
ಬೀದರ್, [ಮೇ.05): ಗಾಂಜಾ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 35 ಲಕ್ಷಕ್ಕೂ ಅಧಿಕ ಮೌಲ್ಯದ 650 ಕೆಜಿ ಗಾಂಜಾ, ಒಂದು ಕಾರು ಹಾಗೂ ಮೂರು ಬೈಕ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಔರಾದ್ ತಾಲೂಕಿನ ಘಾಮಾ ತಾಂಡದ ಜಮೀನಿನಲ್ಲಿ 650 ಕೆಜಿ ಗಾಂಜಾವನ್ನ ಸಂಗ್ರಹಿಸಿಡಲಾಗಿತ್ತು. ಈ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅನಿಲ್, ವಿಜಯ್ ಎಂಬುವರನ್ನ ಬಂಧಿಸಿದ್ದಾರೆ.
ಗೋಪಾಲ್, ಅಮರೇಶ್ ಎಂಬುವವರು ಪರಾರಿಯಾಗಿದ್ದು, ಅವರಿಗಾಗಿಯೂ ಬಲೆ ಬೀಸಲಾಗಿದೆ. ಈ ಗಾಂಜಾವನ್ನ ಮಹಾರಾಷ್ಟ್ರ, ಗೋವಾ, ಬೆಂಗಳೂರಿಗೆ ಸಾಗಿಸಲಾಗುತಿತ್ತು.
ವಿಶೇಷ ಅಂದ್ರೆ ಪ್ರಕರಣ ಪತ್ತೆ ಮಾಡಿದ ಪೊಲೀಸ್ ತಂಡಕ್ಕೆ ಒಂದು ಲಕ್ಷ ನಗದು ಬಹುಮಾನವನ್ನ ಎಸ್ಪಿ ಶ್ರೀಧರ್ ಘೋಷಣೆ ಮಾಡಿದ್ದಾರೆ.