ಮಹಿಳೆಗೆ ಲೈಂಗಿಕ ಕಿರುಕುಳ : ಮೈಸೂರಿನಲ್ಲಿ ಸ್ವಾಮೀಜಿ ಶಿಷ್ಯ ಬಂಧನ

Published : Sep 22, 2018, 07:50 PM ISTUpdated : Sep 23, 2018, 07:11 AM IST
ಮಹಿಳೆಗೆ ಲೈಂಗಿಕ ಕಿರುಕುಳ : ಮೈಸೂರಿನಲ್ಲಿ ಸ್ವಾಮೀಜಿ ಶಿಷ್ಯ ಬಂಧನ

ಸಾರಾಂಶ

ಮೈಸೂರಿನ ರಾಮಕೃಷ್ಣನಗರ ನಿವಾಸಿ ಅನಿಲ್ ಆಚಾರ್ಯ ಬಂಧಿತ ಆರೋಪಿ. ಸೆ.4ರಂದು ಮಧ್ಯರಾತ್ರಿ ಮಹಿಳೆಯ ಮನೆಗೆ ತೆರಳಿದ್ದ ಸ್ವಾಮೀಜಿ ಹಾಗೂ ಶಿಷ್ಯರು, ಮಹಿಳೆ ಪತಿಯೊಂದಿಗೆ ಸೇರಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ನೊಂದ ಮಹಿಳೆ ದೂರು ನೀಡಿದ್ದರು.

ಮೈಸೂರು[ಸೆ.22]: ಮಹಿಳೆಗೆ ಪತಿ ಸಮ್ಮುಖದಲ್ಲೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಶ್ರೀ ಮಹಾಕಾಳಿ ಚಕ್ರೇಶ್ವರಿ ಪೀಠದ ಅಧ್ಯಕ್ಷ ಶ್ರೀ ವಿದ್ಯಾಹಂಸ ಭಾರತಿ ಸ್ವಾಮೀಜಿ ಶಿಷ್ಯನನ್ನು ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ರಾಮಕೃಷ್ಣನಗರ ನಿವಾಸಿ ಅನಿಲ್ ಆಚಾರ್ಯ ಬಂಧಿತ ಆರೋಪಿ. ಸೆ.4ರಂದು ಮಧ್ಯರಾತ್ರಿ ಮಹಿಳೆಯ ಮನೆಗೆ ತೆರಳಿದ್ದ ಸ್ವಾಮೀಜಿ ಹಾಗೂ ಶಿಷ್ಯರು, ಮಹಿಳೆ ಪತಿಯೊಂದಿಗೆ ಸೇರಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ನೊಂದ ಮಹಿಳೆ ದೂರು ನೀಡಿದ್ದರು.

ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಶ್ರೀ ವಿದ್ಯಾಹಂಸ ಭಾರತಿ ಸ್ವಾಮೀಜಿ, ಮಹಿಳೆಯ ಪತಿ ಮತ್ತು ಇತರರು ತಲೆಮರಿಸಿಕೊಂಡಿದ್ದರು. ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯ ಮಾತ್ರ ಸಿಕ್ಕಿಬಿದ್ದಿದ್ದು, ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

PREV
click me!

Recommended Stories

ಮೈಸೂರು ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬಂಗಾರಕ್ಕೆ ಕನ್ನ! 85 ಗುಂಡು ಕೊಟ್ಟರೆ 77 ಮಾತ್ರ ವಾಪಸ್
ಮುಡಾ ಹಗರಣದಲ್ಲಿ ಕೋರ್ಟ್ ಹೊಸ ಆದೇಶ, ಜೈಲಲ್ಲಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತೆ ಪೊಲೀಸ್‌ ಕಸ್ಟಡಿಗೆ!