ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ: ಮುರುಗೇಶ ನಿರಾಣಿ

By Kannadaprabha News  |  First Published Aug 2, 2021, 11:44 AM IST

* ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಮುಖ್ಯಮಂತ್ರಿ ಪರಮಾಧಿಕಾರ
* ಮಂತ್ರಿ ಮಾಡದಿದ್ದರೂ ಸಿಎಂ ಬೆಂಬಲವಾಗಿ ಕೆಲಸ ಮಾಡುತ್ತೇನೆ 
* ಈಗಾಗಲೇ ನೆರೆ ಮತ್ತು ಕೋವಿಡ್‌ ಬಗ್ಗೆ ಕಾರ್ಯ ಆರಂಭಿಸಿದ ಸಿಎಂ  


ಹುಬ್ಬಳ್ಳಿ(ಆ.02): ಮುಖ್ಯಮಂತ್ರಿ ಸ್ಥಾನಕ್ಕೂ ಲಾಬಿ ಮಾಡಿಲ್ಲ, ಮಂತ್ರಿ ಸ್ಥಾನಕ್ಕೂ ಮಾಡುವುದಿಲ್ಲ. ಎಲ್ಲವೂ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಗಣಿ ಸಚಿವರಾಗಿದ್ದ ಬೀಳಗಿ ಶಾಸಕ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ. 

ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಮುಖ್ಯಮಂತ್ರಿ ಪರಮಾಧಿಕಾರ. ಮಾಡದಿದ್ದರೂ ಮುಖ್ಯಮಂತ್ರಿ ಅವರ ಬೆಂಬಲವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Tap to resize

Latest Videos

'ಸಚಿವ ಸಂಪುಟ ರಚನೆ ಬಳಿಕ ಬಿಜೆಪಿ ಒಳಗೆ ಭಿನ್ನಮತ'

ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನೆರೆ ಮತ್ತು ಕೋವಿಡ್‌ ಬಗ್ಗೆ ಕಾರ್ಯ ಆರಂಭಿಸಿದ್ದಾರೆ ಎಂದರು.
 

click me!