ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ರಾಜರಾಜೇಶ್ವರಿ ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸೇವಿಸಿ, ಊಟದ ಗುಣಮಟ್ಟ ಮತ್ತು ರುಚಿಯನ್ನು ಪರಿಶೀಲಿಸಿದರು. ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಸರ್ಕಾರಿ ಯೋಜನೆಗಳ ಸದುಪಯೋಗದ ಬಗ್ಗೆ ಮಾಹಿತಿ ಪಡೆದರು.
ಬೆಂಗಳೂರು (ನ.08): ಕಾಂಗ್ರೆಸ್ ಸರ್ಕಾರದಿಂದ ಆರಂಭಿಸಲಾದ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದರಲ್ಲಿ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಕಡಿಮೆ ಬೆಲೆಗೆ ಆಹಾರ ವಿತರಣೆ ಮಾಡುವ ಇಂದಿರಾ ಕ್ಯಾಂಟೀನ್ ಊಟವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇವಿಸಿದ್ದಾರೆ. ಆದರೆ, ಊಟದ ಬಗ್ಗೆ ಅವರ ಪ್ರತಿಕ್ರಿಯೆ ಹೇಗಿತ್ತು ನೀವೇ ನೋಡಿ..
ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೊಟ್ಟಿಗೆ ಪಾಳ್ಯದ ಇಂದಿರಾ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ಒಳಗೆ ದಿಢೀರನೆ ಹೋಗಿದ್ದಾರೆ. ಅಲ್ಲಿ ಊಟ ಮಾಡುತ್ತಿದ್ದ ಕಾರ್ಮಿಕರನ್ನು ಮಾತನಾಡಿಸಿ ಸರ್ಕಾರದ ಯೋಜನೆ ಸದುಪಯೋಗ ಆಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡಿದ್ದಾರೆ. ಊಟ ಮಾಡುತ್ತಿದ್ದ ಕಾರ್ಮಿಕರನ್ನು ಮಾತನಾಡಿಸಿ ಊಟದ ಗುಣಮಟ್ಟ ಹಾಗೂ ರುಚಿ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
undefined
ಇಂದಿರಾ ಕ್ಯಾಂಟೀನ್ ನಲ್ಲಿ ಮುದ್ದೆ ಊಟಕ್ಕೆ ಮೆಚ್ಚುಗೆ: ಕೊಟ್ಟಿಗೆ ಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ನಾಗರೀಕರಿಂದ ಊಟ ಗುಣಮಟ್ಟದ ಬಗ್ಗೆ ಕೇಳಿದರು. ಅದಕ್ಕೆ ನಾಗರೀಕರೊಬ್ಬರು ಪ್ರತಿಕ್ರಿಯಿಸಿ, ಇದೀಗ ಮುದ್ದೆ ನೀಡುತ್ತಿರುವುದಕ್ಕಾಗಿ ಸಂತಸ ವ್ಯಕ್ತಪಡಿಸಿ ಒಳ್ಳೆಯ ಊಟ ನೀಡುವುದಾಗಿ ತಿಳಿಸಿದರು. ನಂತರ ಕ್ಯಾಂಟೀನ್ ಸ್ವಚ್ಛತೆ ಪರಿಶೀಲಿಸಿದ ವೇಳೆ ಕಳೆದ ಎರಡು ದಿನಗಳಿಂದ ಮುದ್ದೆ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆ ಬಳಿಕ ಮುದ್ದೆ, ಸಾರು ಹಾಗೂ ಮೊಸರನ್ನದ ರುಚಿ ನೋಡಿದರು. ಗುಣಮಟ್ಟ ಕಾಪಾಟಿಕೊಂಡು ಉತ್ತಮ ರುಚಿಗೆ ನೀಡುತ್ತಿದ್ದು, ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ಗುಣಮಟ್ಟವನ್ನು ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗುವಿಗೆ ಊಟ ಕೊಡದೇ ಹೊಡೆದು ಕೊಂದ ಅಪ್ಪ!
ಕೊಟ್ಟಿಗೆ ಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಾಗರೀಕರಿಂದ ಊಟ ಗುಣಮಟ್ಟದ ಬಗ್ಗೆ ಕೇಳಿದಾಗ ಇದೀಗ ಮುದ್ದೆ ನೀಡುತ್ತಿರುವುದಕ್ಕಾಗಿ ಸಂತಸ ತಂದಿದೆ ಎಂದು ತಿಳಿಸಿದರು. pic.twitter.com/8FmXRjGFCg
— Tushar Giri Nath IAS (@BBMPCOMM)ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವಂತಪುರದ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ: ಯಶವಂತಪುರದ 950 ಮೀ. ಉದ್ದ ಎಂಇಐ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಎಂಇಐ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಕಳೆದ 1 ತಿಂಗಳಿಂದ ವೈಟ್ ಟಾಪಿಂಗ್ ಕಾಮಾಗರಿ ಪ್ರಾರಂಭಿಸಲಾಗಿದೆ. ಒಂದು ಬದಿಯ ರಸ್ತೆಯನ್ನು ಸಂಪೂರ್ಣ ಮುಚ್ಚಿ ಕಾಮಗಾರಿ ನಡೆಸಲಾಗುತ್ತಿದೆ. ಸದರಿ ರಸ್ತೆಯಲ್ಲಿ ನೀರುಗಾಲುವೆ, ಸ್ಯಾನಿಟರಿ ಲೈನ್, ಡಕ್ಟ್ ಅಳವಡಿಕೆ, ಚೇಂಬರ್, ಪಾದಚಾರಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಗೆ ವೇಗ ನೀಡಿ, ಕಾಮಗಾರಿಯ ನಡೆಯುತ್ತಿರುವ ಬಗ್ಗೆ ಪ್ರತಿ ವಾರ ವರದಿ ನೀಡಬೇಕು. ಸರಿಯಾದ ಯೋಜನೆ ರೂಪಿಸಿಕೊಂಡು ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಇದನ್ನೂ ಓದಿ: ಕ್ವಿನ್ ಸಿಟಿ ನಿರ್ಮಾಣದ ಮೊದಲ ಹಂತದ ಪ್ರಕ್ರಿಯೆಗೆ ಚಾಲನೆ: 1 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ
ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಕೇಂದ್ರ ಪರಿಶೀಲನೆ: ಸುಮ್ಮನಹಳ್ಳಿ ಬಳಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಕೇಂದ್ರದ ಪುನರ್ ನವೀಕರಣ ನಡೆಯುತ್ತಿದ್ದು, ಈ ಹಿಂದೆ 50 ನಾಯಿಗಳಿಗೆ ಎಬಿಸಿ ಮಾಡಲಾಗುತ್ತಿತ್ತು. ನವೀಕರಣ ಮಾಡಿದ ಬಳಿಕ 80 ನಾಯಿಗಳಿಗೆ ಎಬಿಸಿ ಮಾಡಬಹುದಾಗಿದ್ದು, ಒಂದು ತಿಂಗಳೊಳಗಾಗಿ ಕೆಲಸವನ್ನು ಪೂರ್ಣಗೊಳಿಸಿ ಎಬಿಸಿ ಪ್ರಾರಂಭಿಸಬೇಕು. ಕೆನೈನ್ ಡಿಸ್ಟೆಂಪರ್ ರೋಗದಿಂದ ಚೇತರಿಸಕೊಂಡ ಬೀದಿ ನಾಯಿಗಳಿಗೆ ಎಬಿಸಿ ಮಾಡುವ ಸಲುವಾಗಿ ಪ್ರತ್ಯೇಕ ಕೇಂದ್ರವಿದ್ದು, ಅದನ್ನು ಪರಿಶೀಲಿಸಿ ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಿದರು.