ಅಪಘಾತಕ್ಕೊಳಗಾಗಿ ರಸ್ತೆ ಮಧ್ಯೆ ನರಳಾಡುತ್ತಿದ್ದವರಿಗೆ ನೆರವಾಗುವ ಮೂಲಕ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮಾನವೀಯತೆ ಮೆರೆದಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಸಂಕೇನಹಳ್ಳಿ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಮಾ.27): ಅಪಘಾತಕ್ಕೊಳಗಾಗಿ ರಸ್ತೆ ಮಧ್ಯೆ ನರಳಾಡುತ್ತಿದ್ದವರಿಗೆ ನೆರವಾಗುವ ಮೂಲಕ ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಮಾನವೀಯತೆ ಮೆರೆದಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಸಂಕೇನಹಳ್ಳಿ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೂವರು ಮಹಿಳೆಯರು ಗಾಯಗೊಂಡಿದ್ದರು. ಬೇಲೂರು ಕಡೆಗೆ ರೇವಣ್ಣ ಕಾರಿನಲ್ಲಿ ಹೋಗೋ ವೇಳೆ ಸಂಕೇನಹಳ್ಳಿ ಬಳಿ ನಡೆದಿದ್ದ ಅಪಘಾತ (Accident) ಗಮನಿಸಿ ಕಾರು ನಿಲ್ಲಿಸಿ ಗಾಯಾಳುಗಳಿಗೆ ನೆರವು ನೀಡಿದರು.
undefined
ಅಂಬ್ಯುಲೆನ್ಸ್ ಗೆ (Ambulance) ಕರೆ ಮಾಡಿಸಿ, ಅಂಬ್ಯುಲೆನ್ಸ್ ಬರುವವರೆಗೂ ಘಟನಾ ಸ್ಥಳದಲ್ಲೆ ಇದ್ದು, ಗಾಯಾಳುಗಳಿಗೆ ಧೈರ್ಯ ತುಂಬಿದ್ದರು. ಅಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಹಾಸನ ಹಿಮ್ಸ್ ಆಸ್ಪತ್ರೆ ಗೆ ಕಳುಹಿಸಿ, ಹಿಮ್ಸ್ ನಿರ್ದೇಶಕರಿಗೆ ಕರೆ ಮಾಡಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ. ಮಳೆಯ ನಡುವೆ ತಮ್ಮ ಕಾರು ನಿಲ್ಲಿಸಿ, ಅಪಘಾತದಲ್ಲಿ ಗಾಯಗೊಂಡವರಿಗೆ ಧೈರ್ಯ ಹೇಳಿ ಚಿಕಿತ್ಸೆ ಗೆ ಕಳಿಸಿದ ಬಳಿಕ ಸ್ಥಳದಿಂದ ಹೆಚ್ ಡಿ ರೇವಣ್ಣ ತೆರಳಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿತ್ತು.ಹೆಚ್. ಡಿ ರೇವಣ್ಣ ಜೊತೆ ಹೆಚ್. ಡಿ. ಸಿ. ಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್, ಜೆಡಿಎಸ್ ಮುಖಂಡ ದಿಲೀಪ್ ಹಗರೆ, ಈಶ್ವರ್ ಜೊತೆ ಇದ್ದರು.
Karnataka Politics: 'ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಎಚ್.ಡಿ.ರೇವಣ್ಣ ಕಾರಣ'
ಅಭಿಮಾನಿಗಳತ್ತ ನಿಂಬೆ ಹಣ್ಣು ಉರುಳಿಸುತ್ತಾ ರಹಸ್ಯವೊಂದನ್ನು ಹೇಳಿದ ರೇವಣ್ಣ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ನಿಂಬೆಹಣ್ಣಿಗೂ ಏನೋ ಒಂದು ಅವಿನಾಭಾವ ಸಂಬಂಧವಿದ್ದಂತೆಯ.ಶುಭ ಸಂಭ್ರಮದ ಸಮಯ ಅಂತಲ್ಲ, ಕಷ್ಟದ ಸಮಯ ಅಂತಲ್ಲ. ಎಲ್ಲಾ ಸಮಯದಲ್ಲೂ ಅವರು ನಿಂಬೆ ಹಣ್ಣಿನ ಮೊರೆ ಹೋಗ್ತಾರೆ. ಸದ್ಯ ಈಗ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ನಿಂಬೆಹಣ್ಣು ವಿತರಿಸಿದ್ದಾರೆ.
ಹೌದು..ಜಿಲ್ಲೆಯ ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ವೇದಿಕೆ ಮೇಲಿಂದ ನಿಂಬೆ ಹಣ್ಣು ಉರುಳಿಸಿದ್ದಾರೆ. ಶಾಸಕ ಶಿವಲಿಂಗೇಗೌಡರು ರೇವಣ್ಣಗೆ ಒಂದಷ್ಟು ಲಿಂಬೆಹಣ್ಣುಗಳನ್ನು ನೀಡಿದ್ದಾರೆ. ಆ ಲಿಂಬೆಹಣ್ಣುಗಳನ್ನು ರೇವಣ್ಣ ಒಂದೊಂದಾಗಿ ಅಭಿಮಾನಿಗಳತ್ತ ಎಸೆದಿದ್ದು, ಅದನ್ನು ಅಭಿಮಾನಿಗಳು ಸಂಭ್ರಮದಿಂದಲೇ ಸ್ವೀಕರಿಸಿದರು. ಅಲ್ಲದೇ ರೇವಣ್ಣ ನಿಂಬೆಹಣ್ಣು ನೀಡುತ್ತಿರುವುದನ್ನು ನೋಡಿ ಶಾಸಕ ಶಿವಲಿಂಗೇಗೌಡ ನಗೆಬೀರಿದ್ರು.
ಈ ವೇಳೆ ಮಾತನಾಡಿರುವ ರೇವಣ್ಣ, ಚುನಾವಣೆ ಸಂದರ್ಭದಲ್ಲಿ ತಮ್ಮ ಹಿಂದಿರುವ ದೇವರ ಕುರಿತು ಹೇಳಿಕೊಂಡಿದ್ದಾರೆ. ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಯನ್ನು ನಂಬಿ ಕೆಟ್ಟವರಿಲ್ಲ. ಹಿಂದೆ ದೇವೇಗೌಡರಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೈ ತಪ್ಪಿದಾಗ ಬೆಳಗ್ಗಿನ ಜಾವ ಮೂರು ಗಂಟೆಯಲ್ಲಿ ರಂಗನಾಥ ಸ್ವಾಮಿ ಕನಸಿನಲ್ಲಿ ಬಂದು ಅರ್ಜಿ ಹಾಕು ಅಂತ ಹೇಳಿದ್ದರು. ರಂಗನಾಥ ಸ್ವಾಮಿ ಆಜ್ಞೆ ನಂತರವೇ ದೇವೇಗೌಡರು ಚುನಾವಣೆಗೆ ನಿಂತು ಗೆದ್ದಿದ್ದು, ಪ್ರತಿ ಚುನಾವಣೆಯಲ್ಲೂ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಅರ್ಜಿಯನ್ನು ಪೂಜಿಸಿ ನಂತರವೇ ಚುನಾವಣೆಗೆ ಹೋಗುವುದು ಪದ್ಧತಿ. ಒಮ್ಮೆ ರಂಗನಾಥ ಸ್ವಾಮಿಗೆ ಅರ್ಜಿ ಇಟ್ಟು ಪೂಜಿಸದೇ ಹೋದಾಗ ಆ ಸಲ ನಾವು ಸೋತೆವು ಎಂದು ರೇವಣ್ಣ ರಹಸ್ಯವೊಂದನ್ನು ಸಭೆಯಲ್ಲಿ ಬಿಚ್ಚಿಟ್ಟರು.
Karnataka Politics ಸಿಎಂ ಮನೆ ಮುಂದೆ ಹೋದ ರೇವಣ್ಣ, ಎದುರೇಟು ಕೊಟ್ಟ ಸಚಿವ ಅಶ್ವತ್ಥನಾರಾಯಣ
ಹಾಸನ ಜಿಲ್ಲೆ ಅರಸೀಕೆರೆ ನಾಗರಹಳ್ಳಿ ತಿರುಮಲ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಅರಸೀಕೆ ಶಾಸಕ ಶಿವಲಿಂಗೇಗೌಡ ಸೇರಿ ಹಲವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನನಗೆ ಜನ್ಮ ಕೊಟ್ಟ ಜಿಲ್ಲೆ ಹಾಸನ, ರಾಜಕೀಯ ಜನ್ಮ ಕೊಟ್ಟ ಜಿಲ್ಲೆ ರಾಮನಗರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಯಾವ ಟಿವಿ ಹಾಕಿದ್ರು ಹಿಜಬ್-ಕೇಸರಿ ಶಾಲು ವಿವಾದ ಸುದ್ದಿ ನೋಡುತ್ತಿದ್ದೇವೆ. ಅದನ್ನು ಹಾಕಿಸಿದವರು ಯಾರು, ಇದು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿದೆ. ಆದ್ರೆ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿದೆಯಾ ಎಂದು ಪ್ರಶ್ನೆ ಮಾಡಿದರು.