ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿ ಉಪ ಅಧೀಕ್ಷರಾಗಿದ್ದ ಎಂ.ಎಚ್.ತಂಗಳ್ ಎಂಬುವವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 3.5 ಕೋಟಿ ರು ದಂಡ ವಿಧಿಸಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
ಬೆಂಗಳೂರು : ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿ ಉಪ ಅಧೀಕ್ಷರಾಗಿದ್ದ ಎಂ.ಎಚ್.ತಂಗಳ್ ಎಂಬುವವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 3.5 ಕೋಟಿ ರು ದಂಡ ವಿಧಿಸಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
2012ರ ಜ.1ರಿಂದ 2019ರ ಆ.14ರವರೆಗೆ ಅಕ್ರಮ ಸಂಪತ್ತು ಗಳಿಸಿದ ಆರೋಪದ ಮೇಲೆ ಸಿಬಿಐ ಪೊಲೀಸರು ತಂಗಳ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೇ ವೇಳೆ ತಂಗಳ್ ಜತೆಗೆ ಅವರ ಪತ್ನಿ ಚಮರ್ನಾಮಿ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರು. ದಂಡ ವಿಧಿಸಿದೆ. ತಂಗಳ್ ಅವರು 3.12 ಕೋಟಿ ರು.ಗಿಂತ ಹೆಚ್ಚು ಅಕ್ರಮ ಆಸ್ತಿಯನ್ನು ಹೊಂದಿರುವುದು ತನಿಖೆ ವೇಳೆ ಗೊತ್ತಾಗಿದೆ. ಇದು ಶೇ.103ರಷ್ಟುಆದಾಯ ಮೂಲಗಳಿಗೆ ಆಸಮಾನವಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
undefined
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ತಿಮಿಂಗಲ: ಗಂಗಾಧರಯ್ಯನ ಇತಿಹಾಸವೇ ಬೆಚ್ಚಿ ಬೀಳಿಸುತ್ತೆ!
ತನಿಖೆಯ ಬಳಿಕ ತಂಗಳ್ ಮತ್ತು ಪತ್ನಿ ವಿರುದ್ಧ ಆರೋಪಪಟ್ಟಿಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯದ ಇಬ್ಬರೂ ಆರೋಪಿಗಳು ತಪ್ಪಿತಸ್ಥರು ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ.
ಲೋಕಾ ಬಲೆಗೆ ಭಾರೀ ಅಕ್ರಮ ಸಂಪತ್ತಿನ ಕುಳಗಳು
ಬೆಂಗಳೂರು(ಏ.26): ಅಕ್ರಮ ಆಸ್ತಿ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಲ್ಲಿ ಕುಬೇರರ ಆಸ್ತಿಯ ಮಾಹಿತಿ ಲಭ್ಯವಾಗಿದ್ದು, ಕೋಟ್ಯಂತರ ರು. ಮೌಲ್ಯದ ಸ್ಥಿರಾಸ್ತಿ ಸಂಪಾದನೆ ಮಾಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಬಿಬಿಎಂಪಿಯ ಯಲಹಂಕ ವಲಯದ ಸಹಾಯಕ ನಿರ್ದೇಶಕ ಕೆ.ಎಲ್. ಗಂಗಾಧರಯ್ಯ ಬಳಿ 14 ಫ್ಲಾಟ್‌ಗಳು, ವಿದೇಶಿ ಕರೆನ್ಸಿ ಗಳು ಪತ್ತೆಯಾದರೆ, ಬಸವಕಲ್ಯಾಣ ತಾಲೂಕು ಉಪತಹಶೀಲ್ದಾರ್ ವಿಜಯಕುಮಾರ ಸ್ವಾಮಿ ಬಳಿ 15 ಖಾಲಿ ನಿವೇಶನಗಳು ಇರುವುದು ಪತ್ತೆಯಾಗಿವೆ. ನಿವೃತ್ತ ಡಿಸಿಎಫ್ ಐ.ಎಂ.ನಾಗರಾಜ ಬಳಿ ಬೆಂಗಳೂರು, ಶಿವಮೊಗ್ಗ, ಹೊನ್ನಾಳಿಯಲ್ಲಿ ಮನೆ, ಫ್ಲಾಟ್‌ಗಳಿರುವುದು ಗೊತ್ತಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ಸೋಮವಾರ ಲೋಕಾಯುಕ್ತ ಪೊಲೀಸರು ಬೆಂಗಳೂರು, ಕೋಲಾರ, ಬೀದರ್, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿ ಎಂಟು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಒಟ್ಟು 34 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದರು. ಈ ವೇಳೆ ಕೋಟ್ಯಂತರ ರು. ಅಕ್ರಮ ಆಸ್ತಿ ಪತ್ತೆಯಾಗಿದೆ.
ಕೋಲಾರದ ಇಒ ವೆಂಕಟೇಶಪ್ಪ ಮನೆ ಮೇಲೆ ಲೋಕಾಯಕ್ತ ದಾಳಿ: ಬಿದ್ದು ಒದ್ದಾಡಿ ಅಧಿಕಾರಿಯಿಂದ ಹೈ ಡ್ರಾಮಾ !
ಅಧಿಕಾರಿಗಳ ಆಸ್ತಿಯ ವಿವರ:
ಹುಸೇನ್‌ಸಾಬ್, ಕಾರ್ಯಪಾಲಕ ಎಂಜಿನಿಯರ್, ಜೆಸ್ಕಾಂ, ಬಳ್ಳಾರಿ- ಒಟ್ಟು 6 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಬಳ್ಳಾರಿಯಲ್ಲಿ ಮೂರು ವಾಸದ ಮನೆ, ಹೊಸಪೇಟೆಯಲ್ಲಿ ಒಂದು ಖಾಲಿ ನಿವೇಶನ, ಹಡಗಲಿ ತಾಲೂಕಿನಲ್ಲಿ 6.20 ಎಕರೆ ಕೃಷಿ ಜಮೀನು, 4 ನಾಲ್ಕುಚಕ್ರದ ವಾಹನ, 2 ದ್ವಿಚಕ್ರ ವಾಹನ, 23.69 ಲಕ್ಷ ರು. ನಗದು, 1487 ಗ್ರಾಂ ಚಿನ್ನಾಭರಣ, 680 ಗ್ರಾಂ ಬೆಳ್ಳಿ ಪತ್ತೆಯಗಿದೆ.
ಕೆ.ಎಲ್.ಗಂಗಾಧರಯ್ಯ, ಸಹಾಯಕ ನಿರ್ದೇಶಕ, ನಗರ ಯೋಜನೆ, ಬಿಬಿಎಂಪಿ, ಯಲಹಂಕ ವಲಯ- ಏಳು ಸ್ಥಳಗಳಲ್ಲಿ ಪರಿಶೀಲನೆ ಮಾಡಲಾಗಿದೆ. 14 ಫ್ಲಾಟ್‌ಗಳು, 73 ಲಕ್ಷ ರು. ಮೌಲ್ಯದ ಚಿನ್ನಾಭರಣ, 1.47 ಕೋಟಿ ರು. ನಗದು, ನೆಲಮಂಗಲ ಬಳಿ 5 ಎಕರೆ ಕೃಷಿ ಜಮೀನು, 10298 ಅಮೆರಿಕ ಡಾಲರ್, 1180 ದುಬೈ ದೀರಂ, 35 ಈಜಿಪ್ಟ್ ದೇಶದ ಕರೆನ್ಸಿ, 50 ಲಕ್ಷ ರು.ಗಿಂತ ಹೆಚ್ಚಿನ ಮೌಲ್ಯದ ಗೃಹೋಪಯೋಗಿ ವಸ್ತುಗಳು ಇರುವುದು ಗೊತ್ತಾಗಿದೆ.
ಸುರೇಶ ಮೇಡ, ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಬೀದರ್- ಮೂರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಬೀದರ್ ನಗರದಲ್ಲಿ ಎರಡು ಮನೆ, ಮೂರು ಖಾಲಿ ನಿವೇಶನ. 3 ನಾಲ್ಕು ಚಕ್ರದ ವಾಹನಗಳು, 3 ದ್ವಿಚಕ್ರ ವಾಹನಗಳು, 11.34 ಲಕ್ಷ ರು. ನಗದು, 1892 ಗ್ರಾಂ ಚಿನ್ನಾಭರಣ, 6 ಕೆಜಿ 628 ಗ್ರಾಂ ಬೆಳ್ಳಿ ವಸ್ತುಗಳು, 45 ಲಕ್ಷ ರು. ಮೌಲ್ಯದ ಎಲ್‌ಐಸಿ ಬಾಂಡ್‌ಗಳು ಪತ್ತೆಯಾಗಿವೆ.
ವಿಜಯಕುಮಾರಸ್ವಾಮಿ, ಉಪತಹಶೀಲ್ದಾರ್, ನಾಡಾ ಕಚೇರಿ ಮುಡುಬಿ ಹೋಬಳಿ, ಬಸವಕಲ್ಯಾಣ ತಾಲೂಕು- ಮೂರು ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಬೀದರ್‌ನಲ್ಲಿ ಒಂದು ಮನೆ, ಬಸವಕಲ್ಯಾಣದಲ್ಲಿ 15 ಖಾಲಿ ನಿವೇಶನಗಳು, ಒಂದು ಸಾಯಿ ಸರ್ವಿಸ್ ಆಟೋ ಗ್ಯಾರೇಜ್, 2 ನಾಲ್ಕು ಚಕ್ರದ ವಾಹನಗಳು, 1 ದ್ವಿಚಕ್ರ ವಾಹನ ಇವೆ.