ಕಾಡಂಚಿನ ಗ್ರಾಮಗಳ ನೆರವಿನ 'ನಮ್ಮ ಸಂಘದ' ಪಿ ಸುರೇಶ್ ನಿಧನ

Suvarna News   | Asianet News
Published : May 13, 2021, 02:08 PM ISTUpdated : May 13, 2021, 02:12 PM IST
ಕಾಡಂಚಿನ ಗ್ರಾಮಗಳ ನೆರವಿನ 'ನಮ್ಮ ಸಂಘದ' ಪಿ ಸುರೇಶ್ ನಿಧನ

ಸಾರಾಂಶ

ಬಂಡೀಪುರದಲ್ಲಿರುವ ‘ನಮ್ಮ ಸಂಘ’ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಕೋವಿಡ್ಗೆ ಬಲ  ಬಂಡೀಪುರ ಕಾಡಂಚಿನ 200 ಹಳ್ಳಿಗಳ 40 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ  ‘ಏಷ್ಯಾ ಸ್ಯಾಂಚುರಿ’ ನೀಡುವ ಪರಿಸರ ಸಂರಕ್ಷಣಾ ಪ್ರಶಸ್ತಿ ವಿಜೇತ

ಮೈಸೂರು (ಮೇ.13): ಬಂಡೀಪುರದಲ್ಲಿರುವ ‘ನಮ್ಮ ಸಂಘ’ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. 

‘ನಮ್ಮ ಸಂಘ’ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ  ಪಿ.ಸುರೇಶ್‌   (45) ಇಂದು ನಗರದ ವಿದ್ಯಾರಣ್ಯ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ನಿಧನರಾದರು.  ಮೃತರ ಅಂತ್ಯಕ್ರಿಯೆಯು ಕೋವಿಡ್‌ ನಿಯಮಗಳ ಪ್ರಕಾರ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿ ನೆರವೇರಿತು.

‘ಗ್ರೀನ್‌ ಆಸ್ಕರ್‌’ ಪ್ರಶಸ್ತಿ ಪುರಸ್ಕೃತರಾದ ಕೃಪಾಕರ ಸೇನಾನಿ ಅವರು ಕಾಡಿನ ಸಂರಕ್ಷಣೆಗಾಗಿ ಬಂಡೀಪುರದಲ್ಲಿ ಸ್ಥಾಪಿಸಿರುವ ‘ನಮ್ಮ ಸಂಘ’ದಲ್ಲಿ ಸುರೇಶ್  17 ವರ್ಷ ಸೇವೆ ಸಲ್ಲಿಸಿದ್ದರು.

ಸೆಕೆಂಡ್ ಡೋಸ್‌ಗೂ ಇಲ್ಲ ಲಸಿಕೆ : ಎಲ್ಲಾ ಕಡೆ ನೋ ಸ್ಟಾಕ್ ಬೋರ್ಡ್

 ಬಂಡೀಪುರ ಕಾಡಂಚಿನ 200 ಹಳ್ಳಿಗಳ 40 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲು ನಿರಂತರವಾಗಿ ದುಡಿದಿದ್ದರು. ಈ ಸಾಧನೆಗಾಗಿ ‘ಏಷ್ಯಾ ಸ್ಯಾಂಚುರಿ’ ನೀಡುವ ಪರಿಸರ ಸಂರಕ್ಷಣಾ ಪ್ರಶಸ್ತಿಗೂ ಭಾಜನರಾಗಿದ್ದರು. 

ಮೈಸೂರು ಜ್ಯುಬಿಲಿಯಂಟ್‌ಲ್ಲಿ ಜೀವರಕ್ಷಕ ರೆಮ್‌ಡೆಸಿವಿರ್ ಉತ್ಪಾದನೆ ಹೆಚ್ಚಳಕ್ಕೆ ಸೂಚನೆ .

ಕೇಂದ್ರದಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿದ್ದ ಜೈರಾಮ್‌ ರಮೇಶ್‌ ಅವರ ಮೆಚ್ಚುಗೆಗೂ ಪಾತ್ರರಾಗಿದ್ದ ಸುರೇಶ್ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಸ್ಥೆಯ ಮೂಲಕ ನೆರವಾಗಿದ್ದರು.

ಸಮಾಜದ ಹಿತಕ್ಕಾಗಿ ಸದಾ ಬದ್ಧತೆ, ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಅವರು,  ಹತ್ತಾರು ಸಮಾಜಮುಖಿ ಕೆಲಸಗಳಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಹೆಸರಾಗಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!