'ದೇಶದಲ್ಲಿ ಕರ್ನಾಟಕದ ತಂಬಾಕಿಗೆ ಹೆಚ್ಚಿನ ಬೇಡಿಕೆ'

By Web DeskFirst Published Sep 21, 2018, 5:40 PM IST
Highlights

ತಂಬಾಕು ಕಂಪನಿಯವರು ರೈತರ ಪರ ಉತ್ತಮ ನಿಲುವು ತೆಗೆದುಕೊಂಡು, ತಂಬಾಕನ್ನು ಖರೀದಿಸಬೇಕು. ಇದರಿಂದ ಕಂಪನಿಗಳಿಗೆ ಯಾವುದೆ ರೀತಿಯ ನಷ್ಟ ಉಂಟಾಗುವುದಿಲ್ಲ. ತಂಬಾಕು ಮಂಡಳಿಯವರು ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆ ಆಗಿರುವುದರಿಂದ ಇಳುವರಿ ಕಡಿಮೆ ಆಗಿದೆ. 

ಎಚ್.ಡಿ. ಕೋಟೆ[ಸೆ.21]: ಭಾರತ ದೇಶದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ತಂಬಾಕು ಬೆಳೆಯಲಾಗುತ್ತಿದೆ. ಇಲ್ಲಿ ಖರೀದಿಸಿದ ಶೇ.80ರಷ್ಟು ತಂಬಾಕನ್ನು ಆಮದು ಮಾಡಲಾಗುತ್ತಿದೆ. ಆದರಿಂದ ಸರ್ಕಾರಕ್ಕೆ ಇದರಿಂದ ಹೆಚ್ಚಿನ ಆದಾಯ ಬರುತ್ತಿದೆ ಎಂದು ಸಂಸದ ಆರ್. ಧ್ರುವ ನಾರಾಯಣ್ ತಿಳಿಸಿದರು.

ತಾಲೂಕಿನ ಹೆಬ್ಬಳ್ಳದಲ್ಲಿನ ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಹರಾಜಿಗೆ ಚಾಲನೆ ನೀಡಿ ಮಾತನಾಡಿದರು. 2020ಕ್ಕೆ ತಂಬಾಕು ನಿಷೇಧ ಆಗುತ್ತದೆ ಎನ್ನುವುದರ ಬಗ್ಗೆ ರೈತರು ಕೇಳಿದ ಪ್ರಶ್ನೆಗೆ ತಂಬಾಕು ನಿಷೇದ ಮಾಡದಂತೆ ಅಧಿವೇಶನಲ್ಲಿ ಚರ್ಚಿಸುತ್ತೇನೆ ಎಂದರು.

ತಂಬಾಕು ಕಂಪನಿಯವರು ರೈತರ ಪರ ಉತ್ತಮ ನಿಲುವು ತೆಗೆದುಕೊಂಡು, ತಂಬಾಕನ್ನು ಖರೀದಿಸಬೇಕು. ಇದರಿಂದ ಕಂಪನಿಗಳಿಗೆ ಯಾವುದೆ ರೀತಿಯ ನಷ್ಟ ಉಂಟಾಗುವುದಿಲ್ಲ. ತಂಬಾಕು ಮಂಡಳಿಯವರು ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆ ಆಗಿರುವುದರಿಂದ ಇಳುವರಿ ಕಡಿಮೆ ಆಗಿದೆ. ಆದರೆ ಉತ್ತಮ ಗುಣಮಟ್ಟದ ತಂಬಾಕನ್ನು ರೈತರು ಬೆಳೆದಿದ್ದು ಉತ್ತಮ ಬೆಲೆ ಕೊಡಿಸಿ ಕೊಡಬೇಕು ಎಂದು ಸೂಚನೆ ನೀಡಬೇಕು. ಇಲ್ಲಿ ಮೂಲಭೂತ ಸೌಲಭ್ಯ ನೀಡುವಂತೆ
ತಿಳಿಸಿದರು. 

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ರತ್ನಸಾಗರ, ಹರಾಜು ಅಧೀಕ್ಷಕ ರಮೇಶ್, ಎಚ್.ಸಿ. ಶಿವಣ್ಣ, ಮೊತ್ತ ಬಸವರಾಜು, ಕಾಳೇಗೌಡ, ಕೃಷ್ಣ ಕುಮಾರ್, ಜಯರಾಮ್, ಹರಿದಾಸ್, ಮಹದೇವು, ನಾಗರಾಜಪ್ಪ ಹಾಗೂ ರೈತರು ಇದ್ದರು.

 

click me!