ವ್ಯಾಪಾರಕ್ಕೆ ನಿರ್ಬಂಧ: ಮಧ್ಯಸ್ಥಿಕೆ ವಹಿಸಿ ಪಾರುಮಾಡಿ, ಪೇಜಾವರ ಶ್ರೀಗಳ ಮೊರೆ ಹೋದ ಮುಸ್ಲಿಂ ಮುಖಂಡರು

By Girish Goudar  |  First Published Mar 30, 2022, 12:38 PM IST

*  ಪೇಜಾವರ ಶ್ರೀಗಳು ನಮಗೆ ಕಿವಿಮಾತು ಹೇಳಿದ್ದಾರೆ
*  ನಮ್ಮ ಒಳಗಿರುವ ಸಮಸ್ಯೆಗಳನ್ನು ಸುಧಾರಿಸಿಕೊಳ್ಳಲು ಸಲಹೆ ನೀಡಿದ್ದಾರೆ 
*  ದೇವಸ್ಥಾನದ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಮನವಿ


ವರದಿ -ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್ ಉಡುಪಿ

ಉಡುಪಿ(ಮಾ.30):  ದೇವಸ್ಥಾನ(Temple) ಮತ್ತು ಇತರ ಧಾರ್ಮಿಕ ಕೇಂದ್ರಗಳ(Religious Centers) ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲಿನ ಆರ್ಥಿಕ ಬಹಿಷ್ಕಾರ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸಿರುವ ಜಾತ್ರಾ ವ್ಯಾಪಾರಿಗಳು(Muslim Traders), ಮುಸ್ಲಿಂ ಸಮುದಾಯದ ನಾಯಕರು ಹಾಗೂ ವಿವಿಧ ಧರ್ಮಗುರುಗಳ ನೇತೃತ್ವದಲ್ಲಿ, ಉಡುಪಿಯ ಪೇಜಾವರಮಠದ ವಿಶ್ವಪ್ರಸನ್ನತೀರ್ಥರನ್ನು (Vishwaprasannateertha Swamiji) ಭೇಟಿಯಾಗಿದ್ದಾರೆ. ಸ್ವಾಮೀಜಿಗಳು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಯಿಂದ ತಮ್ಮನ್ನು ಪಾರುಮಾಡುವಂತೆ ಮನವಿ ಮಾಡಿದ್ದಾರೆ.

Latest Videos

undefined

ದೇವಾಲಯಗಳ ನಗರಿ ಉಡುಪಿಯಲ್ಲಿ(Udupi) ಧಾರ್ಮಿಕ ಮಹೋತ್ಸವಗಳು ಇದೀಗ ಪ್ರತಿದಿನ ನಡೆಯುತ್ತಿದೆ. ಕೆಲವು ಜಾತ್ರೆಗಳಲ್ಲಿ ಮೊದಲೇ ಘೋಷಿಸಿ, ಇನ್ನು ಕೆಲವು ಜಾತ್ರೆಗಳಲ್ಲಿ ಅಘೋಷಿತ ರೀತಿಯಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಬಹಿಷ್ಕಾರ ಮುಂದುವರೆದಿದೆ. ಜಾತ್ರಾ ವ್ಯಾಪಾರವನ್ನೇ ನಂಬಿರುವ 700ಕ್ಕೂ ಅಧಿಕ ಮುಸ್ಲಿಂ ವ್ಯಾಪಾರಿಗಳಿದ್ದಾರೆ. ಕಾಪು ಮಾರಿ ಗುಡಿಯಲ್ಲಿ ಆರಂಭವಾದ ಈ ವ್ಯಾಪಾರ(Business) ಬಹಿಷ್ಕಾರ(Boycott) ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಮುಸ್ಲಿಂ ವ್ಯಾಪಾರಿಗಳೆಲ್ಲಾ ಸೇರಿ ತಮ್ಮ ಸಮುದಾಯದ ಮುಖಂಡರು ಹಾಗೂ ಸಾಮಾಜಿಕ ಸಂಘಟನೆಗಳು ಜೊತೆಗೆ ಉಡುಪಿಯ ಶೋಕಮಾತಾ ಇಗರ್ಜಿಯ ಧರ್ಮಗುರುಗಳಾದ ಫಾ.ಚಾರ್ಲ್ಸ್, ಅವರ ನೇತೃತ್ವದಲ್ಲಿ ಪೇಜಾವರ ಸ್ವಾಮಿಗಳನ್ನು ಭೇಟಿಯಾದರು. ತಾವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸ್ವಾಮೀಜಿಯ ಮುಂದೆ ಹೇಳಿದರು. ವಿಶ್ವೇಶತೀರ್ಥರು ಬದುಕಿದ್ದಾಗ ಇಂತಹ ಸಂದರ್ಭಗಳು ಎದುರಾದಾಗ, ಸೌಹಾರ್ದಯುತ ವಾತಾವರಣ ನೆಲೆಸಲು ಪ್ರಯತ್ನಿಸುತ್ತಿದ್ದರು. ತಾವು ಕೂಡ ನಮಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ನಾನು ಯಾರ ಜೊತೆ ವ್ಯವಹಾರ ಮಾಡ್ಬೇಕು ಗೊತ್ತಿದೆ; ಖಾದರ್ ಗೆ ಶಾಸಕ ಕಾಮತ್ ತಿರುಗೇಟು

ಪೇಜಾವರ ಶ್ರೀಗಳು ಹೇಳಿದ್ದೇನು?

ಸಮಾಜದಲ್ಲಿ ಶಾಂತಿ-ಸಾಮರಸ್ಯ ಸೌಹಾರ್ದ ನೆಮ್ಮದಿ ಅವಶ್ಯವಾಗಿ ಬೇಕು.ಆದರೆ ಒಂದು ಗುಂಪಿನಿಂದ ಸಾಮರಸ್ಯ ಸಾಧ್ಯವಿಲ್ಲ. ಹಿಂದೂ(Hindu) ಸಮಾಜ ಬಹಳ ಕಾಲದಿಂದ ನೋವನ್ನು ಉಂಡಿದೆ. ಹಲವು ಅಹಿತಕರ ಘಟನೆಗಳಿಂದ ಹಿಂದೂ ಸಮಾಜ ಬಹಳ ನೋವಿನಲ್ಲಿದೆ. ನಾಲ್ಕು ಮಂದಿ ಧಾರ್ಮಿಕ ಮುಖಂಡರು ಕುಳಿತು ಮಾತನಾಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಾಗಿದೆ. ನಿರಂತರವಾಗಿ ಅನ್ಯಾಯವಾದಾಗ ಬೇಸರ ನೋವು ಸ್ಫೋಟವಾಗುತ್ತದೆ. ಹಿಂದೂ ಸಮಾಜ ನೋವು ಉಂಡು ಉಂಡು ಬೇಸರವಾಗಿ ಇಂದು ಸ್ಫೋಟಗೊಂಡಿದೆ. ಈ ಬೆಳವಣಿಗೆಗೆ ಕಾರಣ ಏನು ಎಂಬುದು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಬೇಕು. ವಿಧವೆ ಮಹಿಳೆಯ ಕೊಟ್ಟಿಗೆಯಲ್ಲಿದ್ದ ಎಲ್ಲಾ ಹಸುಗಳನ್ನು(Cow) ಕಳ್ಳತನ(Theft) ಮಾಡಲಾಗಿದೆ.ಆ ಮಹಿಳೆ ಬೀದಿಗೆ ಬೀಳುವ ವಾತಾವರಣ ನಿರ್ಮಾಣವಾಗಿದೆ.ಇಂತಹ ಅನೇಕ ಘಟನೆಗಳು ಸಮಾಜದಲ್ಲಿ ನಡೆದು ನೋವು ಮಡುಗಟ್ಟಿದೆ.
ನಾನು ಕೂಡ ಇಂತಹ ಹಲವಾರು ನೋವನ್ನು ಅನುಭವಿಸಿದ್ದೇನೆ. ನಾವು ಶಾಂತಿ ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಅದು ಸಾಧ್ಯವಿಲ್ಲ.

Hijab Row: ಉತ್ತರ ಕರ್ನಾಟಕದಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

ತಪ್ಪು ಮಾಡಿದವರನ್ನು ಅವರದೇ ಸಮಾಜ ಶಿಕ್ಷಿಸಲಿ.

ಮಾಡಿದ ತಪ್ಪನ್ನು ಆ ಸಮಾಜ ಪ್ರತಿಭಟಿಸಲಿ.ಒಬ್ಬರು ಮಾಡಿದ ಅನ್ಯಾಯ ಇಡೀ ಸಮಾಜಕ್ಕೆ ತಟ್ಟುತ್ತದೆ.ತಪ್ಪಿತಸ್ಥರಿಗೆ ಬೆನ್ನೆಲುಬಾಗಿ ನಿಲ್ಲದಿದ್ದರೆ ಹಿಂದೂ ಸಮಾಜಕ್ಕೆ ನೋವಾಗುವುದಿಲ್ಲ ಜಾತ್ರಾ ವ್ಯಾಪಾರಿಗಳ ಒಕ್ಕೂಟದ ಕಾರ್ಯದರ್ಶಿ ಆರಿಫ್ ಮಾತು ಸೌಹಾರ್ದ ಮತ್ತು ಏಕತೆಯಲ್ಲಿ ಉಡುಪಿ ಜಿಲ್ಲೆ ಮಾದರಿಯಾಗಿದೆ. ಈ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು.ಇಂದು ಎಲ್ಲಾ ಧರ್ಮಗುರುಗಳು ಬಂದು ಸ್ವಾಮೀಜಿಯನ್ನು ಭೇಟಿಯಾಗಿದ್ದೇವೆ. ವ್ಯಾಪಾರಿಗಳು ನಮ್ಮ ಸಮಸ್ಯೆಯನ್ನು ಸ್ವಾಮೀಜಿಗಳ ಬಳಿ ಹೇಳಿ ಕೊಂಡಿದ್ದೇವೆ.ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗಿಲ್ಲ.ಕೆಲವೊಂದು ಘಟನೆಗಳಿಂದ ಮನಸ್ಸಿಗೆ ನೋವಾಗಬಹುದು. ಪೇಜಾವರ ಶ್ರೀಗಳು ನಮಗೆ ಕಿವಿಮಾತು ಹೇಳಿದ್ದಾರೆ. ನಮ್ಮ ಒಳಗಿರುವ ಸಮಸ್ಯೆಗಳನ್ನು ಸುಧಾರಿಸಿಕೊಳ್ಳಲು ಸಲಹೆ ನೀಡಿದ್ದಾರೆ.

ಪೇಜಾವರಶ್ರೀಗಳ ಮಾತು ಸತ್ಯವಾಗಿದೆ. ನಮ್ಮ ಪಂಗಡದಲ್ಲೂ ಕೆಲವರು ಬೇಡದ ಕೆಲಸ ಮಾಡಿರಬಹುದು. ಮುಂದಿನ ದಿನಗಳಲ್ಲಿ ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಹಿಂದೂ ಪಂಗಡಕ್ಕೆ ನೋವಾಗುವ ರೀತಿಯಲ್ಲಿ ನಮ್ಮವರು ಮಾಡಿರಬಹುದು. ಪೇಜಾವರ ಶ್ರೀಗಳು ಅದೇ ವಿಚಾರವನ್ನು ಹೇಳಿದ್ದಾರೆ.ಅಂಥವರನ್ನು ದೂರ ಇಡುವ ಯತ್ನವನ್ನು ನಮ್ಮ ಮುಖಂಡರು ಮಾಡಬೇಕು. ಇಂದಲ್ಲ ನಾಳೆ ವ್ಯಾಪಾರ ಸುಧಾರಿಸಿಕೊಳ್ಳುವ ವಿಶ್ವಾಸವಿದೆ.ಬೀದಿ ವ್ಯಾಪಾರಿಗಳು ತುಂಬಾ ಕಷ್ಟದಲ್ಲಿದ್ದೇವೆ. ಕೊರೋನಾ(Coronavirus) ಬಂದ ನಂತರ ತುಂಬಾ ನಷ್ಟ ಅನುಭವಿಸಿದ್ದೇವೆ. ಇದೇ ವ್ಯಾಪಾರ ನಂಬಿಕೊಂಡವರು ನಾವು. ದೇವಸ್ಥಾನದ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಸ್ವಾಮೀಜಿ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮವರನ್ನು ಸರಿಮಾಡಿಕೊಂಡು ಮುಂದೆ ಎಲ್ಲವೂ ಸುಧಾರಿಸಲು ಪ್ರಯತ್ನಿಸುತ್ತೇವೆ.
 

click me!