ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, 11 ವರ್ಷದ ಬಾಲಕನನ್ನ ಬಲಿ ಪಡೆದು ದೇಹವನ್ನು ಚಿರತೆಯು ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಟಿ.ನರಸೀಪುರ (ಜ.22): ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, 11 ವರ್ಷದ ಬಾಲಕನನ್ನ ಬಲಿ ಪಡೆದು ದೇಹವನ್ನು ಚಿರತೆಯು ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಹೊರಳಹಳ್ಳಿ ಗ್ರಾಮದ ಜಯಂತ್ (11) ವರ್ಷ ಮೃತ ಬಾಲಕ. ಜಯಂತ್ ಶವಕ್ಕಾಗಿ ರಾತ್ರಿಯೆಲ್ಲಾ ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಮೃತ ವ್ಯಕ್ತಿಯ ಬಾಲಕನ ಶವ ಪತ್ತೆ ಹಚ್ಚುವ ಭರವಸೆಯನ್ನು ಡಿಸಿ ಕೆವಿ ರಾಜೇಂದ್ರ ನೀಡಿದ್ದು, ಇದೀಗ ಹೊರಳಹಳ್ಳಿ ಗ್ರಾಮದಲ್ಲಿ ಪ್ರಸ್ತುತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಮೃತ ಬಾಲಕ ದೇಹ ಪತ್ತೆ: ಘಟನಾ ಸ್ಥಳದಿಂದ 1 ಕಿಮೀ ದೂರದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದ್ದು, ಬಾಲಕನ ದೇಹವನ್ನ ವ್ಯಾಘ್ರ ಚಿರತೆ ತಿಂದು ಹಾಕಿದೆ. ಇನ್ನು ತಾಲ್ಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದ್ದು, ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
undefined
ಚಿರತೆ ದಾಳಿಗೆ 3ನೇ ಬಲಿ: ಚಿರತೆ ದಾಳಿಗೆ ತಾಲೂಕಿನಲ್ಲಿ ಈಗಾಗಲೇ ಇಬ್ಬರು ಬಲಿಯಾಗಿದ್ದು, ಈಗ ತಾಲೂಕಿನ ಕನ್ನಾಯಕನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಕನ್ನಾಯಕನಹಳ್ಳಿ ಗ್ರಾಮದ ನಿಂಗರಾಜು ಅವರ ಪತ್ನಿ ಸಿದ್ದಮ್ಮ (60) ಎಂಬವರನ್ನು ಚಿರತೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿದ್ದಮ್ಮ ಅವರು ಸಂಜೆ 6.30 ರ ಸಮಯ ದಲ್ಲಿ ಬಹಿರ್ದೆಸೆಗೆಂದು ಹೋಗಿದ್ದಾಗ ಚಿರತೆ ದಾಳಿ ನಡೆಸಿದೆ. ತಾಲೂಕಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚಿರತೆ ದಾಳಿಗೆ ಇದು ಮೂರನೇ ಬಲಿಯಾಗಿದ್ದು, ಆ.30ರಂದು ಉಕ್ಕಲಗೆರೆ ಮಂಜುನಾಥ್, ಡಿ.1ರಂದು ಎಂ. ಕೆಬ್ಬೆಹುಂಡಿಯ ಮೇಘನಾ ಎಂಬವರನ್ನು ಚಿರತೆ ಆಹುತಿ ಪಡೆದಿತ್ತು. ಮತ್ತೆ ಚಿರತೆಯು ದಾಳಿ ನಡೆಸಿ ಮತ್ತೊಂದು ಬಲಿ ಪಡೆದಿರುವುದು ಜನರಲ್ಲಿ ಮತ್ತಷ್ಟುಆತಂಕ ಹೆಚ್ಚಿಸಿದೆ.
ಕಾರ್ ಬಾನೆಟ್ ಮೇಲೆ ವ್ಯಕ್ತಿ ಇದ್ರೂ ಕಾರು ಓಡಿಸಿದ ಲೇಡಿ ಜೈಲಿಗೆ
ಬೆಲೆಬಾಳುವ ನಾಯಿಮರಿ ಹೊತ್ತೊಯ್ದ ಚಿರತೆ: ಉಪ್ಪಿನಂಗಡಿ ಸಮೀಪದ ತಣ್ಣೀರುಪಂಥ ಗ್ರಾಮದ ಅಳಕೆ ಎಂಬಲ್ಲಿ ಬುಧವಾರ ಮಧ್ಯಾಹ್ನ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮನೆಯ ವರಾಂಡದಲ್ಲಿದ್ದ ಬೆಲೆಬಾಳುವ ನಾಯಿ ಮರಿಯೊಂದನ್ನು ಹೊತ್ತೊಯ್ದ ಘಟನೆ ನಡೆದಿದೆ. ತಣ್ಣೀರುಪಂಥ ಗ್ರಾಮದ ಅಳಕೆ ಎಂಬಲ್ಲಿ ಗಣೇಶ್ ಎಂಬವರ ಮನೆಯ ವರಾಂಡದಲ್ಲಿ ಕಾಣಿಸಿಕೊಂಡ ಚಿರತೆ ವರಾಂಡದಲ್ಲಿ ಮಲಗಿದ್ದ ಹಸ್ಕಿ ಜಾತಿಯ ನಾಯಿ ಮರಿಯನ್ನು ಕಚ್ಚಿಕೊಂಡು ಹೊತ್ತೊಯ್ದಿದೆ. ಗಣೇಶ್ ಕಲ್ಲೇರಿಯಲ್ಲಿ ಅಂಗಡಿ ಹೊಂದಿದ್ದು, ಪತ್ನಿ ಪೂರ್ಣಿಮ ಕಣಿಯೂರು ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದು, ಕಚೇರಿಗೆ ಹೋಗಿದ್ದರು.
ಕನಕಪುರ ಬಾಲಕ ನಾಪತ್ತೆ ಪ್ರಕರಣ: ಬ್ರೈನ್ ಮ್ಯಾಪಿಂಗ್‌ನಿಂದ ಕೊಲೆ ರಹಸ್ಯ ಬಯಲು
ಪುಟ್ಟಮಗ ಶಾಲೆಗೆ ಹೋಗಿದ್ದು, ಮನೆಯಲ್ಲಿ ಗಣೇಶ್ ಒಬ್ಬರೇ ಇದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ನಾಯಿ ಮೇಲೆ ಅಪಾರ ಪ್ರೀತಿ ಹೊಂದಿದ್ದ ಗಣೇಶ್ ಅವರು ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಹಸ್ಕಿ ಜಾತಿಯ ನಾಯಿ ಮರಿಯನ್ನು 30,000 ರು. ಬೆಲೆ ತೆತ್ತು ಖರೀದಿಸಿದ್ದರು. ತನ್ನ ಮನೆಯ ವರಾಂಡದಲ್ಲಿ ವಿಶ್ರಮಿಸುತ್ತಿದ್ದ ನಾಯಿಗೆ ಆಹಾರ ಹಾಕಿ ಮನೆಯ ಒಳಗೆ ಹೋಗಿದ್ದ ವೇಳೆ ವರಾಂಡಕ್ಕೆ ನುಗ್ಗಿದ ಚಿರತೆಯು ನಾಯಿಯನ್ನು ಕಚ್ಚಿ ಹೊತ್ತೊಯ್ದಿದೆ. ನಾಯಿಯನ್ನು ಹೊತ್ತೊಯ್ಯುವ ಮೊದಲು ವರಾಂಡದ ಗ್ರಾನೈಟ್ ಮೇಲೆ ನಡೆಯಲಾರದೆ ಜಾರುತ್ತಿದ್ದ ಚಿರತೆ ನಾಯಿಯನ್ನು ಕಚ್ಚಿಕೊಂಡು ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿ ಗಣೇಶ್ ಅವರು ನಷ್ಟಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.