ಹುಲಿಗೆ ಆಹಾರವಾದ 7 ವರ್ಷದ ಬಾಲಕ: ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ

By Sathish Kumar KHFirst Published Sep 4, 2023, 4:19 PM IST
Highlights

ಹೆಚ್‌.ಡಿ. ಕೋಟೆಯಲ್ಲಿ ತಂದೆ- ತಾಯಿ ಜೊತೆಗೆ ಹೊಲಕ್ಕೆ ಹೋಗಿ ಮರದ ಕೆಳಗೆ ಕುಳಿತಿದ್ದ 7 ವರ್ಷದ ಬಾಲಕನ್ನು ಹುಲಿ ಎಳೆದುಕೊಂಡು ಹೋಗಿ ತಿಂದುಹಾಕಿದೆ.

ಮೈಸೂರು (ಸೆ.04): ಕಳೆದ ಎರಡು ತಿಂಗಳಿಂದ ಕಡಿಮೆಯಾಗಿದ್ದ ಹುಲಿ ದಾಳಿ ಪ್ರಕರಣ ಮತ್ತು ಅರಣ್ಯದಂಚಿನ ಗ್ರಾಮಗಳಲ್ಲಿ ಶುರುವಾಗಿದೆ. ಹೆಚ್‌.ಡಿ. ಕೋಟೆಯಲ್ಲಿ ತಂದೆ- ತಾಯಿ ಜೊತೆಗೆ ಹೊಲಕ್ಕೆ ಹೋಗಿ ಮರದ ಕೆಳಗೆ ಕುಳಿತಿದ್ದ 7 ವರ್ಷದ ಬಾಲಕನ್ನು ಹುಲಿ ಎಳೆದುಕೊಂಡು ಹೋಗಿ ತಿಂದುಹಾಕಿದೆ.

ಮೈಸೂರು ಜಿಲ್ಲೆ ಹೆಚ್‌ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನಿನಲ್ಲಿ ಮರದ ಕೆಳಗೆ ಕುಳಿತಿದ್ದ ಬಾಲಕನ ಮೇಲೆ ದಾಳಿ‌ ಮಾಡಿದ ಹುಲಿ, ಆತನನ್ನು ಎಳೆದುಕೊಮಡು ಹೋಗಿ ತಿಂದು ಹಾಕಿದೆ. ಮೃತ ಬಾಲಕನನ್ನು ಕೃಷ್ಣಾಯಕರ ಅವರ ಪುತ್ರ ಚರಣ್ (7) ಎಂದು ಗುರುತಿಸಲಾಗಿದೆ. ಕಾಡಂಚಿನ ಗ್ರಾಮವಾದ ಕಲ್ಲಹಟ್ಟಿಯಲ್ಲಿ ವಾಸವಿರುವ ಈ ಕುಟುಂಬವು ಕೃಷಿಕ ಕಾರ್ಯವನ್ನು ಮಾಡುತ್ತಿದೆ. ಇಂದು ಜಮೀನಿನಲ್ಲಿ ಕೆಲಸ ಇದ್ದುದರಿಂದ ಇಬ್ಬರು ಮಕ್ಕಳೊಂದಗೆ ಪೋಷಕರು ಜಮೀನಿಗೆ ತೆರಳಿದ್ದಾರೆ. ಈ ವೇಳೆ ಬಿಸಿಲು ಹೆಚ್ಚಾಗಿದ್ದರಿಂದ ಮೂವರು ದೊಡ್ಡವರು ಕೆಲಸ ಮಾಡುತ್ತಿದ್ದು, ಚಿಕ್ಕ ಬಾಲಕ ಚರಣ್‌ನನ್ನು ವಿಶ್ರಾಂತಿ ಪಡೆಯಲು ಮರದ ಕೆಳಗೆ ಕೂರಿಸಲಾಗಿತ್ತು.

ಇನ್ನು ಕೆಲಸ ಮಾಡುತ್ತಾ ಮರದ ಕೆಳಗೆ ಕಣ್ಣಾಡಿಸಿದಾಗ ಮಗ ಅಲ್ಲಿ ಕಾಣಿಸಲಿಲ್ಲ. ಕೂಡಲೇ ಕ್ಷಣ ಮಾತ್ರದಲ್ಲಿ ಕಣ್ಮರೆಯಾದ ಬಾಲಕನನ್ನು ಪೋಷಕರು ಹುಡುಕುತ್ತಾ ಹೋಗಿದ್ದಾರೆ. ಆಗ, ಸುತ್ತಲಿನ ಪ್ರದೇಶಗಳಲ್ಲಿ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಆಗ, ಬಾಲಕನ್ನು ಎಳೆದುಕೊಂಡು ಹೋಗುವಾಗ ಚಪ್ಪಲಿ ಬಿದ್ದಿರುವುದು ನೋಡಿದಾಗ ಅಲ್ಲಿ ಹುಲಿ ಹೆಜ್ಜೆಗಳು ಇರುವುದು ಕೂಡ ಕಂಡುಬಂದಿದೆ. ಹುಲಿಯ ಹೆಜ್ಜೆಯ ಜಾಡು ಹುಡುಕಿದಾಗ ಕೊಂಚ ದೂರದಲ್ಲಿ ಬಾಲಕನನ್ನು ಹುಲಿ ತಿನ್ನುತ್ತಿರುವ ದೃಶ್ಯ ಕಂಡಿದೆ.

ಜ್ಯೂಸ್ ಎಂದುಕೊಂಡು ಕೀಟನಾಶಕ ಕುಡಿದು ಮಗು: ಚಿಕತ್ಸೆ ಫಲಿಸದೇ ಸಾವು

ಅರ್ಧ ತಿಂದ ದೇಹವನ್ನು ಬಿಟ್ಟುಹೋದ ಹುಲಿ: ಇನ್ನು ಪೋಷಕರು ಜೋರಾಗಿ ಕೂಗುತ್ತಾ ಹುಲಿ ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ. ಅಷ್ಟೊತ್ತಿಗೆ ಸುತ್ತಲಿನ ಜಮೀನುಗಳಲ್ಲಿದ್ದ ಕೆಲವು ಜನರು ಅಲ್ಲಿ ಸೇರಿ ಗುಂಪಾಗಿ ಹೋದಾಗ ಮಗನ ದೇಹವನ್ನು ಅರ್ಧಂಬರ್ಧ ತಿಂದು ಬಿಟ್ಟು ಹೋಗಿದೆ. ಇನ್ನು ಘಟನೆ ನಡೆದ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್.ಡಿ. ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ, ಯಾವೊಬ್ಬ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ಮಾಡದ್ದಾರೆ. 

ಹುಲಿ ಸೆರೆಗೆ ಆದೇಶ ಹೊರಡಿಸಿದ ಅರಣ್ಯ ಇಲಾಖೆ: ಹೆಚ್‌ಡಿ.ಕೋಟೆ ತಾಲೂಕಿನಲ್ಲಿ ಬಾಲಕನನ್ನು ತಿಂದ ನರಭಕ್ಷಕ ಹುಲಿ ಸೆರೆಗೆ ಅರಣ್ಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರಿಂದ ಅರಣ್ಯ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆ ನಡಸಲು ಮುಂದಾಗಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಗೆ ಎರಡು ಆನೆಗಳ ಬಳಕೆ ಮಾಡಲಾಗುತ್ತಿದೆ. ದುಬಾರೆ ಕ್ಯಾಂಪ್‌ನಿಂದ ಸುಗ್ರೀವ ಹಾಗೂ ಪ್ರಶಾಂತ್ ಆನೆ ಕರೆಸುತ್ತಿದೆ. ಸ್ಥಳದಿಂದ ಬಾಲಕನ‌ ಮೃತ ದೇಹ ತೆಗೆಯಲು ಕುಟುಂಬಸ್ಥರ ನಿರಾಕರಣೆ ಮಾಡಿದ್ದಾರೆ. ಸೂಕ್ತ ಪರಿಹಾರದ ಜೊತೆ ಹುಲಿ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ. ತಡವಾಗಿ ಬಂದ ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಕಾಡಾನೆ ದಾಳಿಗೆ ಬಲಿಯಾದ ಶಾರ್ಪ್‌ ಶೂಟರ್ ವೆಂಕಟೇಶ್‌: ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ 67 ವರ್ಷದ ವೃದ್ಧ ಸಾವು

ಮತ್ತೆ ಮರುಕಳಿಸಿದ ಹುಲಿ ದಾಳಿ ಪ್ರಕರಣ: ರಾಜ್ಯದಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಆನೆಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಇದರ ನಂತರದ ಸ್ಥಾನವನ್ನು ಚಿರತೆಗಳು ಆವರಿಸಿಕೊಂಡಿವೆ. ಈಗ ಹುಲಿ ದಾಳಿಯೂ ಹೆಚ್ಚಾಗುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಬಾಲಕ ಮತ್ತು ಆತನ ತಾತನನ್ನು ಎರಡು ದಿನದ ಅಂತರದಲ್ಲಿ ಹುಲಿ ತಿಂದು ಹಾಕಿತ್ತು. ಇದಾದ ನಂತರ ಅರಣ್ಯ ಇಲಾಖೆಯಿಂದ ಆ ಹುಲಿಯನ್ನು ಹಿಡಿದು ಸ್ಥಳೀಯ ಜನರ ಆತಂಕವನ್ನು ದೂರ ಮಾಡಿತ್ತು. ಈಗ ಪುನಃ ಹುಲಿ ದಾಳಿ ಹೆಚ್ಚಾಗಿದೆ. 

click me!