KRS ಬಿರುಕು ವಿಚಾರ : ಮೊದಲ ಬಾರಿ ಯದುವೀರ್ ಒಡೆಯರ್ ಪ್ರತಿಕ್ರಿಯೆ

Suvarna News   | Asianet News
Published : Jul 20, 2021, 02:03 PM IST
KRS ಬಿರುಕು ವಿಚಾರ : ಮೊದಲ ಬಾರಿ ಯದುವೀರ್ ಒಡೆಯರ್ ಪ್ರತಿಕ್ರಿಯೆ

ಸಾರಾಂಶ

KRS ಅಣೆಕಟ್ಟೆ ಬಿರುಕು ಬಿಟ್ಟದೆ ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿರುವ ವಿಚಾರ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಪ್ರತಿಕ್ರಿಯೆ ಸರ್ಕಾರದಿಂದ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ - ಒಡೆಯರ್

ಚಾಮರಾಜನಗರ (ಜು.20): KRS ಅಣೆಕಟ್ಟೆ ಬಿರುಕು ಬಿಟ್ಟದೆ ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾರಾಜ ಯದುವೀರ್ ಒಡೆಯರ್ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ. 

ಗುಂಡ್ಲುಪೇಟೆಯಲ್ಲಿಂದು ಮಾತನಾಡಿದ ಮೈಸೂರಿನ ರಾಜ ಯದುವೀರ್  ಒಡೆಯರ್  ನಮಗೆ KRS ವಿಚಾರವಾಗಿ ಇತ್ತೀಚೆಗೆ ಮಾಧ್ಯಮದಲ್ಲಿ ಬಂದ ಸುದ್ದಿಯಷ್ಟೇ ತಿಳಿದಿದೆ. ಸರ್ಕಾರದಿಂದ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.  KRS ವಿಚಾರವಾಗಿ ಎಕ್ಸ್ ಫರ್ಟ್ ಪ್ಯಾನಲ್ ಯಾವ ನಿರ್ಧಾರ ಕೈಗೊಳ್ಳುತ್ತದೆ ನೋಡೋಣ ಎಂದರು.

'KRS ಅಣೆಕಟ್ಟೆಯಲ್ಲಿ ನೀರಿನ ಸೋರಿಕೆ ಆರಂಭ'

KRS ಪಕ್ಕದಲ್ಲಿ ಇಲ್ಲೀಗಲ್ ಆಗಿ ಮೈನಿಂಗ್ ನಡೆಯುತ್ತಿದ್ದರೆ ನಿಲ್ಲಿಸಬೇಕಾಗುತ್ತದೆ.  ಕೆಲಸ ನಡೀತಿದೆಯೋ ಇಲ್ಲವೋ ಎನ್ನುವ ಬಗ್ಗೆ ಅರಮನೆಗೆ ಮಾಹಿತಿ ಇಲ್ಲ. ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಡ್ಯಾಂಗೆ ಸಮಸ್ಯೆಯಾದರೆ ಅಕ್ರಮ ಗಣಿಗಾರಿಗೆ ತಡೆಯಬೇಕು ಎಂದು ಹೇಳಿದರು. 

ಎಕ್ಸ್ ಫರ್ಟ್ ಪ್ಯಾನಲ್ ಈ ಬಗ್ಗೆ ನಿರ್ಧಾರ ಮಾಡಬೇಕು. ಮೈಸೂರು ಮಹಾ ಸಂಸ್ಥಾನದ ಯಾವುದೇ ಕೊಡುಗೆಯಾದರೂ ಅದು ಹಿಂದೆಯೂ ಉಪಯೋಗವಾಗಿದೆ, ಈಗಲೂ ಉಪಯುಕ್ತವಾಗುತ್ತಿದೆ. ಮುಂದೆಯೂ  ಉಪಯುಕ್ತವಾಗಲಿ ಎನ್ನುವುದು ನಮ್ಮ ಅಭಿಲಾಷೆ. ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆಸರ್ಕಾರ ಮೇಲೆ ನಂಬಿಕೆ ಇದೆ ಎಂದು ಒಡೆಯರ್ ತಿಳಿಸಿದರು.  

ಕೆಆರ್‌ಎಸ್ ಡ್ಯಾಮ ಬಗ್ಗೆ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳಲಿದೆ ಎಂದು ಒಡೆಯರ್ ಹೇಳಿದರು.  

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ