'ಉತ್ತಮ ಲಾಭದಾಯಕ ಉದ್ಯಮವಾದ ಅಣಬೆ'

By Sujatha NRFirst Published Jan 18, 2020, 1:55 PM IST
Highlights

ಅಣಬೆ ಒಂದು ಲಾಭದಾಯಕ ಉದ್ಯಮವಾಗಿದ್ದು, ಇದರಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಾರಸಿ ಕೈದೋಟದ ಬಗ್ಗೆ ಹಾಗೂ ಅಣಬೆ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.,

ಶೃಂಗೇರಿ [ಜ.18]:  ಅಣಬೆ ಉದ್ಯಮದಿಂದ ಹೆಚ್ಚಿನ ಆದಾಯ ಗಳಿಸಬಹುದಾಗಿದ್ದು, ಉತ್ತಮ ಲಾಭದಾಯಕ ಉದ್ಯಮವಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಬಿ.ಅರುಣ ಹೇಳಿದರು.

ಅವರು ಪಟ್ಟಣದ ಪಪಂ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ತಾರಸಿ ಕೈದೋಟದ ಬಗ್ಗೆ ಹಾಗೂ ಅಣಬೆ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಅಣಬೆ ಬಹುಪಯೋಗಿ ವಸ್ತುವಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಕೂಡ ಇದೆ ಎಂದ​ರು.

ಹೆಚ್ಚು ಬಂಡವಾಳ, ಶ್ರಮವಿಲ್ಲದೇ ಕಡಿಮೆ ಬಂಡವಾಳ ತೊಡಗಿಸಿ ಅಣಬೆ ಉದ್ಯಮ ನಡೆಸು ಹೆಚ್ಚಿನ ಲಾಭಗಳಿಸಿಕೊಳ್ಳಬಹುದು. ಇದು ಸ್ವಉದ್ಯಮದಂತೆ ಇದೆ. ಅಣಬೆ ಉದ್ಯಮದಂತಹ ಸ್ವಉದ್ಯಮಗಳನ್ನು ನಡೆಸಿದರೆ. ಹೆಚ್ಚಿನ ಆದಾಯಗಳಿಸಿಕೊಳ್ಳುವುದರ ಜೊತೆಗೆ ನಿರುದ್ಯೋಗ ಕೂಡ ಕಡಿಮೆಯಾಗುತ್ತದೆ. ಜನರು ಅಣಬೆ ಉದ್ಯಮದತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಕೃಷ್ಣ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲಾಗುತ್ತಿದೆ. ತೆಂಗು, ಕಾಳುಮೆಣಸು, ತರಕಾರಿ ಬೀಜಗಳನ್ನು ಕೂಡ ವಿತರಿಸಲಾಗಿದೆ. ಅಲ್ಲದೇ ರೈತರಿಗೆ ಅಗತ್ಯ ಮಾಹಿತಿ, ತರಬೇತಿ ಕಾರ್ಯಾಗಾರಗಳನ್ನು ಕೂಡ ನಡೆಸಿ ಮಾಹಿತಿಗಳನ್ನು ನೀಡಲಾಗುತ್ತಿದೆ. ಈ ಭಾಗದಲ್ಲಿ ಅಡಕೆ ಹಳದಿ ಎಲೆ ರೋಗ ವ್ಯಾಪಕವಾಗಿರುವುದರಿಂದ ರೈತರು ತಮ್ಮ ತೋಟಗಳಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ತಿಳಿ​ಸಿ​ದ​ರು.

ದಾವಣಗೆರೆ ತೆರಳಬಾಳು ಕೃಷಿ ವಿದ್ಯಾಲಯ ಕೇಂದ್ರದ ವಿಷಯ ತಜ್ಞ ಶ್ರೀ ಬಸವನಗೌಡ ಪಟ್ಟಣ ಪ್ರದೇಶಗಳಲ್ಲಿನ ತರಕಾರಿ ಬೆಳೆಯುವ ಬಗ್ಗೆ ಮಾಹಿತಿ ನೀಡಿ, ತರಕಾರಿ ಬೆಳಯನ್ನು ಸುಲಭವಾಗಿ ಬೆಳೆಯಬಹುದು. ಮನೆಯ ಸುತ್ತಮುತ್ತ, ತಾರಸಿ ಮೇಲೆಯೂ ತರಕಾರಿಗಳನ್ನು ಬೆಳೆಯಬಹುದಾಗಿದೆ. ಪಟ್ಟಣ ಪ್ರದೇಶಗಳಲ್ಲಿನ ಜನರು ತಮ್ಮ ಮನೆಗಳ ತಾರಸಿಗಳ ಮೇಲೆ ಅಗತ್ಯವಾಗುವಷ್ಟುತರಕಾರಿಗಳನ್ನು ಬೆಳೆದುಕೊಳ್ಳಬಹುದಾಗಿದೆ ಎಂದರು.

click me!