Tumakur: ದೃಶ್ಯ ಮಾಧ್ಯಮದಿಂದ ಕ್ಷೀಣಿಸುತ್ತಿರುವ ಜಾನಪದ ಕಲೆ

By Kannadaprabha News  |  First Published Dec 8, 2022, 4:52 AM IST

ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಗೆ ಸಿಲುಕಿರುವ ಗ್ರಾಮೀಣ ಸೊಗಡಿನ ಭಜನೆ, ಸೋಬಾನೆ, ರಂಗಗೀತೆ ಮುಂತಾದ ಕಲಾ ಪ್ರಕಾರಗಳು ಇಂದಿನ ದಿನಮಾನಗಳಲ್ಲಿ ಕ್ಷೀಣಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ತಿಪಟೂರಿನ ಕಲ್ಪಶ್ರೀ ಕಲಾವಿದರ ಸಂಘವು ಈ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಹೆಮ್ಮೆ


  ತಿಪಟೂರು (ಡಿ.08):  ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಗೆ ಸಿಲುಕಿರುವ ಗ್ರಾಮೀಣ ಸೊಗಡಿನ ಭಜನೆ, ಸೋಬಾನೆ, ರಂಗಗೀತೆ ಮುಂತಾದ ಕಲಾ ಪ್ರಕಾರಗಳು ಇಂದಿನ ದಿನಮಾನಗಳಲ್ಲಿ ಕ್ಷೀಣಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ತಿಪಟೂರಿನ ಕಲ್ಪಶ್ರೀ ಕಲಾವಿದರ ಸಂಘವು ಈ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವಂತದ್ದಾಗಿದೆ ಎಂದು ಹಾಲ್ಕುರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಮಹೇಶ್‌ ತಿಳಿಸಿದರು.

ತಾಲೂಕಿನ ಹಾಲ್ಕುರಿಕೆ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ (Temple)  ಹನುಮ ಜಯಂತಿಯ ಪ್ರಯುಕ್ತ ಕಲ್ಪಶ್ರೀ ಕಲಾವಿದರ ಸಂಘದ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ 2022ರ ಭಜನೆ ಹಾಗೂ ರಂಗಗೀತೆ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ತಲೆಮಾರಿನಿಂದ ಬಂದಿರುವ ಅನೇಕ ಜಾನಪದ, ರಂಗಗೀತೆ, ಕಲಾ (Art)  ಪ್ರಕಾರಗಳು ಗ್ರಾಮೀಣ ಭಾಗದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ಕಂಡು ಬರುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಕಲಾವಿದರು ಸಾಮಾನ್ಯ ವ್ಯಕ್ತಿಗಳಲ್ಲ. ಕಲೆಯನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಸಮಾಜಕ್ಕೆ ಬದಲಾವಣೆಯ ಶಕ್ತಿ ತುಂಬುವ ದೊಡ್ಡ ಶಕ್ತಿಗಳಾಗಿದ್ದು, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವೆಂದರು.

Tap to resize

Latest Videos

ಕಲ್ಪ ಶ್ರೀ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಟಿ.ಎಚ್‌. ಬಸವರಾಜು ಮಾತನಾಡಿ, ತಾಲೂಕಿನ ಕಲ್ಪಶ್ರೀ ಕಲಾವಿದರ ಸಂಘದ ಎಲ್ಲ ಕಲಾವಿದರು ಹಾಗೂ ಸಾರ್ವಜನಿಕರ ಸಹಕಾರದಿಂದ ಪ್ರತಿ ವರ್ಷ ತಾಲೂಕಿನ ವಿವಿಧ ಭಾಗಗಳಲ್ಲಿ ಅನೇಕ ನಾಟಕ, ರಂಗಗೀತೆ, ಭಜನೆ ಮುಂತಾದ ಕಲಾಪ್ರಕಾರಗಳನ್ನು ಪ್ರದರ್ಶಿಸುತ್ತಾ ಬಂದಿದ್ದು ಮುಂದೆಯೂ ಎಲ್ಲರ ಸಹಕಾರದಿಂದ ಸಂಘವು ಮುನ್ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜು ಉಪಾಧ್ಯಕ್ಷ ಮಹಾಲಿಂಗಪ್ಪ, ಪದಾಧಿಕಾರಿಗಳಾದ ಆಲೂರು ಲೋಕೇಶ್‌, ಆದಿ ನಾಯಕನಹಳ್ಳಿ ರಮೇಶ್‌, ಹಿರಿಯ ಕಲಾವಿದೆ ಸುಮಿತ್ರಮ್ಮ, ರಾಜೇಶ್ವರಿ, ಹಾರ್ಮೋನಿಯಂ ಮಾಸ್ಟರ್‌ ಶಂಕ್ರಪ್ಪ, ತಬಲ ರಾಯಚಾರ್‌, ರಾಮಾಯಣ ಹಾಗೂ ಕುರುಕ್ಷೇತ್ರ ನಾಟಕದ ರಂಗಗೀತೆಗಳನ್ನು ನಡೆಸಿಕೊಟ್ಟರು. ಮಾರುತಿ ಭಜನಾ ಸಂಘದ ಗುರುಮೂರ್ತಿ ಷಡಕ್ಷರಿ, ಪಲಾರಯ್ಯ ಸಂಗಡಿಗರಿಂದ ಭಜನಾ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ ಸೋಮಶೇಖರಯ್ಯ, ಸೋಬಾನೆ ಕಲಾವಿದರಾದ ದೊಡ್ಡಮ್ಮ ರಾಜಣ್ಣ ಸೇರಿದಂತೆ ಆಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಂಘವು ಕಳೆದ 20 ವರ್ಷಗಳ ಹಿಂದೆ ಸ್ಥಾಪನೆಯಾಗಿ ತಾಲೂಕಿನಾದ್ಯಂತ ಅನೇಕ ಸದಸ್ಯರ ಒಳಗೊಂಡು ಎಲ್ಲರ ಸಹಕಾರದಿಂದ ಕಲೆಯ ಪ್ರದರ್ಶನಗಳನ್ನು ಮಾಡುತ್ತಾ ಜಿಲ್ಲೆಯಲ್ಲೆ ಉತ್ತಮ ಕಲಾಸಂಘವೆಂದು ಹೆಸರು ಪಡೆದಿದೆ. ಯಕ್ಷಗಾನ, ಜಾನಪದ, ಕೋಲಾಟ, ಸೋಬಾನೆ ಪದ, ಡೊಳ್ಳು ಕುಣಿತ, ಕಂಸಾಳೆ, ನಂದೀಧ್ವಜ ಕುಣಿತ, ಸುಗ್ಗಿಹಾಡು, ವೀರಗಾಸೆ, ಗೊರವರ ಕುಣಿತ, ಲಂಬಾಣಿ ನೃತ್ಯ ಇವುಗಳನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಇಂದಿನ ಜನತೆಯ ಅದ್ಯ ಕರ್ತವ್ಯವಾಗಿದೆ.

ಸಾರ್ಥವಳ್ಳಿ ಶಿವಕುಮಾರ್‌ ಸಾಹಿತಿ

ಫೇಸ್‌ಬುಕ್‌ನಿಂದ ಯಾಮಾರ್ಬೇಡಿ 

ಸೋಷಿಯಲ್ ಮೀಡಿಯಾ ಹೊರತುಪಡಿಸಿದ ಒಂದು ಜೀವನವನ್ನು ಊಹಿಸುವುದು ಸಹ ಕಷ್ಟ. ಹೀಗಾಗಿಯೇ ಇವತ್ತಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಆಂಡ್ರಾಯ್ಡ್ ಮೊಬೈಲ್ ಬಳಸ್ತಾರೆ. ವಾಟ್ಸಾಪ್‌, ಫೇಸ್‌ಬುಕ್, ಇನ್‌ಸ್ಟಾಗ್ರಾಂನ್ನು ಡೌನ್‌ಲೋಡ್ ಮಾಡಿಕೊಳ್ತಾರೆ. ಯುವಜನರು ಈ ಸಾಮಾಜಿಕ ಜಾಲತಾಣ (Social media)ಗಳನ್ನು ರೀಲ್ಸ್‌, ವೀಡಿಯೋ ನೋಡೋಕೆ ಹೆಚ್ಚು ಬಳಸ್ತಾರೆ. ಅದನ್ನು ಹೊರತುಪಡಿಸಿ ಚಾಟಿಂಗ್, ವೀಡಿಯೋ ಕಾಲ್‌ ಅಂತ ಮಾಡ್ತಾರೆ. ಇನ್ನೂ ಕೆಲವೊಬ್ಬರು ಈ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ಸ್‌ನ್ನು ಮಾಡಿಕೊಳ್ತಾರೆ. ನನಗ್ಯಾರೂ ಫ್ರೆಂಡ್ಸೇ ಇಲ್ಲ ಎಂದು ಅಂದ್ಕೊಳ್ಳೋರು, ಒಂಟಿ (Alone)ಯಾಗಿರುವವರು ಹೀಗೆಲ್ಲಾ ಮಾಡೋದು ಹೆಚ್ಚು ಆದ್ರೆ ಇದು ಎಷ್ಟೋ ಬಾರಿ ಯಡವಟ್ಟಿಗೂ ಕಾರಣವಾಗುತ್ತೆ.

ಬೋರಾಗ್ತಿದೆ ಅಂತ ಸೋಷಿಯಲ್ ಮೀಡಿಯಾ ಬಳಸಲು ಆರಂಭಿಸಿದವರು ಅದಕ್ಕೆ ಅಡಿಕ್ಟ್ ಆಗಿ ಬಿಡ್ತಾರೆ. ಜೀವನದ ಸಮಸ್ಯೆಗಳಿಂದ ಹೊರ ಬಂದು ರಿಲ್ಯಾಕ್ಸ್ ಆಗೋಕೆ ಇವುಗಳ ಬಳಕೆ ತುಂಬಾ ಬೆಸ್ಟ್ ಅನಿಸೋಕೆ ಶುರುವಾಗುತ್ತೆ. ಹೀಗಾಗಿಯೇ ಶಾಲೆ ಬಿಟ್ಟ ಹುಡುಗರು ಅಪ್ಪನ ಬೈಗುಳದಿಂದ ಬೇಸತ್ತು, ಗೃಹಿಣಿಯರು (Housewife) ಗಂಡನ ಕಿರುಕುಳದಿಂದ ರೋಸಿ ಹೋಗಿ, ಹುಡುಗಿ, ಬಾಯ್‌ಫ್ರೆಂಡ್‌ ನೆಗ್ಲೆಕ್ಟ್ ಮಾಡ್ತಿದ್ದಾನೆ ಅನ್ನೋ ಕಾರಣ ಕೊಟ್ಟು ಇಂಥಾ ಸೋಷಿಯಲ್‌ ಮೀಡಿಯಾವನ್ನೇ ನೆಚ್ಚಿಕೊಳ್ತಾರೆ. ಅದರಲ್ಲೂ ಹೆಚ್ಚಿನವರು ತಪ್ಪದೇ ಫೇಸ್‌ಬುಕ್ ಬಳಸ್ತಾರೆ. ತಾವು ಹೋದ ಸ್ಥಳಗಳು, ಫೋಟೋಗಳನ್ನು ಇದರಲ್ಲಿ ಶೇರ್ ಮಾಡ್ತಾರೆ.

WhatsApp Hack: 50 ಕೋಟಿ ಜನರ ವಾಟ್ಸಪ್‌ ಡೇಟಾ ಸೇಲ್..! 60 ಲಕ್ಷ ಭಾರತೀಯರ ವಾಟ್ಸಪ್‌ ನಂಬರ್‌ಗೂ ಕುತ್ತು..!

ಫೇಸ್‌ಬುಕ್‌ನಲ್ಲಿ ಫ್ರೆಂಡ್ಸ್ ಮಾಡ್ಕೊಳ್ಳೋದು ಸರೀನಾ ?
ಫೇಸ್‌ಬುಕ್‌ ಸಮಯ ಕಳೆಯೋಕೆ ಹೆಚ್ಚಿನವರು ಬಳಸೋ ಸಾಧನ. ಹಾಗೆ ಸುಮ್ನೆ ಸ್ಕ್ರಾಲ್ ಮಾಡ್ತಾ ಮತ್ತೊಬ್ಬರ ಪೋಟೋಗೆ ಲೈಕ್‌ ಕೊಡ್ತಾ ಹೋಗೋದು ಅಷ್ಟೆ. ಆದರೆ ಕೆಲವೊಬ್ಬರು ಅದನ್ನೋ ಮೀರಿ ತಮ್ಮ ಸಮಸ್ಯೆಗಳಿಗೆ (Problems) ಅಲ್ಲಿ ಪರಿಹಾರ ಹುಡುಕೋಕೆ ಶುರು ಮಾಡ್ತಾರೆ. ಹಾಯ್ ಎಂದು ಕಳುಹಿಸಿದವರಿಗೆ ಹಲೋ ಎಂದು ಕಳುಹಿಸಿ, ತಿಂಡಿ ಆಯ್ತಾ, ಊಟ ಆಯ್ತಾ ಎಂದು ಆರಂಭಿಸಿ ಎಲ್ಲಾ ಪರ್ಸನಲ್‌ ವಿಚಾರಗಳನ್ನು ಹಂಚಿಕೊಳ್ಳೋಕೆ ಶುರು ಮಾಡ್ತಾರೆ. ಅದೆಷ್ಟೋ ಬಾರಿ ಮನೆಯಲ್ಲಿನ ಸಮಸ್ಯೆಗಳಿಂದ ಹೊರಬರೋಕೆ ಇಂಥಾ ಫ್ರೆಂಡ್ಸ್ ಸಾಂತ್ವನ ನೀಡುವ ಹೆಗಲು ಅಂತನಿಸಬಹುದು. ಆದ್ರೆ ಹೀಗೆ ಫೇಸ್‌ ಬುಕ್ ಮೂಲಕ ಫ್ರೆಂಡ್ಸ್ ಆದವರು ಎಲ್ಲಿಯವರು, ಎಂಥವರು ಎಂದು ನಮಗೆ ತಿಳಿದಿರುವುದಿಲ್ಲ. ಫೇಕ್‌ ವ್ಯಕ್ತಿಯೂ ಆಗಿರಬಹುದು ಹೀಗಾಗಿ ಇಲ್ಲಿ ಅದೆಷ್ಟೋ ಬಾರಿ ಅನಾಹುತಗಳು ನಡೆಯುತ್ತವೆ.

ಹುಡುಗಿಯರಿಗೆ ಮೋಸ, ಬ್ಲ್ಯಾಕ್‌ಮೇಲ್‌
ಸುಮ್ನೆ ಚಾಟ್ ಮಾಡ್ತೀನಿ ಅಂತ ಹೊರಟ ಹುಡುಗಿ, ಹುಡುಗನನ್ನು ಹಚ್ಚಿಕೊಳ್ತಾಳೆ. ತನ್ನ ಎಲ್ಲಾ ಮಾಹಿತಿಯನ್ನು ಹೇಳ್ತಾಳೆ. ಬಣ್ಣದ ಮಾತುಗಳಿಗೆ ಮರುಳಾಗಿ ಆತ ಹೇಳಿದ ರೀತಿಯ ಅಶ್ಲೀಲ ಫೋಟೋ, ವೀಡಿಯೋಗಳನ್ನು ಮಾಡಿ ಕಳುಹಿಸ್ತಾಳೆ. ಇದನ್ನೇ ದಾಳವಾಗಿಟ್ಟು ಯುವಕ, ಆಕೆಗೆ ಭವಿಷ್ಯದಲ್ಲಿ (Future) ಟಾರ್ಷರ್ ಕೊಡಲು ಆರಂಭಿಸುತ್ತಾನೆ. ಆಕೆಯ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕಾಗಿ, ಒಡವೆಗಾಗಿ, ಹೊಟೇಲ್‌ಗೆ ಬರುವಂತೆ ಒತ್ತಾಯಿಸುತ್ತಾನೆ. ಹೀಗೆ ಮೋಸ ಹೋದವರಲ್ಲಿ ಮಹಿಳೆಯರೂ ಸೇರಿದ್ದಾರೆ.  

ಹೊಸ ಫ್ರೆಂಡ್ಸ್ ಮಾಡಿಕೊಳ್ಳಲು ಕಷ್ಟವಾದರೆ,ಚುಯಿಂಗ್ ಗಮ್ ಹೆಲ್ಪ್‌ಗೆ ಬರುತ್ತೆ, ಹೇಗೆ?

ಮದುವೆಯಾದ ಗೃಹಿಣಿಯರು ಸಹ ಗಂಡನ ವರ್ತನೆಯಿಂದ ಬೇಸತ್ತು ಅಥವಾ ಕೆಲವೊಮ್ಮೆ ಟೈಂಪಾಸ್‌ಗಾಗಿ ಎಫ್‌ಬಿಯಲ್ಲಿ ಟೆಕ್ಸ್ ಮಾಡುವವರ ಜೊತೆ ಚಾಟ್ ಶುರು ಮಾಡುತ್ತಾರೆ. ತಮ್ಮ ಮನೆಯ ಸಮಸ್ಯೆಯಿಂದ ರಿಲೀಫ್ ಪಡೆಯಲು ಈ ರೀತಿ ಫ್ಲರ್ಟ್ ಮಾಡೋದೆ ಉತ್ತಮ ಪರಿಹಾರ ಎಂದುಕೊಳ್ಳುತ್ತಾರೆ. ಕೊನೆಗೊಮ್ಮೆ ಅದುವೇ ಉರುಳಾಗಿ ಬಿಡುತ್ತದೆ.

ಎಲ್ಲಾ ರೀತಿಯಲ್ಲಿ ಚಾಟ್ ಮಾಡಿದ ನಂತರ ಗಂಡಸರು ಅದೇ ಚಾಳಿಯನ್ನು ಮುಂದುವರಿಸುತ್ತಾರೆ. ಆದರೆ ಗೃಹಿಣಿಯಾದವಳು ಎಚ್ಚೆತ್ತು ವಾಪಾಸ್ ತನ್ನ ಕೌಟುಂಬಿಕ ಜೀವನಕ್ಕೆ ಬರಬೇಕೆಂದು ಬಯಸುತ್ತಾಳೆ. ಆದರೆ ಈ ಸಂದರ್ಭದಲ್ಲಿ ಹುಡುಗನ ಕಿರುಕುಳ, ಹಣದ ಡಿಮ್ಯಾಂಡ್ , ಮನೆ ಮಂದಿಗೆ ತಿಳಿಸಿಬಿಡುತ್ತೇನೆ ಎಂಬ ಬೆದರಿಕೆ ಮೊದಲಾದ ಕಾರಣದಿಂದ ಇದು ಸಾಧ್ಯವಾಗುವುದಿಲ್ಲ. ಹೀಗೆ ಮೋಸ ಹೋಗುವ ಅದೆಷ್ಟೋ ಹುಡುಗರು, ಗೃಹಿಣಿಯರು ಇದ್ದಾರೆ. ಸಮಸ್ಯೆಯ ಸುಳಿಯಿಂದ ಹೊರಬರಲಾಗದೆ ಒದ್ದಾಡುತ್ತಾರೆ. ಹೀಗಾಗಿ ಯಾವಾಗಲೂ ಎಫ್‌ಬಿಯಲ್ಲಿ ಫ್ರೆಂಡ್ಸ್ ಮಾಡ್ಕೊಳ್ಳೋ ಮುನ್ನ ಎಚ್ಚರವಿರಲಿ. 

click me!