ಜಮೀರ್ ಅಹ್ಮದ್ ಮಹಾ ನಾಯಕರಾಗಲು ಹೊರಟಿದ್ದಾರೆ : ಬಿಜೆಪಿ ಮುಖಂಡ

Kannadaprabha News   | Asianet News
Published : Sep 15, 2020, 11:16 AM IST
ಜಮೀರ್ ಅಹ್ಮದ್ ಮಹಾ ನಾಯಕರಾಗಲು ಹೊರಟಿದ್ದಾರೆ : ಬಿಜೆಪಿ ಮುಖಂಡ

ಸಾರಾಂಶ

ತಪ್ಪು ಸಾಬೀತಾದರೆ ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುವೆ ಎಂದಿರುವ ಜಮೀರ್ ಅಹಮದ್ ಮಹಾ ನಾಯಕರಾಗಲು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ.

 ಟಿ. ನರಸೀಪುರ (ಸೆ.15):  ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರು ಡ್ರಗ್ಸ್ ದಂಧೆ ಕೇಸಿನಲ್ಲಿ ತಮ್ಮ ಪಾತ್ರ ಇರುವುದು ಸಾಬೀತಾದರೆ ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ಬರೆಯುವುದಾಗಿ ಹೇಳಿ ಅಲ್ಪಸಂಖ್ಯಾತರ ಮಹಾ ನಾಯಕರಾಗಲು ಹೊರಟಿದ್ದಾರೆ ಎಂದು ವರುಣ ಕ್ಷೇತ್ರದ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ, ತನಿಖೆ ಪೂರ್ಣಗೊಳ್ಳುವವರೆಗೂ ತಾವು ಈ ರೀತಿ ಹೇಳಿಕೆ ನೀಡುತ್ತಿರುವುದು ತನಿಖೆಯ ಹಾದಿಯನ್ನು ದಿಕ್ಕುತಪ್ಪಿಸುವುದಾಗಿದೆ ಎಂದು ದೂರಿದರು.

ಆಪ್ತ ಶೇಖ್‌ನಿಂದ ಜಮೀರ್‌ಗೂ ಸುತ್ತಿಕೊಳ್ಳುತ್ತಾ ಡ್ರಗ್ ಉರುಳು? ...

ಜಮೀರ್‌ ಅವರು ಐಎಂಎ ಗೋಲ್ಡ್ ಕಂಪನಿಯವರಿಗೆ ಹಣ ಕಟ್ಟಿಮೋಸಕ್ಕೆ ಒಳಗಾಗಿರುವ ಸಾವಿರಾರು ಅಲ್ಪಸಂಖ್ಯಾತ ಬಡವರಿಗೆ ಅವರು ಕಟ್ಟಿರುವ ಹಣವನ್ನು ವಾಪಸ್‌ ಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ. ಆಗ ನಿಜವಾದ ಹೀರೋ ಎನ್ನಬಹುದು, ಜನರು ಮೆಚ್ಚುತ್ತಾರೆ.

ಅದು ಬಿಟ್ಟು ಈ ರೀತಿ ಬುರುಡೆ ಬಿಡುವುದನ್ನು ನಿಲ್ಲಿಸಲಿ. ಗಿಮಿಕ್‌ ರಾಜಕೀಯವನ್ನು ಜನ ಸಹಿಸುವುದಿಲ್ಲ. ಇದೇ ರೀತಿ ಬೂಟಾಟಿಕೆ ಮಾಡಿದರೆ ಜನರೇ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಅವರು ಎಚ್ಚರಿಸಿದರು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!