ನಮ್ಮ ಮೆಟ್ರೋ ಪ್ರಯಾಣಿಕರಿಗೆ ವೀಕೆಂಡ್ ಶಾಕ್

Published : Jun 30, 2021, 06:18 PM IST
ನಮ್ಮ ಮೆಟ್ರೋ ಪ್ರಯಾಣಿಕರಿಗೆ ವೀಕೆಂಡ್ ಶಾಕ್

ಸಾರಾಂಶ

* ಮೆಟ್ರೋ ಸಂಚಾರದ ಅವಧಿ ವಿಸ್ತರಣೆ  * ಆದ್ರೆ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ವೀಕೆಂಡ್ ಶಾಕ್ * ಈ ಬಗ್ಗೆ ಸುತ್ತೋಲೆ ಹೊಡಿಸಿರುವ ಬಿಎಂಆರ್​ಸಿಎಲ್

ಬೆಂಗಳೂರು, (ಜೂನ್.30): ಅನ್ ಲಾಕ್ 3.0 ಹಿನ್ನೆಲೆ ಮೆಟ್ರೋ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ. ಆದ್ರೆ, ವೀಕೆಂಡ್‌ನಲ್ಲಿ ಮೆಟ್ರೋ ಓಡಾಟ ಇರಲ್ಲ. 

ಹೌದು...ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್​ಸಿಎಲ್, ನಾಳೆ (ಜುಲೈ.01) ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಸಂಚಾರ ಇರಲಿದೆ.  

ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್

ಜನದಟ್ಟಣೆ ಸಂದರ್ಭದಲ್ಲಿ 5 ‌ನಿಮಿಷಕ್ಕೊಂದು ಓಡಾಟ ನಡೆಸಲಿದೆ. ಜನದಟ್ಟಣೆ ಇಲ್ಲದ ವೇಳೆ 15 ನಿಮಿಷಕ್ಕೊಂದು ಮೆಟ್ರೋ ಓಡಾಟ ನಡೆಸಲಿದೆ 
 
ಆದ್ರೆ, ಶನಿವಾರ ಮತ್ತು ಭಾನುವಾರ ನಮ್ಮ ಮೆಟ್ರೋ ಸಂಚಾರವಿಲ್ಲ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಮೆಟ್ರೋ ಓಡಾಟ ಇರಲ್ಲ. ಎಂದು ಬಿಎಂಆರ್​ಸಿಎಲ್ ಸುತ್ತೋಲೆ ಹೊರಡಿಸಿದೆ.

ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತಗೊಳ್ಳಲಿದೆ. ಇದರಿಂದ ನಮ್ಮ ಮೆಟ್ರೋ ಪ್ರಯಾಣಿಕರು ವೀಕೆಂಡ್‌ನಲ್ಲಿ ಮೆಟ್ರೋ ಕಡೆ ತಲೆ ಹಾಕಬೇಡಿ.

PREV
click me!

Recommended Stories

ಬರವನ್ನೇ ಹಾಸಿ ಹೊದ್ದ ಜಗಳೂರೇಕೆ ಕಾಣ್ತಿಲ್ಲ? ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿಲ್ಲ ಸ್ಥಾನ!
ಗೃಹಲಕ್ಷ್ಮಿಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ವಿಧಾನಸೌಧ, ಸುವರ್ಣಸೌಧ, ಮೈಸೂರು ಅರಮನೆ!