ಗೋಕಾಕ: ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌, ಸ್ಥಳದಲ್ಲೇ ವೃದ್ಧ ದಂಪತಿ ಸಾವು

Suvarna News   | Asianet News
Published : Jan 18, 2020, 01:35 PM IST
ಗೋಕಾಕ: ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌, ಸ್ಥಳದಲ್ಲೇ ವೃದ್ಧ ದಂಪತಿ ಸಾವು

ಸಾರಾಂಶ

 ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌| ದಂಪತಿ ಸಾವು| ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲೊಳಸೂರ ಸೇತುವೆ ಮೇಲೆ ನಡೆದ ಘಟನೆ|ಗೋಕಾಕ ತಾಲೂಕಿನ ಬಸಳಿಗುಂದಿ ಗ್ರಾಮದ ಮೃತ ದಂಪತಿ|

ಬೆಳಗಾವಿ(ಜ.18): ಟಿಪ್ಪರ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲೊಳಸೂರ ಸೇತುವೆ ಮೇಲೆ ಇಂದು(ಶನಿವಾರ) ನಡೆದಿದೆ. ಮೃತ ದಂಪತಿಯನ್ನ ಮುರಸಿದ್ದಪ್ಪ ಪಾಟೀಲ್ (80) ಹಾಗೂ ಲಕ್ಕವ್ವ ಮುರಸಿದ್ದಪ್ಪ ಪಾಟೀಲ್ (70) ಎಂದು ಗುರುತಿಸಲಾಗಿದೆ. 

ಮೃತ ದಂಪತಿ ಗೋಕಾಕ ತಾಲೂಕಿನ ಬಸಳಿಗುಂದಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರಿಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದರು. ಲೊಳಸೂರ ಸೇತುವೆ ಮೇಲೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ಗೆ ಟಿಪ್ಪರ್‌ ಡಿಕ್ಕಿ ಹೊಡೆದ ರಭಸಕ್ಕೆ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತ ದಂಪತಿ ಬಸಳಿಗುಂದಿ ಗ್ರಾಮದಿಂದ ಗೋಕಾಕ ನಗರಕ್ಕೆ ಬರುವ ವೇಳೆ ದುರ್ಘಟನೆ ಸಂಭವಿಸಿದೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!