
ಮೈಸೂರು (ಆ.25): ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಗರದ ದೊಡ್ಡಕೆರೆ ಮೈದಾನದಲ್ಲಿ ಸೆ.26ರಿಂದ ಡಿ.24 ರವರೆಗೆ ಒಟ್ಟು 90 ದಿನಗಳವರೆಗೆ ದಸರಾ ವಸ್ತು ಪ್ರದರ್ಶನ ನಡೆಯಲಿದ್ದು, ಈ ಬಾರಿ ಪುನೀತ್ ರಾಜಕುಮಾರ್ ಅವರ ಮೂರು ಮರಳಿನ ಕಲಾಕೃತಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಮಹತ್ಮ ಗಾಂಧೀಜಿ, ವೀರ ಸಾವರ್ಕರ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಕಲಾಕೃತಿ ನಿರ್ಮಿಸಲಾಗುವುದು ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಹೇಳಿದರು.
ಪುನೀತ್ ರಾಜಕುಮಾರ್ ನೆನಪಿಗಾಗಿ ಸ್ಯಾಂಡ್ ಮ್ಯೂಸಿಯಂ ಮತ್ತು ಯೋಗ 3ಡಿ ವೀಡಿಯೊ ಮ್ಯಾಪಿಂಗ್ ನಿರ್ಮಿಸಲಾಗುತ್ತಿದೆ. ವಿಶ್ವ ಯೋಗ ದಿನ ಕಾರ್ಯಕ್ರಮವು ಮೈಸೂರಿನಲ್ಲಿ ನಡೆದ ಹಿನ್ನೆಲೆಯಲ್ಲಿ ಅದರ ನೆನಪಿನಾರ್ಥ ಪ್ರಧಾನಿ ನರೇಂದ್ರ ಮೋದಿ ಅವರ ಮರಳು ಶಿಲ್ಪ ಕಲಾಕೃತಿಯನ್ನು ರಚಿಸುವ ಉದ್ದೇಶಿದ್ದು, ಸದ್ಯದಲ್ಲಿಯೇ ತೀರ್ಮಾನವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಲ್ಲದೇ, ದಸರಾ ಮಹೋತ್ಸವ ವೇಳೆ ವಿವಿಧ ದಸರಾ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಮತ್ತು ಸಚಿವರು ಉದ್ಘಾಟಿಸುವರು. ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲರಿ ಅನಾವರಣಗೊಳಿಸಲಾಗುವುದು.
ಮುದ್ದಿನ ನಾಯಿಮರಿ ಸಾವು; ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದ ಮೈಸೂರಿನ ಇಂಜಿನೀಯರ್!
ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ಸಸಿಗಳನ್ನು ಹಾಗೂ ಕೃಷಿ ಪರಿಕರಗಳನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ನೀಡುವುದಾಗಿ ಹೇಳಿದರು. ವಸ್ತು ಪ್ರದರ್ಶನ ಎದುರು ಡಿಜಿಟಲ್ ಆಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ವಸ್ತು ಪ್ರದರ್ಶನದ ಸಂಪೂರ್ಣ ನಕ್ಷೆ ಮತ್ತು ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮವಹಿಸುವುದಾಗಿ ಅವರು ವಿವರಿಸಿದರು.
ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ನಿಗಮ ಮಂಡಳಿಯ ಕಾರ್ಯಗಳನ್ನು ತಿಳಿಸಲಾಗುವುದು. ಗ್ಲೋಬಲ್ ಟೆಂಡರ್ ಮೂಲಕ ಎ, ಬಿ ಮತ್ತು ಸಿ ಬ್ಲಾಕ್ ಮಳಿಗೆ ತೆರೆದು ವಿಶೇಷ ಆಕರ್ಷಣೆಯ ಮಳಿಗೆ ತೆರೆಯಲಾಗುತ್ತಿದೆ ಎಂದು ಅವರು ಹೇಳಿದರು. ಮುಖ್ಯದ್ವಾರದ ಪ್ರವೇಶ ಶುಲ್ಕ, ವಸೂಲಾತಿ, ವಾಣಿಜ್ಯ ಮಳಿಗೆ ನಿರ್ಮಿಸಿ ಹಂಚಿಕೆ ಮಾಡುವುದು, ತಿಂಡಿ- ತಿನಿಸು ಮಾರಾಟ ಮಳಿಗೆ ನಿರ್ವಹಿಸುವುದು.
ಕಬಿನಿ ಜಲಾಶಯಕ್ಕೆ ಸಚಿವ ಗೋವಿಂದ ಕಾರಜೋಳ ಭೇಟಿ: ಪರಿಶೀಲನೆ
ಮನೋರಂಜನಾ ಪಾರ್ಕ್, ಸ್ಕೈಟ್ರ್ಯಾಕ್ ಮನೋ ರೈಲು, ದೋಣಿ ವಿಹಾರ ಮತ್ತು ಜಾಹೀರಾತು ಈವೆಂಟ್ಸ್ ಹಾಗೂ ವ್ಯವಸ್ಥೆ ನಿರ್ವಹಣೆ ವಸೂಲಾತಿ ಹಕ್ಕನ್ನು ಇ ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಪ್ರಾಧಿಕಾರದಿಂದ ಕನಿಷ್ಠ ಟೆಂಡರ್ ಮೊತ್ತ . 8.07 ಕೋಟಿಗೆ ಟೆಂಡರ್ ಆಹ್ವಾನಿಸಲಾಗಿದೆ. ಸೆ. 7 ರಂದು ತಾಂತ್ರಿಕ್ ಬಿಡ್ ಮತ್ತು 9 ರಂದು ಆರ್ಥಿಕ ಬಿಡ್ ಟೆಂಡರ್ ಪರಿಶೀಲನಾ ಸಮಿತಿ ಸದಸ್ಯರು ಮತ್ತು ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುವುದು ಎಂದರು. ಸಾರ್ವಜನಿಕರು ತಮ್ಮ ಸಲಹೆಗಳಿದ್ದಲ್ಲಿ ಆ.30ರೊಳಗೆ ಈ ಕಚೇರಿಗೆ ಪತ್ರದ ಮೂಲಕ ಅಥವಾ ಇ ಮೇಲ್ ಮೂಲಕ ನೀಡಬಹುದು ಎಂದರು.