ನಾಡಪ್ರಭು ಕೆಂಪೇಗೌಡ ಬಡಾವಣೆಯ 9 ಬ್ಲಾಕ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಡಿಎ ನಿಗದಿತ ಗಡುವನ್ನು ಪಾಲಿಸದೆ, ಕೇವಲ ಒಂದು ಬ್ಲಾಕ್‌ನಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಳಿಸಿದೆ. ರಸ್ತೆ, ವಿದ್ಯುತ್, ನೀರು ಮತ್ತು ಒಳಚರಂಡಿ ಸಮಸ್ಯೆಗಳಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಬೆಂಗಳೂರು (ನ.08): ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯ ಸೆಪ್ಟೆಂಬರ್ 2023 ರಂದು ಕೊಟ್ಟ 14 ತಿಂಗಳುಗಳ ಗಡುವು ಅಂತ್ಯವಾದರೂ ನಾಡಪ್ರಭು ಕೆಂಪೇಗೌಡ ಬಡಾವಣೆಯ 9 ಬ್ಲಾಕ್ ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಿಫಲ. ಕೇವಲ ಒಂದು ಬ್ಲಾಕ್ ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗಿದೆ. ಇಲ್ಲಿ ನಿವೇಶನ ಖರೀದಿ ಮಾಡಿದವರಿಗೆ ಮನೆ ಕಟ್ಟಲೂ ಆಗುತ್ತಿಲ್ಲ, ಕಷ್ಟ ಪಟ್ಟು ಮನೆ ಕಟ್ಟಿದರೂ ಮೂಲ ಸೌಕರ್ಯ ಸಿಗದೇ ವಾಸ ಮಾಡುವುದಕ್ಕೂ ಆಗುತ್ತಿಲ್ಲ.
ಕೆಂಪೇಗೌಡ ಬಡಾವಣೆಯ 9 ಬ್ಲಾಕ್ ಗಳಲ್ಲಿ ಎಲ್ಲಾ ಕಾಮಗಾರಿಗಳನ್ನು ಈಗಾಗಲೇ ಪ್ರಾಧಿಕಾರವು 14 ತಿಂಗಳು ಅಂತಿಮ ಗಡುವಿನೊಳಗೆ ಪೂರ್ಣಗೊಳಿಸಲಾಗದೆ ಕೇವಲ ಬಡಾವಣೆಯ ಬ್ಲಾಕ್ 7ರಲ್ಲಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಲ್ಲಿಯ ಕಾಮಗಾರಿಗಳನ್ನು 80% ಭಾಗಶಃ ಪೂರ್ಣಗೊಳಿಸಿ ಪ್ರಾಧಿಕಾರವು ಅರ್ಜಿ ಸಮಿತಿಯ ಛೀಮಾರಿ ಇಂದ ತಪ್ಪಿಸಿಕೊಳ್ಳಲು ಸಂಪೂರ್ಣ ಬಡಾವಣೆಯ ಎಲ್ಲಾ ಮೂಲಭೂತ ಸೌಕರ್ಯಗಳು 80% ಪೂರ್ಣಗೊಂಡಿದೆ. ರಸ್ತೆ ಡಾಂಬರಿಕರಣದ ಕಾಮಗಾರಿಯು ಬಹಳಷ್ಟು ಬ್ಲಾಕ್ ಗಳಲ್ಲಿ ತ್ವರಿತವಾಗಿ ನಡೆಯುತ್ತಿದೆ ಎಂದು ಬಿಂಬಿಸಲು ಪ್ರಯತ್ನ ಪಡುತ್ತಿದೆ. ಕೇವಲ ಬ್ಲಾಕ್ 7 ರಲ್ಲಿ ಮಾತ್ರ ಎಲ್ಲಾ ರೀತಿಯ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಬ್ಲಾಕ್ 5 ಮತ್ತು 6 ರ ರಸ್ತೆಯ ಕಾಮಗಾರಿಯು ಕುಂಟುತ್ತಾ ಸಾಗಿದೆ ಅಲ್ಲದೆ ಉಳಿದ 6 ಬ್ಲಾಕ್ ಗಳ ಕಾಮಗಾರಿಗಳು ಪೂರ್ಣಗೊಳ್ಳಲು ಮತ್ತಷ್ಟು ವರ್ಷಗಳು ಬೇಕಾಗುವ ಪರಿಸ್ಥಿತಿ ಇದೆ.
undefined
ರಸ್ತೆ,ವಿದ್ಯುತ್, ನೀರು ಸರಬರಾಜುಗಳ, ಚರಂಡಿ ವ್ಯವಸ್ಥೆಗಳ ಕೊರತೆಯಿಂದಾಗಿ 29,000 ನಿವೇಶನಗಳಲ್ಲಿ ಕೇವಲ 20 ರಿಂದ 30 ಮನೆಗಳ ನಿರ್ಮಾಣವಾಗುತ್ತಿದೆ. ಮನೆ ಕಟ್ಟಲು ಮುಂದೆ ಬರುವವರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಪ್ರಾಧಿಕಾರ ಹೇಳಿಕೊಳ್ಳುತ್ತದೆ ಆದರೆ ಭರವಸೆಗಳು ಭರವಸೆಯಾಗಿ ಉಳಿದಿವೆ ಹಾಗೂ ನಿವೇಶನದಾರರು ಮೂಲಭೂತ ಸೌಕರ್ಯಗಳ ಕೊರತೆಯಲ್ಲಿಯೇ ಮನೆ ಕಟ್ಟಿ ವಾಸಮಾಡಬೇಕಾದ ಪರಿಸ್ಥಿತಿ ಇದೆ.
ಇದನ್ನೂ ಓದಿ: ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾ: ಬಿಡಿಎ, ಬಿಎಂಆರ್‌ಡಿಎ ಹೆಸರಿನಲ್ಲಿ 3,000ಕ್ಕೂ ಅನಧಿಕೃತ ಬಡಾವಣೆ!
1) ವಿದ್ಯುತ್ ಜಾಲವು ಸಂಪೂರ್ಣಗೊಳ್ಳದೆ ಇರುವುದರಿಂದ ಮನೆ ಕಟ್ಟತ್ತಿರುವವರ ರಸ್ತೆಯಲ್ಲಿರುವ ಫೀಡರ್ ಪಿಲ್ಲರ್ ನಿಂದ ವಿದ್ಯುತ್ ಸಂಪರ್ಕವನ್ನು ಪಡೆಯಲಾಗದೆ ಬೆಸ್ಕಾಂನಿಂದ ದೂರದಿಂದ ವಿದ್ಯುತ್ ಪಡೆಯಬೇಕಾಗಿರುವುದರಿಂದ ಹೆಚ್ಚುವರಿಯಾಗಿ 20-30,000 ಖರ್ಚು ಮಾಡಬೇಕಾಗಿದೆ. ಒಂದು ವಿದ್ಯುತ್ ಉಪ ಕೇಂದ್ರವು ನಿರ್ಮಾಣ ಹಂತದಲ್ಲಿದೆ ಕಳೆದ ಎರಡುವರೆ ವರ್ಷಗಳಿಂದ ಆದರೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ಬಡಾವಣೆಯಾದ್ಯಂತ ಬಿಡಿಎ ಜಾಲದಲ್ಲಿ ವಿದ್ಯುತ್ ಹರಿಯದೆ ಇರುವುದರಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆಯುವುದು ಅನಿವಾರ್ಯವಾಗಿದೆ. ಬೀದಿ ದೀಪಗಳು ಕೇವಲ ಮನೆ ಕಟ್ಟುತ್ತಿರುವ ರಸ್ತೆಯಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ ಮತ್ತು ಅದರ ವಿದ್ಯುತ್ ಸಂಪರ್ಕವನ್ನು ಮನೆ ಕಟ್ಟುತ್ತಿರುವವರ ಮೀಟರ್ಗೆ ಸಂಪರ್ಕಿಸಲಾಗುತ್ತಿದೆ.
2) ಬಡಾವಣೆಯಾದ್ಯಂತ ಇನ್ನೂ ಮಣ್ಣಿನ ಕಚ್ಚಾ ರಸ್ತೆಗಳೆ ಇರುವುದರಿಂದ ಸಾಮಗ್ರಿಗಳನ್ನು ಸಾಗಿಸಲು ಮತ್ತು ವಾಸ ಮಾಡುತ್ತಿರುವವರು ಪ್ರತಿದಿನ ರಸ್ತೆಯನ್ನು ಉಪಯೋಗಿಸಲು ತೊಂದರೆಯಾಗುತ್ತಿದೆ ಅದು ಮಳೆಗಾಲದಲ್ಲಿ ಉಪಯೋಗಿಸಲು ಸಾಧ್ಯವೇ ಆಗದ ಪರಿಸ್ಥಿತಿಯನ್ನು ಹೊಂದಿದೆ. ಕಳೆದ 8 ತಿಂಗಳ ಹಿಂದೆ ಬಡಾವಣೆಯ ಬ್ಲಾಕ್ 5,6,7 ಕ್ಕೆ ಡಾಂಬರೀಕರಣಕ್ಕಾಗಿ ಟೆಂಡರ್ ಅನ್ನು ಕರೆಯಲಾಗಿತ್ತು ಆದರೆ ಕೇವಲ ಬ್ಲಾಕ್ 7 ರಲ್ಲಿ ಕಾಮಗಾರಿಯು ನಡೆಯುತ್ತಿದೆ,ಬ್ಲಾಕ್ 6 ರಲ್ಲಿ ಈಗಷ್ಟೇ ಕಾಮಗಾರಿಯು ಪ್ರಾರಂಭವಾಗಿದೆ. ಇನ್ನು ಬ್ಲಾಕ್ 5 ರಲ್ಲಿ ಕಾಮಗಾರಿಯೂ ಈಗಷ್ಟೇ ಪ್ರಾರಂಭವಾಗಬೇಕಿದೆ. ಬಡಾವಣೆಯ 1,2,3,4,5,6,8,9 ಬ್ಲಾಕ್ ಗಳಲ್ಲಿ ಬೇರೆ ಕಾಮಗಾರಿಗಳು ಬಾಕಿ ಇರುವುದರಿಂದ ಇನ್ನೂ ಡಾಂಬರೀಕರಣದ ಟೆಂಡರನ್ನು ಕರೆಯಲಾಗಿಲ್ಲ.
3) ಮನೆ ಕಟ್ಟಿ ವಾಸಕೆ ಬಂದ ಎರಡು ಮೂರು ತಿಂಗಳಲ್ಲಿ ಮ್ಯಾನ್ ಹೋಲ್ ಗಳು ಉಕ್ಕಿ ಹರಿಯುತ್ತಿದೆ ಅದಲ್ಲದೆ ಮನೆ ಪೂರ್ಣಗೊಳ್ಳುವವರೆಗೂ ಒಳಚರಂಡಿ ವ್ಯವಸ್ಥೆಗೆ ಸಂಪರ್ಕವನ್ನು ಕಲ್ಪಿಸಲು ಅವಕಾಶವನ್ನೇ ಕೊಡುವುದಿಲ್ಲ. ಒಳಚರಂಡಿ ಜಾಲ ನಿರಂತರತೆ ಇಲ್ಲದಿರುವುದರಿಂದ ಸೋಕ್ ಪಿಟ್ಟ್ ಮಾಡಲಾಗುತ್ತಿದೆ.
4) ಮನೆ ಕಟ್ಟುವವರು ಮನೆ ಕಟ್ಟುವಾಗ ಮತ್ತು ವಾಸಕೆ ಬಂದ ನಂತರ ಬೋರ್‌ವೆಲ್ ನೀರನ್ನು ಉಪಯೋಗಿಸುವುದು ಅನಿವಾರ್ಯ. ಮನೆ ಕಟ್ಟಿ ವಾಸವಿರುವವರಿಗೆ ಕಾವೇರಿ ಅಥವಾ ಬೇರೆ ಮೂಲಗಳಿಂದ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ನೀರನ್ನು ಸರಬರಾಜು ಮಾಡುವ ಪರಿಸ್ಥಿತಿಯಲ್ಲಿಲ್ಲ. ಬಿಡಿಎ ನಿಯಮಾವಳಿಗಳ ಪ್ರಕಾರ ಮನೆ ಕಟ್ಟಲು ನೀರನ್ನು ಪೂರೈಸುವುದಿಲ್ಲ ಆದರೆ ಮನೆ ಕಟ್ಟಿದ ನಂತರವೂ ಬಡಾವಣೆಯಲ್ಲಿ ನೀರನ್ನು ಪೂರೈಸಲು ಸಾಧ್ಯವಾಗಿರುವುದಿಲ್ಲ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಊಟ ಸೇವಿಸಿದ ಬಿಬಿಎಂಪಿ ಮುಖ್ಯ ಆಯುಕ್ತ; ಮುಖ ಹೆಂಗಾಯ್ತು ನೋಡಿ!
5) ರೇರಾ ಪ್ರಾಧಿಕಾರವು ವಿಧಿಸಿದ 2018 ,2020,2021 ಗಡುವುಗಳನ್ನು ಪಾಲಿಸಲಾಗಿರುವುದಿಲ್ಲ. ಅರ್ಜಿ ಸಮಿತಿಯಿಂದಲೂ 2023ರ ಡಿಸೆಂಬರ್ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಗಡುವನ್ನು ಮೊದಲು ಪಡೆಯಲಾಗಿತ್ತು ಆದರೆ ತದನಂತರ 2024ರ ನವೆಂಬರ್ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಂತಿಮ ಗಡುವನ್ನು ನೀಡುವಂತೆ ಅರ್ಜಿ ಸಮಿತಿಗೆ ಕೋರಿರಲಾಗಿರುತ್ತದೆ ಅದರಂತೆ ಅರ್ಜಿ ಸಮಿತಿಯು 2024 ನವೆಂಬರ್ ವರೆಗೆ ಎಲ್ಲಾ 9 ಬ್ಲಾಕ್ ಗಳ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಂತಿಮ ಗಡುವು ನೀಡಿತ್ತು.
6) ಇನ್ನೂ 1300 ಎಕರೆ ಭೂ ಸ್ವಾದಿನ ಸಮಸ್ಯೆಯೂ ಬಗೆಹರಿದಿಲ್ಲ.
7) ಗುತ್ತಿಗೆದಾರರುಗಳಿಗೆ ಬಾಕಿ ಉಳಿಸಿಕೊಂಡಿರುವ ಬಾರಿ ಪಾವತಿ ಗಳಿಂದಾಗಿ ಕಾಮಗಾರಿಗಳು ನಿಂತಿದೆ ಮತ್ತು ಕೆಲವೊಂದು ಕಡೆ ಮಾತ್ರ ಕುಂಟತ್ತಾ ಸಾಗಿದೆ.