Gadag: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಮ್ಯಾನ್ ಹೋಲ್‌ಗೆ ಇಳಿದ ಕಾರ್ಮಿಕರು!

Published : Mar 30, 2022, 12:21 PM IST
Gadag: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಮ್ಯಾನ್ ಹೋಲ್‌ಗೆ ಇಳಿದ ಕಾರ್ಮಿಕರು!

ಸಾರಾಂಶ

ಗದಗ ಜಿಲ್ಲೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಮ್ಯಾನ್ ಹೋಲ್‌ಗೆ ಕಾರ್ಮಿಕರನ್ನ ಇಳಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಕ್ಕಿಂಗ್‌ನಂಥ ಅತ್ಯಾಧುನಿಕ ಯಂತ್ರಗಳಿದ್ರೂ ಕಾರ್ಮಿಕರನ್ನ ಮ್ಯಾನ್ ಹೋಲ್‌ಗೆ ಇಳಿಸಿರೋದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. 

ಗದಗ (ಮಾ.30): ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಮ್ಯಾನ್ ಹೋಲ್‌ಗೆ (Manhole) ಕಾರ್ಮಿಕರನ್ನ (Workers) ಇಳಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಕ್ಕಿಂಗ್‌ನಂಥ ಅತ್ಯಾಧುನಿಕ ಯಂತ್ರಗಳಿದ್ರೂ ಕಾರ್ಮಿಕರನ್ನ ಮ್ಯಾನ್ ಹೋಲ್‌ಗೆ ಇಳಿಸಿರೋದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮ್ಯಾನ್ಯುಯಲ್ ಸ್ಕಾರ್ವೇಜರ್ಸ್ ಸಮೀಕ್ಷೆ ಸಮಿತಿಯ ಸದಸ್ಯರೇ ಈ ವಿಡಿಯೋ ಚಿತ್ರೀಕರಿಸಿದ್ದಾರೆ‌‌. ಕಳೆದ ಕೆಲ ದಿನಗಳಿಂದಲೂ ಈ ರೀತಿಯ ಘಟನೆ ನಡೀತಿವೆ ಎನ್ನಲಾಗಿದೆ‌. ಹ್ಯಾಂಡ್ ಗ್ಲೌಸ್ ಸೇರಿದಂತೆ ಸುರಕ್ಷತೆ ಕ್ರಮಗಳನ್ನ ಅನುಸರಿಸದೇ ಕಾರ್ಮಿಕರು ಮ್ಯಾನ್ ಹೋಲ್‌ಗೆ ಇಳಿದಿದ್ದಲ್ಲದೇ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ಮ್ಯಾನ್ ಹೋಲ್‌ನಲ್ಲಿ ಇಳಿದ ಕಾರ್ಮಿಕರು ಮೃತಪಟ್ಟ ಉದಾಹರಣೆಗಳಿದ್ದರೂ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ.

ಘಟನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನಿರ್ವಹಣಾ ಮೇಲ್ವಿಚಾರಕ ಸಿದ್ದು, ಘಟನೆ ನನ್ನ ಸಮ್ಮುಖದಲ್ಲೇ ನಡೆದಿದೆ. ಮ್ಯಾನ್ ಹೋಲ್‌ನಲ್ಲಿ ಟೂಲ್ ಬಿದ್ದಿತ್ತು, ಕಾಲಿನಿಂದ ಎತ್ತಲು ಕಾರ್ಮಿಕರು ಪ್ರಯತ್ನಿಸಿದ್ದರು ಆದರೆ ಆಗಿರಲಿಲ್ಲ. ಹೀಗಾಗಿ ಕೆಳಗಿಳಿದು ಹೊರತೆಗಿದಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಆವರಣದಲ್ಲೇ ಅನಿಷ್ಟ ಪದ್ಧತಿ ಜೀವಂತವಾಗಿದೆ ಎನ್ನುವ ಮಾತು ಕೇಳಿ ಬರ್ತಿದೆ. ಘಟನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಎಮ್ ಸುಂದರೇಶ್ ಬಾಬು, ತನಿಖೆ ನಡೆಸೋದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. 

Manhole Tragedy in Mysuru : ಉಸಿರುಗಟ್ಟಿ ಪೌರಕಾಮಿರ್ಕ ಸಾವು : ಪರಿಹಾರಕ್ಕೆ ಒತ್ತಾಯ

ಘಟನೆ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇನೆ‌. ಮ್ಯಾನ್ ಹೋಲ್‌ನಲ್ಲಿ ಟೂಲ್ ಬಿದ್ದಿತ್ತು. ಎತ್ತಿಕೊಳ್ಳಲು ಕೆಳಗೆ ಇಳಿದಿದ್ದರು ಅನ್ನೋ ಮಾಹಿತಿ ಇದೆ. ಗ್ಲೌಸ್ ಸೇರಿದಂತೆ ಸುರಕ್ಷತೆ ಕ್ರಮ ವಹಿಸಲು ಹೇಳಿದ್ದೆವು. ಯಾವ ಕಾರಣಕ್ಕೆ ಗ್ಲೌಸ್ ಹಾಕಿಲ್ಲ ಅನ್ನೋ ಬಗ್ಗೆಯೂ ವರದಿ ತರೆಸಿಕೊಳ್ಳುತ್ತೇನೆ ಅಂತಾ ಹೇಳಿದರು. ಎಮ್ ಎಸ್ ಕಾಯ್ದೆ 2013 ಪ್ರಕಾರ ಮ್ಯಾನ್ ಹೋಲ್‌ನಲ್ಲಿ ಕಾರ್ಮಿಕರು ಇಳಿಸುವುದು ಅಪರಾಧ. ಅಮಾನುಷ ಆಚರಣೆ ಬಗ್ಗೆ ಈ ಹಿಂದಿನಿಂದಲೂ ಹೋರಾಟ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಆದರೂ ಈಗಲೂ ಈ ರೀತಿಯ ಪದ್ಧತಿ ಜಾರಿಯಲ್ಲಿರೋದು ಮತ್ತೊಮ್ಮೆ ಚರ್ಚೆ ನಡೆಯುವಂತೆ ಮಾಡಿದೆ. ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇನ್ನಾದರೂ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ವಿವಿಧ ಕಾರ್ಮಿಕರು, ನೌಕರರ ಬೃಹತ್‌ ಮುಷ್ಕರ: ಕೇಂದ್ರ ಕಾರ್ಮಿಕ ಸಂಘಟನೆಗಳು, ನೌಕರರ ಫೆಡರೇಶನ್‌ಗಳು ಮತ್ತು ರೈತ ಕೃಷಿಕೂಲಿಕಾರರ ಸಂಘಟನೆಗಳ ಬೆಂಬಲದೊಂದಿಗೆ ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಮಂಗಳವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ವಿವಿಧ ವಿಭಾಗದ ಕಾರ್ಮಿಕರು, ನೌಕರರು ಮುಷ್ಕರ ನಡೆಸಿದರು. ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಲಾಯಿತು.

ರಾಮನಗರ : ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಡಿಸಿಎಂ

ಬೇಡಿಕೆಗಳಿವು: ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವುದು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರೀಯ ಅಬಕಾರಿ ತೆರಿಗೆಯನ್ನು ಕಡಿಮೆ ಮಾಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ . 7,500 ನೇರ ನಗದು ವರ್ಗಾವಣೆ ಮಾಡಬೇಕು. ಕಾರ್ಪೋರೇಟ್‌ ಬಂಡವಾಳಪರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಜತೆಗೆ ವಿದ್ಯುತ್‌ (ತಿದ್ದುಪಡಿ) ಮಸೂದೆಯನ್ನು ವಾಪಾಸ್‌ ಪಡೆಯಬೇಕು ಎಂಬುದು ಸೇರಿ 14 ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.

PREV
Read more Articles on
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ