ನಾರಾಯಣ ಗೌಡ, ವಿಜಯೇಂದ್ರ ಕುಂಟೆತ್ತುಗಳು ಎಂದ ಎಚ್‌ಕೆ ಕುಮಾರಸ್ವಾಮಿ

By Web Desk  |  First Published Nov 24, 2019, 12:59 PM IST

ವಿಜಯೇಂದ್ರ ಹಾಗೂ ಕೆ. ಸಿ. ನಾರಾಯಣ ಗೌಡ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಪರ ಮತಬೇಟೆ ನಡೆಸಿದ್ದಾರೆ.


ಮಂಡ್ಯ(ನ.24): ವಿಜಯೇಂದ್ರ ಹಾಗೂ ಕೆ. ಸಿ. ನಾರಾಯಣ ಗೌಡ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಪರ ಮತಬೇಟೆ ನಡೆಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಪ್ರಚಾರ ನಡೆಸಿದ್ದಾರೆ. ಕೆ.ಆರ್.ಪೇಟೆಯ ಕಸಬ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಚಾರ ನಡೆಸಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Tap to resize

Latest Videos

undefined

ಸಿದ್ದು ಆಡಳಿತ ಹಾಡಿ ಹೊಗಳಿದ ಹುಣಸೂರು ಬಿಜೆಪಿ ಅಭ್ಯರ್ಥಿ

ಗಾಂಧಿನಗರದಲ್ಲಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ದೇವರಾಜು ಸೋತರೆ ಅದು‌ ಪ್ರಜಾಪ್ರಭುತ್ವದ ವಿರೋಧಿಯಾಗುತ್ತದೆ. ಲಿಂಗಾಯಿತ ಸಮುದಾಯದ ಒಂದೇ ಒಂದು ಮತ ಬೇರೆಯವರಿಗೆ ನೀಡಬಾರದು ಎಂದು ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಜಾತಿ ಮತಗಳ ಆಧಾರದ ಮೇಲೆ ಮತ ಕೇಳಬಾರದು. ಹೀಗಾಗಿ ಸಿಎಂ ಹೇಳಿಕೆ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ವಿಜಯೇಂದ್ರ, ನಾರಾಯಣಗೌಡ ಜೋಡೆತ್ತು ಎಂಬ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವು ಜೋಡೆತ್ತುಗಳಲ್ಲ ಕುಂಟೆತ್ತುಗಳು. ಜನರಿಗೆ ಯಾರು ದುಡಿಯುವ ಎತ್ತುಗಳು ಅಂತ ಗೊತ್ತು. ಯಾರಿಗೆ ಮತ ಹಾಕಬೇಕು ಎಂಬುದು ಅವರಿಗೆ ಗೊತ್ತು. ಗೆದ್ದ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗುವುದು ಸ್ವಾಭಿಮಾನವೇ..? ಎಂದು ಪ್ರಶ್ನಿಸಿದ್ದಾರೆ.

ಮಂಡ್ಯ ಪಾಲಿನ ಕರಾಳದಿನಕ್ಕಿಂದು ಒಂದುವರ್ಷ

ಯಾವ ಆಧಾರದ ಮೇಲೆ ನಾರಾಯಣಗೌಡ ಮತ ಕೇಳ್ತಾರೆ ? ಎಂದು ಕೇಳಿದ್ದಾರೆ. ಗೆದ್ದರೆ ಅನರ್ಹರನ್ನ  ಮಂತ್ರಿ ಮಾಡ್ತೀವಿ ಎಂದು ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅನರ್ಹರು ಗೆದ್ದರೆ ತಾನೇ ಸಚಿವರಾಗೋದು..? 15 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲೋಕೆ ಸಾಧ್ಯನಾ..? ಅನರ್ಹರನ್ನ‌ ಬಿಜೆಪಿ ನಾಯಕರು ಗೆಲ್ಲಿಸಲು ಸಾಧ್ಯ ಆಗಲಿದೆಯಾ..? ಗೆಲ್ಲಲು ಆಗದಿರೋದಕ್ಕೆ ಈ ರೀತಿ ಮಂತ್ರಿ ಮಾಡ್ತೀವಿ ಅಂತ ಪ್ರಚಾರ ಮಾಡ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕೆ.ಆರ್. ಪೇಟೆಯಲ್ಲಿ ಇತಿಹಾಸ ನಿರ್ಮಿಸಲಿದೆ BJP: ಬಿ. ವೈ. ವಿಜಯೇಂದ್ರ

ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!