'ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗುವುದು ಪಕ್ಕಾ'

Suvarna News   | Asianet News
Published : Jul 20, 2021, 01:12 PM IST
'ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗುವುದು ಪಕ್ಕಾ'

ಸಾರಾಂಶ

ರಮೇಶ್ ಜಾರಕಿಹೊಳಿ ಪರ ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಬ್ಯಾಟಿಂಗ್  ರಮೇಶ್ ತಮ್ಮ ಮೇಲಿನ ಆರೋಪದಿಂದ ಮುಕ್ತಿಯಾಗುವುದರ ಜೊತೆ ಮಂತ್ರಿಯೂ ಆಗುತ್ತಾರೆ  ಬಿಜೆಪಿ ವರಿಷ್ಠರಿಗೂ ರಮೇಶ್ ಜಾರಕಿಹೊಳಿಯವರ ಮೇಲೆ ವಿಶ್ವಾಸವಿದೆ

 ಬೆಳಗಾವಿ  (ಜು.20) : ರಮೇಶ್ ಜಾರಕಿಹೊಳಿ ಪರ ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಬ್ಯಾಟಿಂಗ್ ಮಾಡಿದ್ದಾರೆ. ರಮೇಶ್ ತಮ್ಮ ಮೇಲಿನ ಆರೋಪದಿಂದ ಮುಕ್ತಿಯಾಗುವುದರ ಜೊತೆ ಮಂತ್ರಿಯೂ ಆಗುತ್ತಾರೆ ಎಂದು ಹೇಳಿದ್ದಾರೆ. 

ಬೆಳಗಾವಿಯಲ್ಲಿಂದು ಮಾತನಾಡಿದ ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ,  ರಮೇಶ್ ಜಾರಕಿಹೊಳಿ‌ ಸಚಿವರಾಗಿ ಇದ್ದಂತವರು. ಹಲವಾರು ಷಡ್ಯಂತ್ರಗಳಿಂದ ರಮೇಶ್ ಜಾರಕಿಹೊಳಿಗೆ ಸ್ವಲ್ಪ ಸಮಸ್ಯೆ ಆಗಿದೆ.  ಆದರೆ ರಮೇಶ್ ಜಾರಕಿಹೊಳಿ‌ ಬಳಿ ಸಂಘಟನಾ ಶಕ್ತಿ ಇದೆ.  ಬಿಜೆಪಿ ವರಿಷ್ಠರಿಗೂ ರಮೇಶ್ ಜಾರಕಿಹೊಳಿಯವರ ಮೇಲೆ ವಿಶ್ವಾಸವಿದೆ, ಪ್ರೀತಿಯಿದೆ.
ಏನೋ ಒಂದು ಷಡ್ಯಂತ್ರವಾಗಿದೆ ಎಂದರು.

ವಿಷಯ ವಿಷಯಾಂತರ ಆಗಬಾರದು.  ಮುಂದಿನ ದಿನಮಾನಗಳಲ್ಲಿ ರಮೇಶ್ ಜಾರಕಿಹೊಳಿ‌ ಆರೋಪ ಮುಕ್ತರಾಗುತ್ತಾರೆ ಎಂಬ ಭಾವನೆ ಇದೆ. ಬಿಜೆಪಿಯವರೇ ಷಡ್ಯಂತ್ರ ಮಾಡಿದ್ದ ಬಗ್ಗೆ ನನ್ನ ಗಮನಕ್ಕೆ ಇಲ್ಲ.  ಏನಿದೆ ಎಂದು ಪ್ರತ್ಯಕ್ಷ ಪರೋಕ್ಷ ವಾಗಿ ರಾಜ್ಯದ ಜನತೆಗೆ ಮಾಧ್ಯಮದವರು ತೋರಿಸಿದ್ದೀರಿ.  ಆರೋಪದಿಂದ ಮುಕ್ತಿಯಾಗುವುದರ ಜೊತೆ ರಮೇಶ್ ಜಾರಕಿಹೊಳಿ‌ ಮಂತ್ರಿಯೂ ಆಗುತ್ತಾರೆ ಎಂದು ಕುಮಟಳ್ಳಿ ಹೇಳಿದರು.

2023ರ ಚುನಾವಣೆಯಲ್ಲೂ ಶಕ್ತಿಮೀರಿ ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ರಮೇಶ್ ಜಾರಕಿಹೊಳಿ‌ ಜೊತೆ ನಾವೆಲ್ಲರೂ ಇದ್ದು, ಬಿಜೆಪಿ ಶಾಸಕರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಬೆಳಗಾವಿಯಲ್ಲಿ ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ

  ನಮಗೂ ಸ್ಥಾನ ನೀಡಿ ಅಂತಿದ್ದಾರೆ ಬೆಳಗಾವಿ ಶಾಸಕರು :  ಮಂತ್ರಿ ಖುರ್ಚಿಗಾಗಿ ಟವಲ್ ಹಾಕಿದ ಬೆಳಗಾವಿಯ ಇಬ್ಬರು ಬಿಜೆಪಿ ಶಾಸಕರು ನಮಗೂ ಸಚಿವ ಸ್ಥಾನ ನೀಡಿ ಎಂದಿದ್ದಾರೆ. 
ಮಂತ್ರಿ ಸ್ಥಾನ ನೀಡಿದರೆ ನೆಮ್ಮದಿ ಇರುತ್ತದೆ ಎಂದಿದ್ದಾರೆ. 

ಜೊತೆಗೆ ಬೆಳಗಾವಿ ಜಿಲ್ಲೆ ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಕ್ಯಾಬಿನೆಟ್ ರಿಶಫಲ್ ಆದರೆ ಮಂತ್ರಿಸ್ಥಾನಕ್ಕೆ ಒತ್ತಾಯಿಸುವೆ ಎಂದು ಹೇಳಿದ್ದಾರೆ.   

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ