ವಿಜಯಪುರದಲ್ಲಿ ಪದೇಪದೆ ಭೂಕಂಪ ಸಂಭವಿಸುತ್ತಿದ್ದು, ಸಾರ್ವಜನಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ನಿನ್ನೆ ತಡರಾತ್ರಿ ಮತ್ತೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿದೆ.
ವಿಜಯಪುರ (ಆ.25): ವಿಜಯಪುರದಲ್ಲಿ ಮತ್ತೆ ಭೂಮಿ ಕಂಪಿಸಿದೆ. ತಡರಾತ್ರಿ 12.05ರ ಸುಮಾರಿಗೆ ಜೋರಾದ ಶಬ್ದದೊಂದಿಗೆ ಭೂಮಿ ನಡುಗಿದೆ. ನಿದ್ದೆಯಲ್ಲಿದ್ದ ಜನರು ಭೂಕಂಪನದ ಶಬ್ದಕ್ಕೆ ಭಯಭೀತರಾಗಿ ಹೊರಗೆ ಓಡಿ ಬಂದಿದ್ದಾರೆ. ವಿಜಯಪುರದ ಜಲನಗರ ಸಾಯಿ ಪಾರ್ಕ್ ಕನಕದಾಸ ಬಡಾವಣೆ ಗಾಂಧಿ ನಗರ ಸೇರಿದ್ದು ಹಲವೆಡೆ ಭೂಮಿ ಕಂಪನವಾಗಿದೆ. ವಿಜಯಪುರದ ಗ್ರಾಮೀಣ ಭಾಗದಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು ವಿಜಯಪುರ ನಗರದಿಂದ 15 ಕಿ.ಮೀ ಅಂತರದಲ್ಲಿದೆ.
ವಿಜಯಪುರದಲ್ಲಿ ಪದೇ ಪದೆ ಭೂಕಂಪನ: ಜಿಲ್ಲಾಧಿಕಾರಿ ದಾನಮ್ಮನವರ್ ಹೇಳಿದ್ದಿಷ್ಟು
ಭೂಮಿಯ 5 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಕಳೆದ ಕೆಲ ದಿನಗಳಿಂದ ವಿಜಯಪುರದಲ್ಲಿ ಪದೇ ಪದೇ ಮರುಕಳಿಸುತ್ತಿರುವ ಭೂಕಂಪನದಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಇದು ಸಾಮಾನ್ಯ ಭೂಕಂಪ ಇದರಿಂದ ಯಾವುದೇ ಪ್ರಾಣಾಪಾಯ ಇಲ್ಲವೆಂದು ಧೈರ್ಯ ಹೇಳುತ್ತಿದ್ದರೂ ಸಾರ್ವಜನಿಕರು ರಾತ್ರಿಪೂರ್ತಿ ನಿದ್ರಿಸದೇ ಆತಂಕದಿಂದ ಕುಳಿತಿದ್ದಾರೆ. ಹೀಗಾಗಿ ಪದೇ ಪದೆ ಸಂಭ ವಿಸುತ್ತಿರುವ ಭೂಕಂಪನದ ಅಧ್ಯಯನ ನಡೆಸುವಂತೆತಜ್ಞರಿಗೆ ಮನವಿ ಮಾಡಿದ್ದಾರೆ.
ಆಲಮಟ್ಟಿ ಡ್ಯಾಂ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾ: ಇದೀಗ ಮೂರೇ ದಿನದಲ್ಲಿ 6 ಬಾರಿ ಭೂಮಿ ಕಂಪಿಸಿದೆ. ಈ ಭೂಕಂಪನದ ಹಿಂದೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಿದ್ದೇ ಕಾರಣ ಎನ್ನಲಾಗುತ್ತಿದೆ.. ವಿಜಯಪುರದಲ್ಲಿ ಭೂಕಂಪನ 2021ರಲ್ಲಾದ ಸಂದರ್ಭದಲ್ಲಿ ಹೈದ್ರಾಬಾದ್ ನ್ಯಾಶನಲ್ ಜಿಯೋಫಿಜಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ ವಿಶೇಷ ತಂಡದ ರಮೇಶ್ ದಿಕ್ಪಾಲ್ ನೇತೃತ್ವದಲ್ಲಿ ಕೋಲ್ಹಾರ ತಾಲೂಕಿನ ಮಸೂತಿ ಗ್ರಾಮಕ್ಕೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಆಗ್ತಿರೋದಕ್ಕೆ ಭೂಮಿಯೊಳಗಿನ ಶಿಲಾಪದರಿನಲ್ಲಿ ಬಿರುಕು ಉಂಟಾಗಿದ್ದರಿಂದ ಇದು ಭೂಮಿಯಲ್ಲಿ ನೈಸರ್ಗಿಕ ಪ್ರಕ್ರಿಯೆಯಾಗಿದೆ ಎಂದು ಭೂಮಾಪಕ ಅಳವಡಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಭೂಕಂಪನ
ಆದ್ರೆ ನಿಖರ ಕಾರಣ ಬಹಿರಂಗ ಪಡಿಸಿಲ್ಲ. ವಿಜಯಪುರ ನಗರದಲ್ಲೇ ಹೆಚ್ಚಾಗಿ ಭೂಕಂಪಿಸ್ತಿದೆ ಜೊತೆಗೆ ಕೋಲ್ಹಾರ ತಾಲೂಕಿನ ಮಸೂತಿ, ಮಲಘಾಣ, ಮುಳವಾಡ, ವಿಜಯಪುರ ತಾಲೂಕಿನ ಉಕ್ಕಲಿ, ತಿಕೋಟಾ ತಾಲೂಕಿನ ಬಿಜ್ಜರಗಿ, ವಿಜಯಪುರ ಬಳಿಯ ಅಲಿಯಾಬಾದ್, ನಿಂಗನಾಳ,ಬರಟಗಿ09, ಜುಲೈ 2022ರಂದು ವಿಜಯಪುರದಲ್ಲಿ 4.6 ಹಾಗೂ 4.9 ತೀವ್ರತೆಯಲ್ಲಿ ಭಾರೀ ಸದ್ದಿನೊಂದಿಗೆ ಭೂಕಂಪಿಸಿ ಮನೆ ಗೋಡೆ ಬಿರುಕು ಬಿಟ್ಟಿದ್ದವು. ಆ ವೇಳೆ ಮನೆಯಿಂದ ಜನ ಓಡಿ ಬಂದಿರೋದು ಸಿಸಿಟಿವಿಯಲ್ಲಿ ಭೂಕಂಪನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು