ಕೆಆರ್‌ಎಸ್‌ಗೆ ಈಗ ಸ್ಫೋಟಕಗಳ ಕಂಟಕ : ಪೊಲೀಸರೆ ಭಾಗಿ..?

By Kannadaprabha News  |  First Published Aug 2, 2021, 11:29 AM IST
  • ಜಿಲ್ಲೆಯ ರೈತ ಕಣ್ಮಣಿ  ಕೃಷ್ಣರಾಜಸಾಗರ ಜಲಾಶಯಕ್ಕೆ ಸ್ಫೋಟಕಗಳ ಕಂಟಕ
  • ಪೊಲೀಸರ ವಶದಲ್ಲಿದ್ದ ಸ್ಫೋಟಕ ವಸ್ತುಗಳ ಅಕ್ರಮವಾಗಿ ಮಾರಾಟ

 ಮಂಡ್ಯ (ಆ.02): ಜಿಲ್ಲೆಯ ರೈತ ಕಣ್ಮಣಿ  ಕೃಷ್ಣರಾಜಸಾಗರ ಜಲಾಶಯಕ್ಕೆ ಸ್ಫೋಟಕಗಳ ಕಂಟಕ ತಪ್ಪಿಲ್ಲ. ಪೊಲೀಸರ ವಶದಲ್ಲಿದ್ದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳ ಅಕ್ರಮವಾಗಿ ಮಾರಾಟವಾಗಿರುವ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕ ಹೆಚ್ಚುವಂತೆ ಮಾಡಿದೆ. 

4000 ಎಲೆಕ್ಟ್ರಿಕ್ ಡಿಟೋನೇಟರ್‌ 580 ನಾನ್ ಎಲೆಕ್ಟ್ರಿಕ್ ಡಿಟೊಲೇಟರ್, 14400ಜಿಲೆಟಿನ್ ಕಡ್ಡಿಗಳನ್ನು ನಾಜೀಮುಲ್ಲಾ ಷರೀಫ್ ಎಂಬಾತ ಅಕ್ರಮವಾಗಿ ಮಾರಾಟ ಮಾಡಿದ್ದಾನೆಂದು ಪೊಲೀಸರು ಅರೋಪಿಸಿದ್ದಾರೆ. ಈ ನಡುವೆ ಭಾರೀ ಪ್ರಮಾಣದ ಸ್ಫೋಟಕಗಳ ಅಕ್ರಮ ಮಾರಾಟದಲ್ಲಿ ಪೊಲೀಸರ ಕೈವಾಡವಿದೆ ಎಂಬ ಅರೋಪಗಳು ಕೇಳಿ ಬರುತ್ತಿವೆ. 

Tap to resize

Latest Videos

undefined

ಕಳಪೆ ಕೆಲಸದಿಂದ ಕೆಆರ್‌ಎಸ್‌ ಅಣೆಕಟ್ಟೆ ಕುಸಿತ

ಏನಾಗಿತ್ತು? ಕಳೆದ ಜನವರಿ 21 ರಂದು ರಾತ್ರಿ 9.45ರ ಸಮಯದಲ್ಲಿ ಪಾಂಡವಪುರ ತಾಲೂಕಿನ ಸುತ್ತಮುತ್ತ ಇರುವ ಕಲ್ಲು ಕೋರೆಗಳಿಗೆ ಮಾರಾಟ ಮಾಡುವ ಸಲುವಾಗಿ ಯಾವುದೇ ಪರವಾನಗಿ ಇಲ್ಲದೆ  ಟಾಟಾ 407 ಗೂಡ್ಸ್ ವಾಹನದಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಇಬ್ಬರು ವ್ಯಕ್ರಿಗಳು ಕೆ.ಆರ್‌ ನಗರದ ಭೇರ್ಯ ಕಡೆಯಿಂದ ಕೆ.ಆರ್‌ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಕಡೆಗೆ ಬರುತ್ತಿದ್ದರು. ಈ ಮಾಹಿತಿ ತಿಳಿದು ಕೆ.ಅರ್‌ ಪೇಟೆ ಗ್ರಾಮಾಂತರ ಪೊಲೀಸ್ ಟಾಣೆಯ ಪಿಎಸ್‌ಐ  ಎಸ್‌ ಸುರೇಶ ಅವರು ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿದರು. 

ರಾತ್ರಿ 9 ಗಂಟೆ ಸಮಯಕ್ಕೆ ಅಕ್ಕಿ ಹೆಬ್ಬಾಳು ಗ್ರಾಮದ ಬ್ಯಾಂಕ್ ಆಫ್ ಬರೋಡಾ ಮುಂಭಾಗ ವಾಹನಗಳನ್ನು ಪರಿಶೀಲಿಸಯತ್ತಿದ್ದಾಗ ಅಲ್ಲಿಗೆ ಬಂದ ಗೂಡ್ಸ್ ವಾಹನ ತಡೆದಾಗ ಅದರಲ್ಲಿದ್ದ ಒಬ್ಬ ಪರಾರಿಯಾಗಿದ್ದ. ಇನ್ನು ಸಾಗಿಸುತ್ತಿದ್ದ ಭಾರೀ ಪ್ರಮಾಣದ ಸ್ಫೋಟಕಗಳಿಗೆ ಯಾವುದೇ ಪರವಾನಿಗೆಯೂ ಇರಲಿಲ್ಲ.  

click me!