'ಯೋಗನಗರಿ' ಮೈಸೂರಿನವರಾದ ಆರ್. ಶರತ್ ಜೋಯಿಸ್ ಇತ್ತೀಚೆಗೆ ಯೋಗ ಶಿಕ್ಷಣ ಸಂಬಂಧ ಅಮೆರಿಕ ಪ್ರವಾಸದಲ್ಲಿದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸುವಾಗಲೇ ಉಸಿರಾಟ ತೊಂದರೆಯಿಂದ ಕುಸಿದುಬಿದ್ದು ಮೃತಪಟ್ಟರು.
ಮೈಸೂರು(ನ.13): ಖ್ಯಾತ ಪಾಪ್ ಗಾಯಕಿ ಮಡೋನಾ ಸೇರಿ ಹಲ ಪ್ರಖ್ಯಾತರಿಗೆ ಯೋಗ ತರಬೇತಿ ನೀಡಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಶಿಕ್ಷಕ, ವಿಶ್ವವಿಖ್ಯಾತ ಯೋಗಗುರು ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಆರ್. ಶರತ್ (53) ಸೋಮವಾರ ಮಧ್ಯಾಹ್ನ ಅಮೆರಿಕದ ವರ್ಜೀನಿಯಾದಲ್ಲಿ ನಿಧನರಾಗಿದ್ದಾರೆ.
'ಯೋಗನಗರಿ' ಮೈಸೂರಿನವರಾದ ಆರ್. ಶರತ್ ಜೋಯಿಸ್ ಇತ್ತೀಚೆಗೆ ಯೋಗ ಶಿಕ್ಷಣ ಸಂಬಂಧ ಅಮೆರಿಕ ಪ್ರವಾಸದಲ್ಲಿದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸುವಾಗಲೇ ಉಸಿರಾಟ ತೊಂದರೆಯಿಂದ ಕುಸಿದುಬಿದ್ದು ಮೃತಪಟ್ಟರು ಎಂದು ವರದಿಗಳು ತಿಳಿಸಿವೆ.
undefined
ಶರತ್ ಅವರಿಗೆ ತಾಯಿ ಸರಸ್ವತಿ ಜೋಯಿಸ್, ತಂದೆ ರಂಗಸ್ವಾಮಿ, ಪತ್ನಿ ಶ್ರುತಿ ಜೋಯಿಸ್, ಪುತ್ರಿ ಶ್ರದ್ದಾ ಜೋಯಿಸ್, ಪುತ್ರ ಸಂಭವ್ ಜೋಯಿಸ್ ಇದ್ದಾರೆ. ಶರತ್ ನಿಧನ ಸುದ್ದಿ ಕೇಳಿ ಭಾರತ ಮಾತ್ರವಲ್ಲದೆ ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ, ಆಸ್ಟ್ರೇಲಿಯಾ ಸೇರಿ ವಿಶ್ವಾದ್ಯಂತ ಹಲವು ಗಣ್ಯರು, ಅವರ ವಿದ್ಯಾರ್ಥಿಗಳು ಆಘಾತ ಹಾಗೂ ಶೋಕ ವ್ಯಕ್ತ ಪಡಿಸಿದ್ದಾರೆ.
ಯೋಗ ಸಮುದಾಯದ ಪಾಲಿಗೆ ಇದು ಶೋಕದ ದಿನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಪತಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶ್ರುತಿ ಶರತ್ ಅವರು ಪಾರ್ಥಿವ ಶರೀರವನ್ನು ತರಲು ಅಮೆರಿಕಗೆ ತೆರಳಿದ್ದಾರೆ.ಶುಕ್ರವಾರಮೈಸೂರಿಗೆ ವಾಪಸಾಗುವ ನಿರೀಕೆ ಇದೆ.
ಯೋಗ ಪರಂಪರೆಯ ಕೊಂಡಿ:
ವಿಶ್ವವಿಖ್ಯಾತ ಅಷ್ಟಾಂಗ ಯೋಗ ಗುರು ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗನಾದ ಶರತ್ ಅವರು 2008 ರಿಂದ ಮೈಸೂರಿನಲ್ಲಿರುವ ಕೃಷ್ಣ ಪಟ್ಟಾಭಿ ಜೋಯಿಸ್ ಅಷ್ಟಾಂಗ ಯೋಗ ಕೇಂದ್ರದ ನೇತೃತ್ವ ವಹಿಸಿಕೊಂಡಿದ್ದರು. ಶರತ್ ಅವರು ಮೈಸೂರಿನಲ್ಲಿರುವ ಇನ್ಫೋಸಿಸ್ ಬಳಿ ಶರತ್ ಯೋಗ ಕೇಂದ್ರದಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದರು.
ಯೋಗ ದಿನದಂದು ಅಂಕಲ್‌ಗಳ ಸೆಲ್ಫಿ ಆಸನ: ಲಾಡ್ ಸಭೆ ಕಂಡು ಅಧಿಕಾರಿಗಳು ಶೀರ್ಷಾಸನ
ಸದ್ಯ ಅಮೆರಿಕದಲ್ಲಿದ್ದ ಅವರು ವಿವಿಧೆಡೆ ಯೋಗ ಶಿಬಿರಗಳನ್ನು ನಡೆಸಿಕೊಡುತ್ತಿದ್ದರು. ಈ ಮಾಸಾಂತ್ಯಕ್ಕೆ ವಾಪಸ್ ಆಗಿ, ಡಿ.1ರಿಂದ ತಮ್ಮ ಕೇಂದ್ರದಲ್ಲಿ ಯೋಗ ತರಗತಿಗಳನ್ನು ನಡೆಸಲು ಉದ್ದೇಶಿಸಿದ್ದರು. ಶರತ್ ಅವರ ಯೋಗ ತರಗತಿಗೆ ಪ್ರತಿ ತಿಂಗಳು ಐದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬರುತ್ತಿದ್ದವು. ಈ ಪೈಕಿ ಅವರು 350-400 ಮಂದಿಗೆ ಅವಕಾಶ ಮಾಡಿಕೊಡುತ್ತಿದ್ದರು. ಬೆಳಗಿನ ಜಾವ 3.30 ರಿಂದ ಅವರ ಯೋಗ ತರಗತಿಗಳು ಆರಂಭವಾಗುತ್ತಿದ್ದವು. ಇದಕ್ಕೂ ಮೊದಲು ಅವರು ತಮ್ಮ ಯೋಗಾಭ್ಯಾಸ ಮುಗಿಸುತ್ತಿದ್ದರು.
ಬಾಲ್ಯದಲ್ಲಿಯೇ ಯೋಗದತ್ತ ಆಕರ್ಷಿತ ರಾಗಿದ್ದ ಅವರು ಅಜ್ಜನ ಹಾದಿಯಲ್ಲೇ ಸಾಗುತ್ತಿದ್ದರು. ಶರತ್ ಅವರ ಬಳಿ ತರಬೇತಿ ಪಡೆದವರು ಆಫ್ರಿಕಾ.ಏಷ್ಯಾ, ಯುರೋಪ್, ಆಸ್ಟ್ರೇಲಿಯಾ, ಅಮೆರಿಕ ಮೊದಲಾದ ಕಡೆ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖ್ಯಾತ ಗಾಯಕರಾದ ಮಡೋನಾ, ಸ್ಟಿಂಗ್, ಖ್ಯಾತ ನಟಿ ಗ್ವಿನತ್ ಪಲ್ಲೋ ಸೇರಿ ಹಲವು ಖ್ಯಾತ ನಾಮರಿಗೆ ಶರತ್ ಅವರು ಅಷ್ಟಾಂಗ ಯೋಗ ಕಲಿಸಿದರು. ಮಡೋನಾ ಅವರ 2000ರಲ್ಲಿ ಬಿಡುಗಡೆಯಾದ 'ದ ನೆಕ್‌ಸ್ಟ್ ಬೆಸ್ಟ್ ಥಿಂಗ್' ಚಿತ್ರದಲ್ಲಿ ಯೋಗ ಶಿಕ್ಷಕಿಯಾಗಿ ಪಾತ್ರ ನಿರ್ವಹಿಸಿದ್ದರು. ಅವರಿಗೆ ಶರತ್ ಹಠಯೋಗ, ಅಷ್ಟಾಂಗ ಯೋಗ ಕಲಿಸಿದರು. ಶರತ್ ಅವರ ಯೋಗದ ಬಗ್ಗೆ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್, ಪತ್ನಿ ಹಿಲರಿ ಕ್ಲಿಂಟನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.