ರಾಷ್ಟ್ರೀಯ ವೈದ್ಯರ ದಿನ 2021 : ವೈದ್ಯ ಲೋಕದ ಸೇವೆ ಸ್ಮರಿಸಿದ ಸುತ್ತೂರು ಶ್ರೀ

By Kannadaprabha NewsFirst Published Jul 1, 2021, 8:48 AM IST
Highlights
  • ಇಂದು ರಾಷ್ಟ್ರೀಯ ವೈದ್ಯರ ದಿನ ಹಿನ್ನೆಲೆ 
  • ವೈದ್ಯ ಲೋಕದ ಸೇವೆ ಸ್ಮರಿಸಿದ ಸುತ್ತೂರು ಸ್ವಾಮೀಜಿ
  • ವೈದ್ಯರ ಶ್ರಮವನ್ನು ಕೇವಲ ಮಾತುಗಳಿಂದ ವರ್ಣಿಸಲು ಸಾಧ್ಯವೇ ಇಲ್ಲವೆಂದ ಸ್ವಾಮೀಜಿ

ಮೈಸೂರು (ಜು.01): ಇಂದು ರಾಷ್ಟ್ರೀಯ ವೈದ್ಯರ ದಿನ ಹಿನ್ನೆಲೆ  ಸುತ್ತೂರು ಶ್ರೀಗಳು ವೈದ್ಯ ಲೋಕದ ಸೇವೆ ಸ್ಮರಿಸಿದ್ದಾರೆ.

ಮೈಸೂರಿನ ಸುತ್ತೂರಿನಲ್ಲಿಂದು ಮಾತನಾಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೊರೋನಾದಂತಹ ಕಠಿಣ ಸಂದರ್ಭವನ್ನು ಎದುರಿಸಿದ್ದಾರೆ ಎಂದರು.

ಕೋವಿ​ಡ್‌ನ 2ನೇ ಅಲೆ​ಗೆ 800 ವೈದ್ಯ​ರ ಬಲಿ: ಐಎಂಎ! .

ವೈದ್ಯರ ಶ್ರಮವನ್ನು ಕೇವಲ ಮಾತುಗಳಿಂದ ವರ್ಣಿಸಲು ಸಾಧ್ಯವೇ ಇಲ್ಲ.  ವೈದ್ಯರು ಶ್ರಮ, ತ್ಯಾಗವೇ ಸಮಾಜಕ್ಕೆ ನೀಡಿದ ಕೊಡುಗೆ. ವೈದ್ಯನ ಆತ್ಮಸ್ಥೈರ್ಯದ ಮಾತು ರೋಗಿಯ ಕಾಯಿಲೆಯನ್ನೇ ವಾಸಿ ಮಾಡಿಬಿಡುತ್ತದೆ. ಕೊರೋನಾ ಸಂದರ್ಭದಲ್ಲಿ ತಮಗೆ ಕಷ್ಟ ಎನಿಸಿದರೂ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ ಎಂದರು.

ಹಳ್ಳಿಗೆ ಹೋದ ವೈದ್ಯರು, ಕೊರೋನಾವನ್ನೇ ತಡೆದರು!

ತಮ್ಮ ಕುಟುಂಬಗಳಿಂದ ದೂರ ಉಳಿದು ಸೇವೆ ಮಾಡಿದ್ದಾರೆ. ವೈದ್ಯರ ಜವಾಬ್ದಾರಿ ಅತ್ಯಂತ ಕಷ್ಟದಾಯಕವಾದದ್ದು. ಹಗಲು ರಾತ್ರಿ ಲೆಕ್ಕಿಸದೆ ಸಮಾಜಕ್ಕೆ ಸಮಯ ಮಿಸಲಿಟ್ಟಿದ್ದಾರೆ.  ಸದಾ ಹೀಗೆ ವೈದ್ಯರ ಸೇವೆ ಮುಂದುವರಿಯಲಿ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ  ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!