ಹಿಂದು ಎಂದು ಹೇಳಿ ಯುವತಿಯೊರ್ವಳಿಗೆ ಮೋಸ ಮಾಡಿದ ಮುಸ್ಲಿಂ ಯುವಕ| ಯುವತಿಯಿಂದ ಎರಡು ಲಕ್ಷ ರು. ಪಡೆದುಕೊಂಡು ವಂಚನೆ| ಆರೋಪಿಯನ್ನ ಬಂಧಿಸಿದ ಪೊಲೀಸರು| ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಾಬು ಅಬ್ದುಲ್ ಪಾನವಾಲೆ ಬಂಧಿತ ವ್ಯಕ್ತಿ|
ಲೋಕಾಪುರ(ಮೇ.16): ಮುಸ್ಲಿಂ ಯುವಕನೊರ್ವ ತಾನು ಹಿಂದು ಎಂದು ಹೇಳಿ ಯುವತಿಯೊರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಅವಳಿಂದ ಎರಡು ಲಕ್ಷ ರುಪಾಯಿಗಳನ್ನು ಪಡೆದುಕೊಂಡು ನಂತರ ಅವಳಿಗೆ ಮೋಸ ಮಾಡಿದ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಾಬು ಅಬ್ದುಲ್ ಪಾನವಾಲೆ ಬಂಧಿತ ವ್ಯಕ್ತಿ. ಮಂಗಳೂರಿನಿಂದ ಲೋಕಾಪೂರಕ್ಕೆ ಉದ್ಯೋಗ ಅರಿಸಿ ಬಂದಿದ್ದ ಯುವತಿಯೊಂದಿಗೆ ಕೆಲಸ ಮಾಡುವ ಸಮಯದಲ್ಲೇ ಇಬ್ಬರಿಗೂ ಪ್ರೀತಿ ಹುಟ್ಟಿದೆ. ಯುವತಿಯೊರ್ವಳ ಜೊತೆ ಸಲುಗೆ ಬೆಳೆಸಿ ನಾನು ಹಿಂದು ಆಗಿದ್ದು, ನಿನ್ನನ್ನೇ ಮದುವೆ ಆಗುತ್ತೇನೆ ಎಂದು ಅವಳಿಂದ ಎರಡು ಲಕ್ಷ ರುಪಾಯಿಗಳನ್ನು ಪಡೆದುಕೊಂಡಿದ್ದಾನೆ.
ಲಾಕ್‌ಡೌನ್: 'ಅನಾವಶ್ಯಕವಾಗಿ ಮನೆ ಬಿಟ್ಟು ಹೊರ ಬಂದರೆ ಕಠಿಣ ಕ್ರಮ'
ಈ ವೇಳೆ ಯುವತಿಗೆ ಆ ಯುವಕ ಈಗಾಗಲೇ ಮದುವೆ ಆಗಿರುವ ವಿಷಯ ತಿಳಿದು, ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಅವಳಿಗೆ ಬೆದರಿಕೆಯನ್ನು ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ನೀಡಿದ ದೂರಿನ್ವಯ ಲೋಕಾಪುರ ಪೊಲೀಸರು ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಈ ಕುರಿತು ಲೋಕಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.