ಕರ್ನಾಟಕದಲ್ಲಿ ದಾಸಶ್ರೇಷ್ಠರು ಮಾತ್ರವಲ್ಲದೆ ಮೈಸೂರು ಒಡೆಯರು ಕೂಡ ಸಂಗೀತಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಜಯಚಾಮರಾಜ ಒಡೆಯರ್ ಅವರು ಸಂಗೀತ ಸಂಯೋಜಿಸಿದ ಹಾಡುಗಳನ್ನು ಸುಕನ್ಯಾ ಪ್ರಭಾಕರ್ ಅವರು ಹಾಡಲಿದ್ದಾರೆ. ನಾವು ಈ ಕಾರ್ಯಕ್ರಮದ ಮೂಲಕ ವಿಶ್ವದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಮೈಸೂರು(ನ.09): ಕೇಂದ್ರ ಸರ್ಕಾರದಿಂದ ಕರ್ನಾಟಕ ಸಂಗೀತ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮವನ್ನು ಪ್ರತಿ ವರ್ಷ ನವೆಂಬರ್ ಮೊದಲ ವಾರಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಇನ್ ಕ್ರೆಡಿಬಲ್ ಇಂಡಿಯಾ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಮೈಸೂರು ಸಂಗೀತ ಸುಗಂಧ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
undefined
ಸಿಎಂ ಪತ್ನಿ ಪ್ರಕರಣದ ಎಫೆಕ್ಟ್: ಮುಡಾ ಎಲ್ಲ 50:50 ಸೈಟ್ ರದ್ದು!
ಕನ್ನಡವು ಭಕ್ತಿ ಸಂಗೀತದ ಮೂಲಕ ಜನರ ಹೃದಯದ ಅಂತರಾಳ ಮುಟ್ಟಿದೆ. ಕರ್ನಾಟಕದಲ್ಲಿ ಪುರಂದರದಾಸರ ಹಾಡಿನಲ್ಲಿರುವ ಪುರಂದರ ವಿಠಲನ ಹೆಸರು ಸದಾ ಸ್ಮರಣೀಯ. ಪುರಂದರದಾಸರು, ಕನಕದಾಸರು, ವಾದಿರಾಜರು ಸೇರಿ ಅನೇಕರು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಕರ್ನಾಟಕದಲ್ಲಿ ದಾಸಶ್ರೇಷ್ಠರು ಮಾತ್ರವಲ್ಲದೆ ಮೈಸೂರು ಒಡೆಯರು ಕೂಡ ಸಂಗೀತಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಜಯಚಾಮರಾಜ ಒಡೆಯರ್ ಅವರು ಸಂಗೀತ ಸಂಯೋಜಿಸಿದ ಹಾಡುಗಳನ್ನು ಸುಕನ್ಯಾ ಪ್ರಭಾಕರ್ ಅವರು ಹಾಡಲಿದ್ದಾರೆ. ನಾವು ಈ ಕಾರ್ಯಕ್ರಮದ ಮೂಲಕ ವಿಶ್ವದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಪುರಂದರದಾಸರ ಕೀರ್ತನೆಯಲ್ಲಿನ ಕೆಲವೊಂದು ಪದಗಳು ಅಷ್ಟು ಅದ್ಭುತವಾಗಿವೆ. ಅವರು ಹಾಡಿದ ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ? ಹಾಡು ಅಷ್ಟು ಅಪ್ಯಾಯಮಾನವಾಗಿದೆ. ಯೋಗ್ಯರಾಗಿ, ಭೋಗ ರಾಗಿ ಎಂಬ ಪದವು ಧಾನ್ಯದ ಯೋಗ್ಯತೆ ಮತ್ತು ದಾನ ಕೊಡುವವರ ಯೋಗ್ಯವನ್ನು ಎತ್ತಿ ತೋರಿಸಿದೆ. ನಾನು ಆಗಾಗ ಈ ಹಾಡನ್ನು ಕೇಳುತ್ತಿರುತ್ತೇನೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರ ಎರಡು ಘೋಷಣೆಗಳನ್ನು ಆಧರಿಸಿ ಅನೇಕ ಕಾರ್ಯಕ್ರಮಗಳನ್ನು ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಹಮ್ಮಿಕೊಂಡಿದ್ದೇವೆ. ಏಕ ಭಾರತ್, ಶ್ರೇಷ್ಠ ಭಾರತ್, ವೋಕಲ್ ಬಿ ಲೋಕಲ್ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜಮನೆತನದ ಮೇಲೆ ರಾಹುಲ್ ಗಾಂಧಿ 'ಲಂಚ' ಆರೋಪ, ಯದುವೀರ್ ಸೇರಿ ಹಲವರ ಟೀಕೆ
ನಾವು ಆರ್ಥಿಕ ಸಬಲೀಕರಣ ಆಗಬೇಕು, ನಮ್ಮ ಪರಂಪರೆ, ಇತಿಹಾಸ, ಸಂಸ್ಕೃತಿ ಸಂರಕ್ಷಿಸಬೇಕು. ಭಾರತವು ಬಹುಭಾಷೆ, ಬಹು ಸಂಸ್ಕೃತಿ ಒಳಗೊಂಡಿದೆ. ಏಕ ಭಾರತ ಶ್ರೇಷ್ಠ ಭಾರತ ಕಲ್ಪನೆ ಪ್ರಮುಖವಾಗಿ ದಕ್ಷಿಣ ರಾಜ್ಯಗಳನ್ನು ಕೇಂದ್ರೀಕರಿಸಿ ಹೇಳಲಾಗಿದೆ. ಅಖಂಡ ಭಾರತದ ಕಲ್ಪನೆಯನ್ನು ಒಳಗೊಂಡಿದೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ವೈವಿಧ್ಯತೆ ಇದೆ. ಕರಕುಶಕಲ ಕಲೆ, ಆಹಾರ ಪದ್ಧತಿ ಎಲ್ಲವೂ ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನವಾಗಿ ಮತ್ತು ವೈವಿಧ್ಯಮಯವಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಸುರೇಶ್ ಗೋಪಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸುಮನ್ ಬಿರ್ಲಾ ಇದ್ದರು.