Mysuru : ಆರ್ಥಿಕ ಶಕ್ತಿ ತುಂಬುವ ಮೂಲಕ ಮಠಗಳನ್ನು ಬೆಳೆಸುವ ಅಗತ್ಯವಿದೆ

By Kannadaprabha NewsFirst Published Dec 8, 2022, 5:03 AM IST
Highlights

 ಸಮಾಜದ ಬಂಧುಗಳು ಸ್ವಾಮೀಜಿಯವರಿಗೆ ಕೇವಲ ನಮಸ್ಕಾರ ಮಾಡಿದರೆ ಸಾಲದು ದಕ್ಷಿಣೆಯನ್ನು ಹಾಕುವ ಮೂಲಕ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡಿ ಮಠಗಳನ್ನು ಬೆಳೆಸಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

  ಸಾಲಿಗ್ರಾಮ (ಡಿ.08): ಸಮಾಜದ ಬಂಧುಗಳು ಸ್ವಾಮೀಜಿಯವರಿಗೆ ಕೇವಲ ನಮಸ್ಕಾರ ಮಾಡಿದರೆ ಸಾಲದು ದಕ್ಷಿಣೆಯನ್ನು ಹಾಕುವ ಮೂಲಕ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡಿ ಮಠಗಳನ್ನು ಬೆಳೆಸಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಪಟ್ಟಣದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್‌. ತಾಲೂಕು ನಾಯಕರ ಸಂಘ ಮತ್ತು ನೌಕರರ ಸಂಘದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ (Valmiki Jayanthi )  ಮತ್ತು ಸ್ವಾಮೀಜಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಗಮೋಹನ್‌ ದಾಸ್‌ ಸಮಿತಿಯನ್ನು  (HD Kumaraswamy) ಅವರು ಗಳಾಗಿದ್ದಾಗ ರಚನೆ ಮಾಡಲಾಗಿತ್ತು, ಅದರ ಆಧಾರದ ಮೇಲೆ ಸ್ವಾಮೀಜಿಗಳು 267 ದಿನಗಳ ನಿರಂತರವಾಗಿ ಹೋರಾಟ ಮಾಡುವ ಮೂಲಕ ಇಂದು ಸಮಾಜಕ್ಕೆ ಮೀಸಲಾತಿ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ ಎಂದರು.

ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಮರೆಯಲಾಗದ ಎರಡು ಪೆನ್ನುಗಳಿವೆ ಅದು ಶ್ರೀ ಮಹರ್ಷಿ ವಾಲ್ಮೀಕಿಯವರು ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಬಳಸಿದ ಪೆನ್ನುಗಳು ಎಂದರು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸ್ವಾಮೀಜಿಯ ಹೋರಾಟವೇ ಪ್ರಮುಖ ಕಾರಣವಾಗಿದೆ ಎಂದರು.

ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಯಾರಿಗೂ ಅನ್ಯಾಯವಾಗದಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಹಾದಿಯಲ್ಲಿ ಸಾಗುವ ಮೂಲಕ ನಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳೋಣ ಎಂದರು.

ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ನಂಜುಂಡಸ್ವಾಮಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಇತಿಹಾಸ ತಿಳಿಸಿದರು.

ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್‌, ಅಚ್ಚುತಾನಂದ, ಮೈಸೂರಿನ ಮೇಯರ್‌ ಶಿವಕುಮಾರ್‌, ಶ್ರೀಧರ್‌ನಾಯಕ್‌, ಹಾರಂಗಿ ಇಲಾಖೆಯ ಎಇ ಈರಣ್ಣನಾಯಕ, ಗ್ರಾಪಂ ಅಧ್ಯಕ್ಷೆ ಲಕ್ಷಿ ್ಮ ಸೋಮಶೇಖರ್‌, ಉಪಾಧ್ಯಕ್ಷೆ ನೀಲಮ್ಮ, ಎಸ್‌.ಆರ್‌. ಪ್ರಕಾಶ್‌, ಪಿಡಿಒ ಮಂಜುನಾಥ್‌, ಹುಣಸೂರು ತಾಲೂಕಿನ ನಾಯಕ ಸಂಘದ ಅಧ್ಯಕ್ಷ ಅಣ್ಣಯ್ಯನಾಯ್ಕ, ಪಿರಿಯಾಪಟ್ಟಣ ತಾಲೂಕಿನ ನಾಯಕ ಸಂಘದ ಅಧ್ಯಕ್ಷ ಹರೀಶ್‌, ಮುಖಂಡರಾದ ದೇವರಾಜ ಒಡೆಯರ್‌, ದೇವರಾಜ… ಟಿ.ಕಾಟೂರ್‌, ಮೆಡಿಕಲ… ರಾಜಣ್ಣ, ಕುಮಾರ್‌, ಜಿಲ್ಲಾ ಯುವ ಜೆಡಿಎಸ್‌ ಉಪಾಧ್ಯಕ್ಷ ಕುಚೇಲ, ಕೆ.ಆರ್‌. ನಗರ ಹಾಗೂ ಸಾಲಿಗ್ರಾಮ ತಾಲೂಕುಗಳ ನಾಯಕರ ಸಂಘ ಅಧ್ಯಕ್ಷರಾದ ನರಸಿಂಹನಾಯಕ, ಮಹದೇವನಾಯಕ ಹಾಗೂ ನೌಕರರ ಸಂಘದವರು ಇದ್ದರು.

ವೇದಿಕೆಯ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ವಿಶೇಷವಾಗಿ ಅಲಂಕೃತಗೊಂಡ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ವಿವಿಧ ಕಲಾ ತಂಡಗಳೊಂದಿಗೆ ಮಹಿಳೆಯರು ಪೂರ್ಣ ಕುಂಭ ಕಳಸ ಹೊತ್ತು ಚುಂಚನಕಟ್ಟೆರಸ್ತೆ, ಮಹಾವೀರ ರಸ್ತೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಈ ಮೆರವಣಿಗೆಗೆ ಜಿಪಂ ಮಾಜಿ ಸದಸ್ಯ ಸಾ.ರಾ. ನಂದೀಶ್‌ ಚಾಲನೆ ನೀಡಿದರು.

-- ಭವನಕ್ಕೆ ಅನುದಾನ--

ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳ ನಾಯಕ ಸಮುದಾಯದ ಸಮುದಾಯ ಭವನಗಳಿಗೆ ಅನುದಾನವನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವುದೇ ನನ್ನ ಕನಸು ಎಂದರು. ನನ್ನ ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರೆಗೂ ತಾಲೂಕಿನ ಸಮಾಜದ ಬಂಧುಗಳು ವಾಲ್ಮೀಕಿ ಜಾತ್ರೆಗೆ ತೆರಳಲು ವೈಯಕ್ತಿಕವಾಗಿ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದರು. ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮತ್ತು ಅಧಿಕಾರದಲ್ಲಿ ಸಾಲಿಗ್ರಾಮದ ಕೊಡುಗೆ ಅಪಾರವಿದೆ. ಹಾವನೂರು ಕಮಿಷನ್‌ ವರದಿಯಿಂದ ಇಂದು ಅನೇಕರು ಅನೇಕ ಅಧಿಕಾರದ ಸ್ಥಾನ ಗಳಿಸಲು ಸಾಧ್ಯವಾಗಿದೆ. ಯಾವುದೇ ಭಾಷೆ, ಧರ್ಮ, ಜಾತಿಯವರಿಗೆ ರಾಜಕೀಯದ ಅಧಿಕಾರ ಬೇಕು, ಇಲ್ಲದಿದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯವಾಗುವುದಿಲ್ಲ ಎಂದು ಡಾ. ಅಂಬೇಡ್ಕರ್‌ ಅವರು ಈ ಹಿಂದೆಯೇ ಹೇಳಿದ್ದಾರೆ ಎಂದರು.

click me!