Mysuru Dasara; ತೂಕದ ವಿಚಾರದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿ!

By Gowthami KFirst Published Aug 11, 2022, 7:20 PM IST
Highlights

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ಇಂದು ತೂಕ ಮಾಡಿಸಲಾಯಿತು. ಚಿನ್ನದ ಅಂಬಾರಿಯನ್ನ ಕ್ಯಾಪ್ಟನ್ ಅಭಿಮನ್ಯು ಹೊತ್ತರು, ತೂಕದ ವಿಚಾರದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿಯಾಗಿದ್ದಾನೆ.

ವರದಿ; ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಮೈಸೂರು (ಆ.11): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ಇಂದು ತೂಕ ಮಾಡಿಸಲಾಯಿತು. ಚಿನ್ನದ ಅಂಬಾರಿಯನ್ನ ಕ್ಯಾಪ್ಟನ್ ಅಭಿಮನ್ಯು ಹೊತ್ತರು, ತೂಕದ ವಿಚಾರದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿಯಾಗಿದ್ದಾನೆ. ಕಾಡಿನಿಂದ ನಾಡಿಗೆ ಬಂದಿರುವ ಮೈಸೂರು ದಸರಾ ಗಜಡೆಗಳಿಗೆ ಇಂದು ಪ್ರತಿ ವರ್ಷದಂತೆ ತೂಕ ಹಾಕುವ ಪ್ರಕ್ರಿಯೆ ನಡೆಯಿತು. ಈ ಭಾರಿ ದಸರಾ ಗಜಪಡೆಗಳ ಮಾಜಿ ಕ್ಯಾಪ್ಟನ್ ಅರ್ಜನ 5560 ತೂಕ ಹೊಂದುವ ಮೂಲಕ ಬಲಶಾಲಿ ಆನೆ ಎನಿಸಿಕೊಂಡಿದ್ದಾನೆ. ಕಾಡಿನಲ್ಲಿ ಸ್ವಾಭಾವಿಕವಾಗಿ ಸಿಗುವ ಆಹಾರ ಸೇವಿಸುತ್ತಿದ್ದ ಆನೆಗಳಿಗೆ ಇವತ್ತಿನಿಂದ ಪೌಷ್ಟಿಕಾಹಾರ ನೀಡಲಾಗುತ್ತದೆ. ಇದರಿಂದ ಸಹಜವಾಗಿ ದಸರಾ ಆನೆಗಳ ತೂಕ ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಕಾಡಿನಿಂದ ಮೈಸೂರಿಗೆ ಬಂದಿರುವ ಆನೆಗಳನ್ನ ತೂಕ ಮಾಡಿಸಲಾಯಿತು. ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಲಾರಿಗಳನ್ನ ತೂಕ ಮಾಡುವ ವೇ ಬ್ರಿಡ್ಜ್‌ನಲ್ಲಿ ದಸರಾದ ಗಜಪಡೆಯ ಮೊದಲ ತಂಡದ 9 ಆನೆಗಳ ತೂಕ ದಾಖಲಿಸಲಾಯಿತು. ಚಿನ್ನದ ಅಂಬಾರಿ ಹೊರುವುದು ಅಭಿಮನ್ಯುವೇ ಆದರೂ ತೂಕದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿ ಆಗಿದ್ದಾನೆ.

ಅಭಿಮನ್ಯುವನ್ನೇ ಮೀರಿಸುವಂತೆ ಅರ್ಜುನ 5,560 ಕೆ.ಜಿ ತೂಕ ಹೊಂದಿದ್ದಾನೆ. ಎರಡನೇ ಸ್ಥಾನದಲ್ಲಿ ಅಭಿಮನ್ಯು 4,770 ಕರ.ಜಿ ತೂಕ ಹೊಂದಿದ್ದಾನೆ. ಇನ್ನೂ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿರುವ ಮಹೇಂದ್ರ ಆನೆ 4,250 ಕೆ.ಜಿ ಹೊಂದಿದ್ದರೆ, ಭೀಮಾ 3,920 ಕೆ.ಜಿ, ಧನಂಜಯ 4,810 ಕೆ.ಜಿ ಗೋಪಾಲಸ್ವಾಮಿ 5,140 ಕೆ.ಜಿ, ಕಾವೇರಿ 3,100 ಕೆ.ಜಿ, ಲಕ್ಷ್ಮೀ 2,920 ಕೆ.ಜಿ, ಚೈತ್ರ 3,050 ಕೆ.ಜಿ ತೂಕ ಹೊಂದಿವೆ. ಈ ಎಲ್ಲಾ ಆನೆಗಳನ್ನು ದಸರಾ ಜಂಬೂ ಸವಾರಿ ಸಮೀಪಿಸುತ್ತಿದ್ದಂತೆ ಮತ್ತೆ ತೂಕ ಮಾಡಲಾಗುತ್ತದೆ. ಆಗ ಎಲ್ಲಾ ಆನೆಗಳು ಕಡಿಮೆ ಎಂದೂ 500 ಕೆ.ಜಿ ತೂಕ ಹೆಚ್ಚಿಸಿಕೊಳ್ಳಲಿವೆ.  

ಒಟ್ಟಾರೆ ನಾಳೆಯಿಂದ ದಸರಾ ಗಜಪಡೆಗೆ  ಅರಮನೆಯಂಗಳದಲ್ಲಿ ತಾಲೀಮು ಆರಂಭಿಸಲಿದ್ದು, 16 ರಿಂದ ಅರಮನೆಯಿಂದ ಬನ್ನಿಂಮಟಪದವರೆಗೆ ಪ್ರತಿದಿನ ತಾಲೀಮು ನಡೆಯಲಿದೆ. ಆ ಮೂಲಕ ಮೈಸೂರಿನಲ್ಲಿ ದಸರಾ ವೈಭವ ಮತ್ತಷ್ಟು ಕಳೆಗಟ್ಟಲಿದೆ.

ಜಿಟಿ ಜಿಟಿ ಮಳೆಯಲ್ಲಿ ಕಾಡಿನಿಂದ ನಾಡಿಗೆ ದಸರಾ ಗಜ ಪಯಣ 

ಸ್ವಾತಂತ್ರ್ಯ ದಿನಾಚರಣೆ ಬಳಿಕ ಆ. 17 ಅಥವಾ 19 ರಿಂದ ಗಜಪಡೆಯ ತಾಲೀಮು ಕೂಡು ಶುರುವಾಗಲಿದ್ದು, ಜಂಬೂ ಸವಾರಿ ಮಾರ್ಗವಾದ ಅರಮನೆಯಿಂದ ಬನ್ನಿಮಂಟಪದವರೆಗೆ ಹೋಗಿ, ಅದೇ ಮಾರ್ಗದಲ್ಲಿ ಹಿಂದಿರುಗಲಿವೆ. ಇನ್ನು ಶ್ರೀರಾಮ, ಪಾರ್ಥಸಾರಥಿ, ಗೋಪಿ, ವಿಜಯ, ವಿಕ್ರಮ 2ನೇ ತಂಡದಲ್ಲಿ ಆಗಮಿಸಿ ಅರಮನೆ ಪ್ರವೇಶಲಿದ್ದು, ದಿನಾಂಕ ನಿಗದಿಯಾಗಬೇಕು.

ಅರಮನೆ ಅಂಗಳದಲ್ಲಿ ನಿರ್ಮಿಸಿರುವ ಮೂರು ಶೆಡ್‌ಗಳಲ್ಲಿ 9 ದಸರೆ ಆನೆಗಳು ವಾಸ್ತವ್ಯ ಹೂಡಿವೆ. ಈ ಪೈಕಿ ಕ್ಯಾಪ್ಟನ್‌ ಅಭಿಮನ್ಯು ಮತ್ತು ಚೈತ್ರ ಆನೆ ಒಂದು ಶೆಡ್‌ನಲ್ಲಿವೆ.

ಮತ್ತೊಂದು ದೊಡ್ಡ ಶೆಡ್‌ನಲ್ಲಿ ಮಾಸ್ಟರ್‌ ಅರ್ಜುನ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಹಾಗೂ ಲಕ್ಷ್ಮೇ ಆನೆಗಳು ಬೀಡುಬಿಟ್ಟಿವೆ. ಇನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಕಡೆಯ ಶೆಡ್‌ನಲ್ಲಿ ಧನಂಜಯ ಮತ್ತು ಕಾವೇರಿ ಜೋಡಿಯಾಗಿವೆ.

 

click me!