ಬೆಂಗಳೂರಿಗರೇ ಎಚ್ಚರ : ನಿಮ್ಮ ಬಗ್ಗೆ ಕಾಳಜಿ ಅತ್ಯಗತ್ಯ!

Kannadaprabha News   | Asianet News
Published : Sep 15, 2020, 10:13 AM IST
ಬೆಂಗಳೂರಿಗರೇ ಎಚ್ಚರ : ನಿಮ್ಮ ಬಗ್ಗೆ ಕಾಳಜಿ ಅತ್ಯಗತ್ಯ!

ಸಾರಾಂಶ

ಬೆಂಗಳೂರಿಗರು ಎಚ್ಚರಿಕೆ ಇಂದ ಇರುವುದು ಅತ್ಯಗತ್ಯವಾಗಿದೆ. ನಿಮ್ಮ ಆರೋಗ್ಯದ ಕಾಳಜಿ ನೀವೆ ವಹಿಸಬೇಕಾಗಿದೆ. ದಿನದಿನವೂ ಕೂಡ ಇಲ್ಲಿನ ಮಹಾಮಾರಿ ಅಟ್ಟಹಾಸ ಹೆಚ್ಚಾಗಿದೆ. 

ಬೆಂಗಳೂರು (ಸೆ.15): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸೋಮವಾರ 2,966 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,73,628ಕ್ಕೆ ತಲುಪಿದೆ. ಇದರಿಂದ ಆರೋಗ್ಯ ಕಾಳಜಿ ಅತ್ಯಂತ ಅವಶ್ಯಕವಾಗಿದೆ.

ಒಂದು ವಾರದ ಬಳಿಕ ಮೂರು ಸಾವಿರಕ್ಕಿಂತ ಕಡಿಮೆ ಸೋಂಕಿತರ ಪತ್ತೆಯಾಗಿದ್ದಾರೆ. ಸೋಮವಾರ 3495 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 1,30,627 ಮಂದಿ ಕೊರೋನಾ ಮುಕ್ತರಾಗಿದ್ದಾರೆ.

ಸೋಮವಾರ ನಗರದಲ್ಲಿ 37 ಮಂದಿ ಕೊರೋನಾ ಸೋಂಕಿಗೆ ಬಲಿಯಾದ ವರದಿಯಾಗಿದೆ. ಈ ಮೂಲಕ ನಗರದಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,473ಕ್ಕೆ ಏರಿಕೆಯಾಗಿದೆ. ಇನ್ನು 40,527 ಸಕ್ರಿಯ ಪ್ರಕರಣಗಳಿದ್ದು, 263 ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸೋಮವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು ...

ದಿನವೂ ದಿನವೂ ಕೂಡ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನವು ಇದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. 

ಇದರಿಂದ ಜನರು ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. 

PREV
click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್