ಬಿಬಿಎಂಪಿ ಅಂತಿಮ ಇ-ಖಾತಾ ಪಡೆಯಲು ಬಹು ವಿಧ ಆಯ್ಕೆ; ಆಧಾರ್ ಕಾರ್ಡ್ ಕಡ್ಡಾಯವಲ್ಲ!

By Sathish Kumar KH  |  First Published Nov 13, 2024, 12:13 PM IST

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳು ಆಧಾರ್ ಕಾರ್ಡ್ ಇಲ್ಲದಿದ್ದರೂ ಇ-ಖಾತಾ ಪಡೆಯಬಹುದು. ಪಾಸ್‌ಪೋರ್ಟ್, ಚಾಲನಾ ಪರವಾನಗಿ ಅಥವಾ ಮತದಾರರ ಗುರುತಿನ ಚೀಟಿ ಬಳಸಿ ಇ-ಖಾತಾ ಪಡೆಯುವ ವಿಧಾನ ಮತ್ತು ಅಗತ್ಯ ದಾಖಲೆಗಳ ಮಾಹಿತಿ ಇಲ್ಲಿದೆ. ಆಸ್ತಿ ಮಾರಾಟ ಮಾಡುವವರು ತುರ್ತು ಸಂದರ್ಭದಲ್ಲಿ ಸಹಾಯವಾಣಿ ಸಂಪರ್ಕಿಸಬಹುದು. 


ಬೆಂಗಳೂರು (ನ.13): ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳು ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳನ್ನು ತಕ್ಷಣವೇ ಮಾರಾಟ ಮಾಡಲು ಅಥವಾ ವರ್ಗಾಯಿಸಲು ಅಗತ್ಯವಿಲ್ಲದವರು ತಮ್ಮ ಅಂತಿಮ ಇಖಾತಾ ಪಡೆಯಲು  ಅವಸರ ಮಾಡುವ ಅಗತ್ಯವಿಲ್ಲ. ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿ ಮತ್ತು ನಂತರ ನಿಮ್ಮ ಅನುಕೂಲಕರ ಸಮಯದಲ್ಲಿ ಅಂತಿಮ ಇ-ಖಾತಾ ಪಡೆಯಬಹುದು. ಇ-ಖಾತಾ ಪಡೆಯಬೇಕಿರುವವರು ಆಧಾರ್ ಹೊಂದಿಲ್ಲದಿದ್ದರೆ, ಅಂತಹವರು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗಿ ಕೆಳಗಿನ ದಾಖಲಾತಿ ನೀಡುವ ಮೂಲಕ ಇ-ಖಾತಾ ಪಡೆಯಬಹುದು.

ಆಧಾರ್ ಇಲ್ಲದವರಿಗೆ ಇ-ಖಾತಾ ಪಡೆಯಲು ಅಗತ್ಯವಿರುವ ದಾಖಲೆಗಳು: 
* ಪಾಸ್‌ ಪೋರ್ಟ್
* ಚಾಲನಾ ಪರವಾನಗಿ
* ಮತದಾರರ ಗುರುತಿನ ಚೀಟಿ

Tap to resize

Latest Videos

undefined

ಆಧಾರ್ ಕಾರ್ಡ್ ಇಲ್ಲದವರು ಈ ಮೂರು ದಾಖಲೆಗಳಲ್ಲಿ ಯಾವುದಾದರೂ ಒಂದಿ ದಾಖಲೆಯನ್ನು ಸಲ್ಲಿಸಿ ನಿಮ್ಮ ಇ-ಖಾತಾವನ್ನು ಪಡೆದುಕೊಳ್ಳಬಹುದು. ಇನ್ನು ತುರ್ತಾಗಿ ಮಾರಾಟ/ವ್ಯವಹಾರ ಮಾಡಬೇಕಾದವರು, ತ್ವರಿತ ಅಂತಿಮ ಇಖಾತಾಗಾಗಿ ಪಾಲಿಕೆಯ ಸಹಾಯವಾಣಿ ಲಭ್ಯವಿರುತ್ತದೆ. ಇನ್ನು ಈ ಆಧಾರ್ ಕಾರ್ಡ್ ಇಲ್ಲದವರಿಗೆ ಪ್ರಸ್ತುತ ಸಹಾಯಕ‌ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಇ-ಖಾತಾವನ್ನು ಪಡೆಯಲು‌ ಮಾತ್ರ ಅವಕಾಶ ಕಲ್ಪಿಸಲಾಗಿದೆ. 1. ನೋಂದಾಯಿತ ಪ್ರಮಾಣ ಪತ್ರ ಸಂಖ್ಯೆ, 2. ಆಸ್ತಿ ತೆರಿಗೆ SAS ಸಂಖ್ಯೆ ಹಾಗೂ 3. ಬೆಸ್ಕಾಂ 10 ಅಂಕಿಯ ಖಾತೆ ಸಂಖ್ಯೆ (ಖಾಲಿ ಪ್ಲಾಟ್‌ಗಳಿಗೆ ಐಚ್ಛಿಕ) ಬೇಕಿರುತ್ತದೆ. ಉಳಿದೆಲ್ಲದರಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.

ಇದನ್ನೂ ಓದಿ: ಬೆಂಗಳೂರು ಉದ್ಯಮಿಗಳು ಬೆಚ್ಚಿ ಬೀಳುವ ಆದೇಶ ಹೊರಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತರು!

ಬಿಬಿಎಂಪಿ ಇ-ಖಾತಾ ಪಡೆಯುವುದು ಹೇಗೆ?
1. ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳನ್ನು ತಕ್ಷಣವೇ ಮಾರಾಟ ಮಾಡಲು ಅಥವಾ ವರ್ಗಾಯಿಸಲು ಅಗತ್ಯವಿಲ್ಲದ ನಾಗರಿಕರು ಅಂತಿಮ ಇಖಾತಾ ಪಡೆಯಲು  ಆತುರ ಅಗತ್ಯವಿಲ್ಲ. ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿ ಮತ್ತು ನಂತರ ನಿಮ್ಮ ಅನುಕೂಲಕರ ಸಮಯದಲ್ಲಿ ಅಂತಿಮ ಇ-ಖಾತಾ ಪಡೆಯಲು ಹೆಚ್ಚುವರಿ ಮಾಹಿತಿಯನ್ನು ಆನ್ಲೈನ್ನಲ್ಲಿ ಸಲ್ಲಿಸಿ. ತುರ್ತಾಗಿ ಮಾರಾಟ/ವ್ಯವಹಾರ ಮಾಡಬೇಕಾದವರು, ತ್ವರಿತ ಅಂತಿಮ ಇಖಾತಾಗಾಗಿ ಪಾಲಿಕೆಯ ಸಹಾಯವಾಣಿ ಲಭ್ಯವಿರುತ್ತದೆ.

2. ಪಾಲಿಕೆಯು ಪ್ರತಿಯೊಬ್ಬ ನಾಗರಿಕರು ತಾವೇ ತಮ್ಮ ಇಖಾತಾವನ್ನು ಆನ್ಲೈನ್ನಲ್ಲಿ https://BBMPeAasthi.karnataka.gov.in ನಲ್ಲಿ ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತದೆ ಮತ್ತು ವಿನಂತಿಸುತ್ತದೆ.

3. ತರಬೇತಿ ವೀಡಿಯೊ ಮೂಲಕ ಸ್ವತಃ ನೀವೇ ಇ-ಖಾತಾ ಪಡೆಯಿರಿ. (ನಾಗರಿಕನು ತಮ್ಮ ಸುತ್ತಲಿನಲ್ಲಿರುವ ಯಾರಿಂದಾದರೂ ಸಹಾಯ ಪಡೆದುಕೊಳ್ಳಬಹುದು)
ಇಂಗ್ಲೀಷ್: https://youtu.be/GL8CWsdn3wo?si=Zu_EMs3SCw5-wQwT
ಕನ್ನಡ: https://youtu.be/JR3BxET46po?si=jDoSKqy2V1IFUpf6

4. ಮೂಲಭೂತವಾಗಿ ನಾಗರಿಕರು ಆನ್ಲೈನ್ನಲ್ಲಿ ಕೆಲವೇ ಸಂಖ್ಯೆಗಳನ್ನು ನಮೂದಿಸಬೇಕು
* ನೋಂದಾಯಿತ ಡೀಡ್ ಸಂಖ್ಯೆ(ಉಪ ರಿಜಿಸ್ಟ್ರಾರ್ನಿಂದ ವಿದ್ಯುನ್ಮಾನವಾಗಿ ಪಡೆಯಲಾಗಿದೆ. ಆದರೆ ಪೂರ್ವಜರ/ಪಿತ್ರಾರ್ಜಿತ ಆಸ್ತಿಯನ್ನು ಬೈಪಾಸ್ ಮಾಡಲು ಅನುಮತಿಸಿದೆ)
* ⁠ಪಾಲಿಕೆಯ ಆಸ್ತಿ ತೆರಿಗೆ ಎಸ್.ಎ.ಎಸ್ ಸಂಖ್ಯೆ (ತೆರಿಗೆ ಡೇಟಾಬೇಸ್ನಿಂದ ವಿದ್ಯುನ್ಮಾನವಾಗಿ ಪಡೆಯಲಾಗಿದೆ)
* ⁠ಆಧಾರ್ (eKYC ಆನ್ಲೈನ್ ಮುಖೇನ ಮಾಡಲಾಗುವುದು)
* ⁠ಬೆಸ್ಕಾಂ 10-ಅಂಕಿಯ ಸಂಖ್ಯೆ (ಖಾಲಿ ಸೈಟ್ಗಳಿಗೆ ಐಚ್ಛಿಕ)

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಊಟ ಸೇವಿಸಿದ ಬಿಬಿಎಂಪಿ ಮುಖ್ಯ ಆಯುಕ್ತ; ಮುಖ ಹೆಂಗಾಯ್ತು ನೋಡಿ!

5. ನಿಮ್ಮ ಎ-ಖಾತಾವನ್ನು ಸಾಬೀತುಪಡಿಸಲು ದಾಖಲೆಗಳನ್ನು ನೀಡಲು ಪಾಲಿಕೆಯು ಪ್ರೋತ್ಸಾಹಿಸಿದರೂ ಇತರ ಪ್ರತಿಯೊಂದು ಡಾಕ್ಯುಮೆಂಟ್ ಐಚ್ಛಿಕವಾಗಿರುತ್ತದೆ. ಆ ದಾಖಲೆಗಳು ಇಲ್ಲದಿದ್ದರೂ ಅಸ್ತಿತ್ವದಲ್ಲಿರುವ ಪಾಲಿಕೆಯ ದಾಖಲೆ ಪ್ರಕಾರ ಎ-ಖಾತಾ ಅಥವಾ ಬಿ-ಖಾತಾವನ್ನು ನಾಗರಿಕರು ಪಡೆಯುತ್ತಾರೆ.

6. ಬೆಂಗಳೂರು ಒನ್ ಕೇಂದ್ರವು ನಾಗರಿಕರ ಅನುಕೂಲಕ್ಕಾಗಿ ಹೆಚ್ಚುವರಿ ಆಯ್ಕೆಯಾಗಿದೆ.

7. ಆಧಾರ್ ಇಲ್ಲದ ಯಾರಾದರೂ ಚಾಲನಾ ಪರವಾನಗಿ ಅಥವಾ ಪಾಸ್ಪೋರ್ಟ್ ಅಥವಾ ವೋಟರ್ ಗುರುತಿನ ಚೀಟಿಯೊಂದಿಗೆ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

ವಲಯವಾರು ಇ-ಖಾತಾ ಸಹಾಯವಾಣಿ ಸಂಖ್ಯೆಯ ವಿವರಗಳು:
ಇ-ಖಾತಾ ಪಡೆಯಲು ತಾಂತ್ರಿಕ ಸಮಸ್ಯೆಯಿದ್ದರೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ವಲಯವಾರು 13 ಸಹಾಯ ತಂಡಗಳನ್ನು ರಚಿಸಲಾಗಿದೆ. ಸದರಿ ಕೇಂದ್ರಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅನಗತ್ಯವಾಗಿ ಕರೆ ಮಾಡಬೇಡಿ.

ವಲಯ – ಸಹಾಯವಾಣಿ ಸಂಖ್ಯೆ
1.    ಬೊಮ್ಮನಹಳ್ಳಿ ವಲಯ: 9480683182 / 9480683712
2.    ದಾಸರಹಾಳ್ಳಿ ವಲಯ: 9480683710
3.    ಮಹಾದೇವಪುರ    ವಲಯ:  9480683718 / 9480683720
4.    ಪೂರ್ವ ವಲಯ: 9480683203
5.    ಪಶ್ಚಿಮ    ವಲಯ: 9480683653 / 9480683204
6.    ದಕ್ಷಿಣ ವಲಯ: 9480683638 / 9480683179
7.    ರಾಜರಾಜೇಶ್ವರಿ ನಗರ ವಲಯ: 9480683576 
8.    ಯಲಹಂಕ ವಲಯ: 9480683645 / 9480683516

click me!