'ಭಜರಂಗದಳ, ಎಎಚ್‌ಪಿಯಿಂದ ಲವ್ ಜಿಹಾದ್'..!

By Suvarna News  |  First Published Jan 18, 2020, 1:31 PM IST

ಭಜರಂಗದಳ, ಎಎಚ್‌ಪಿ ಲವ್ ಜಿಹಾದ್ ಮಾಡುತ್ತಿದೆ. ಜನರನ್ನ ಕೊಚ್ಚಿ ಕೊಲ್ಲುತ್ತಿದ್ದಾರೆ ಎಂದು ಸಂಸದ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆ ಯತ್ನ ಬಗ್ಗೆ ಪ್ರತ್ರಿಕ್ರಿಯಿಸಿದ್ದಾರೆ.


ಮಡಿಕೇರಿ(ಜ.18): ಭಜರಂಗದಳ, ಎಎಚ್‌ಪಿ ಲವ್ ಜಿಹಾದ್ ಮಾಡುತ್ತಿದೆ. ಜನರನ್ನ ಕೊಚ್ಚಿ ಕೊಲ್ಲುತ್ತಿದ್ದಾರೆ ಎಂದು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ, ಸಂಸದ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆ ಯತ್ನ ಬಗ್ಗೆ ಪ್ರತ್ರಿಕ್ರಿಯಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಹತ್ಯೆಗೆ ಪ್ಲಾನ್ ವಿಚಾರವಾಗಿ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ವಿಚಾರಣೆ ಆಗ್ಬೇಕು. ವಿಚಾರಣೆ ಆಗಿ ಸತ್ಯ ಹೊರಬರಲಿ. ಭಯೋತ್ಪಾದನೆ, ಭಯ ಸೃಷ್ಟಿ ಮಾಡುವ ಎಲ್ಲಾ ಸಂಘಟನೆಗಳ ಬ್ಯಾನ್ ಮಾಡ್ಬೇಕು. ಭಜರಂಗದಳ, ಎಎಚ್‌ಪಿ ಲವ್ ಜಿಹಾದ್ ಮಾಡುತ್ತಿದೆ. ಜನರನ್ನ ಕೊಚ್ಚಿ ಕೊಲ್ಲುತ್ತಿದ್ದಾರೆ. ಇದಕ್ಕೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

ತೇಜಸ್ವಿ ಸೂರ್ಯ-ಸೂಲಿಬೆಲೆ ಹತ್ಯೆಗೆ ಸಂಚು: 'ಅವೆಲ್ಲ ಚಿಲ್ಲರೆ ಬಜಾರ್ ವಿಷ್ಯಗಳು'

ಸಂಘಟನೆ ನಿಷೇಧ ಬಗ್ಗೆ ನಮ್ಮ ಪಕ್ಷದ ನಿಲುವನ್ನು ವರಿಷ್ಠರು ಹೇಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. KPCC ಅಧ್ಯಕ್ಷರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, ಆದಷ್ಟು ಶೀಘ್ರದಲ್ಲಿ ಆಗುತ್ತದೆ ಎಂದಿದ್ದಾರೆ. ಡಿಕೆಶಿ ಅಧ್ಯಕ್ಷರಾಗಲು ಸಿದ್ದಾರಮಯ್ಯ ಬಣ ಅಡ್ಡಗಾಲು ಹಾಕುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಬಣ ನಮ್ಮಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೂಲಿಬೆಲೆ-ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್: 'ಪೊಲೀಸ್ ಕಮಿಷನರ್ ಆರೋಪ ಸುಳ್ಳು'

click me!