಸಿದರು.  ಮೂರನೇ ಬಾರಿಗೂ ಉಳಿತಾಯದ ಬಜೆಟ್ ಮಂಡಿಸಲಾಗಿದೆ ಎಂದು ಬಿಜೆಪಿ ಸದಸ್ಯರು ಕರತಾಡನ, ಮೇಜು ಕುಟ್ಟುವ ಮೂಲಕ ಸ್ವಾಗತಿಸಿದರು.

Tap to resize

Latest Videos

ಆಡಳಿತರೂಢ  ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ  ವಾಕ್ಸಮರ:
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಇಂದು  ನಡೆದ ಬಜೆಟ್ ಸಭೆಯ ಪ್ರಾರಂಭದಲ್ಲೇ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಕಾಂಗ್ರೆಸ್ ಸದಸ್ಯ ಎ. ನಾಗರಾಜ್, ಕಳೆದ 15 ವರ್ಷದ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಒಬ್ಬ ಮೇಯರ್ ಅವಧಿಯಲ್ಲಿ ಎರಡು ಬಜೆಟ್ ಮಾಡಿದ ಇತಿಹಾಸ ಇಲ್ಲ. ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ಎರಡು ಬಾರಿ ಬಜೆಟ್ ಮಂಡನೆ ಮಾಡುತ್ತಿರುವುದು ನಿಜಕ್ಕೂ ಸಂತೋಷ. ಬಜೆಟ್ ಮಂಡನೆಗೆ ನಮ್ಮ ವಿರೋಧ ಇಲ್ಲ. ಈ ಬಾರಿ 80  ಕೋಟಿ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಸಂಪನ್ಮೂಲ 25 ಕೋಟಿ ಇದೆ. ಆದರೂ 80 ಕೋಟಿ ಬಜೆಟ್ ಮಂಡನೆ ಮಾಡ ಲಾಗುತ್ತಿದೆ.

ಎಲ್ಲಿಂದ ಅನುದಾನ ತರಲಾಗುತ್ತದೆ. ಕಳೆದ ಮೂರು ವರ್ಷಗಳ ಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿ ಎಷ್ಟಾಗಿವೆ. ಏನೆಲ್ಲ ಕೆಲಸ ಆಗಿವೆ ಎಂಬುದನ್ನು ದಾವಣಗೆರೆ ಜನರಿಗೆ ಮಾಹಿತಿ ನೀಡಿ ಬಜೆಟ್ ಮಂಡನೆ ಮಾಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ನ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಧ್ವನಿ ಗೂಡಿಸಿ  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಳೆಂಟು ಜನ ವಿಧಾನ ಪರಿಷತ್ ಸದಸ್ಯರಿದ್ದಾರೆ. ಅವರು ಎಷ್ಟು ಕೊಡುಗೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೇ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದಾರೆ ಅವರು ಎಷ್ಟು ಸಭೆಗೆ ಹಾಜರಾಗಿದ್ದಾರೆ. ಅನುದಾನ ನೀಡಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಇದು ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಶಾಸಕರು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಸುಧೀರ್ಘ ಕಾಲ ಆರೋಪ ಪ್ರತ್ಯಾರೋಪ ಮಾಡಿದರು. 

ಅನಧಿಕೃತ ನಿವೇಶನ ಹಂಚಿಕೆ ಬಗ್ಗೆ ಸುಧೀರ್ಘ ಚರ್ಚೆ:
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1600 ನಿವೇಶನಗಳ ಹಕ್ಕು ಪತ್ರವನ್ನು ನೀಡಲಾಗಿದೆ. ಅದಕ್ಕೆ ಫಲಾನುಭವಿಗಳ ಆಯ್ಕೆ ಯಾವ ರೀತಿ ಆಯಿತು ಅದಕ್ಕೆ ಅರ್ಜಿಯನ್ನು ಎಲ್ಲಿ ಸಲ್ಲಸಿದ್ದರು. ಒಟ್ಟು ಫಲಾನುಭವಿಗಳ ಸಂಖ್ಯೆ ಅರ್ಹತೆ ಎಲ್ಲವುಗಳ ಬಗ್ಗೆ ಸಭೆಗೆ ಮಾಹಿತಿ ನೀಡಬೇಕೆಂದು ಪಾಲಿಕೆ ಸದಸ್ಯ ಚಮನ್ ಸಾಬ್ ಒತ್ತಾಯಿಸಿದರು. ಇದಕ್ಕೆ ಧನಿಗೂಡಿಸಿದ ಬಿಜೆಪಿ  ಮಾಜಿ ಮೇಯರ್ ಬಿ ಜೆ ಅಜಯ್ ಕುಮಾರ್ ಕೆಲ ಅಧಿಕಾರಿಗಳು ಸ್ವೇಚ್ಛೆಯಾಗಿ ನಿವೇಶನದ ಹಕ್ಕುಪತ್ರಗಳನ್ನು ನೀಡಿದ್ದಾರೆ. ಇದರಲ್ಲಿ ಪಾರದರ್ಶಕತೆ ಕಾಪಾಡಿಲ್ಲ.

ತಿಂಗಳಾಂತ್ಯಕ್ಕೆ ಬಿಬಿಎಂಪಿ 10 ಸಾವಿರ ಕೋಟಿ ಬಜೆಟ್‌..? 3ನೇ ಬಾರಿಯೂ ಅಧಿಕಾರಿಗಳಿಂದ ಬಜೆಟ್‌ ಮಂಡನೆ

ದಾವಣಗೆರೆ ನಗರದಲ್ಲಿ ಒಟ್ಟು 27 ಸಾವಿರ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಸೀನಿಯರ್ಟಿ ಆಧಾರದ ಮೇಲೆ ಸೈಟು ಹಂಚಿಕೆಯಾಗಬೇಕು ಆದ್ರೆ ಶಾಸಕರ  ಹೇಳಿದವರಿಗೆ ಹಕ್ಕುಪತ್ರ ಕೊಟ್ಟಿದ್ದಾರೆ. ಈ ಬಗ್ಗೆ ಕಾಂಗ್ರೆಸ್  ಬಿಜೆಪಿ ಪಾಲಿಕೆ ಸದಸ್ಯರಿಗೆ ಗೊತ್ತಿಲ್ಲ. ಅಧಿಕಾರಿಗಳು ಸೈಟ್ ನೀಡಿರುವ ಬಗ್ಗೆ ಕೂಲಂಕುಶ ತನಿಖೆಯಾಗಬೇಕೆಂದು ಆಗ್ರಹಿಸಿದರು.

 

Mangaluru: ಉಳ್ಳಾಲ ನಗರಸಭೆ ಬಜೆಟ್ ನಲ್ಲೂ ಸಂಘರ್ಷ ಸೃಷ್ಟಿಸಿದ ಕಿವಿ ಮೇಲಿನ ಹೂ!

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಶ್ರಯ ವಿಭಾಗದ ಮ್ಯಾನೇಜರ್ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರ ಅಣತಿಯಂತೆ ಹಕ್ಕುಪತ್ರ ನೀಡಿದ್ದೇವೆ ಇದರಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ ಎಂದರು. ಇದಕ್ಕೆ ಕೆರಳಿದ ಪಾಲಿಕೆ ಸದಸ್ಯರು ನಮ್ಮ ವಾರ್ಡ್ ನಲ್ಲಿ 11 ಜನರಿಗೆ ಹಕ್ಕು ಪತ್ರ ನೀಡಿದ್ದಾರೆ. ನಮ್ಮ ವಾರ್ಡ್ ನಲ್ಲಿ 20 ಜನರಿಗೆ ನೀಡಿದ್ದಾರೆ. ಆಶ್ರಯ ಕಮಿಟಿಯಲ್ಲಿ ಆ ವಾರ್ಡ್ ನ ಸದಸ್ಯರಿಗೆ ಗೊತ್ತಿಲ್ಲದೇ ಹೇಗೆ ಕೊಡಲು ಸಾಧ್ಯ ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಅದಕ್ಕೆ ಪಾಲಿಕೆ ಕಮಿಷನರ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

click me!