ಬಾಲಕನಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ 11 ವರ್ಷ ಜೈಲು

By Kannadaprabha News  |  First Published Aug 2, 2021, 10:41 AM IST
  • ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮದರಸಾ ಶಿಕ್ಷಕ
  • ಮದರಸಾ ಶಿಕ್ಷಕನಿಗೆ 11 ವರ್ಷ ಜೈಲು ಶಿಕ್ಷೆ 
  • 2015ರಲ್ಲಿ ತುಮಕೂರಿನಲ್ಲಿ ನಡೆದ ಪ್ರಕರಣ

ತುಮಕೂರು (ಆ.02): ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮದರಸಾ ಶಿಕ್ಷಕನಿಗೆ 11 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡ ವಿದಿಸಿ ತುಮಕೂರಿನ ಫೋಕ್ಸೋ ವಿಶೇ‍ ನ್ಯಾಯಾಲಯ ಆದೇಶ ಹೊರಡಿಸಿದೆ. ತುಮಕೂರು ಗ್ರಾಮಾಂತರೆದ ಅಮಲಾಪುರ ಮದರಸದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ನಿವಾಸಿ ಮುಷರಫ್ ಏಪ್ರಿಲ್ 17 2015ರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅರೋಪ ಎದುರಿಸುತ್ತಿದ್ದ.

ಇದೀಗ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ  ಶಿಕ್ಷ ಹಾಗೂ ದಂಡ ವಿಧಿಸಲಾಗಿದೆ. ಬಾಲಕನಿಗೆ 5 ಲಕ್ಷ ರು.ಪರಿಹಾರ ನೀಡುವಂತೆ ತೀರ್ಪು ನೀಡಿದೆ.

Tap to resize

Latest Videos

ವಿದೇಶದಲ್ಲಿ ಗಂಡ, ಕಾಮದಾಹದಿಂದ ದಾರಿ ತಪ್ಪಿದ ಪತ್ನಿ: ಬಳಿಕ ನಡೆದಿದ್ದು ಘನಘೋರ

ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ನೆಪದಲ್ಲಿ  ಬಾಲಕನನ್ನು  ರೈಲ್ವೆ ನಿಲ್ದಾನದ ಬಳಿ ಇರುವ  ಲಾಡ್ಜ್‌ಗೆ ಕರೆಸಿಕೊಂಡಿದ್ದ ಮುಫ್ತಿ  ಲೈಂಗಿಕ ದೌರ್ಜನ್ಯ ಎಸಗಿ ವಾಪಸ್ ಮದರಸಾಗೆ ಬಿಟ್ಟು ಬಂದಿದ್ದ. 

ಬಾಲಕನನ್ನು ನೊಡಲು ಬಂದಿದ್ದ ತಾಯಿ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಮದರಸದ ಶಿಕ್ಷಕನ ವಿರುದ್ಧ ತುಮಕುರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377. 506 ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. 

ಎಫ್‌ಐಆರ್‌ ದಾಖಲಾದ ಬಳಿಕ ತಲೆ ಮರೆಸಿಕೊಂಡಿದ್ದ ಅರೋಪಿ ಮುಫ್ತಿ  ಹೈಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದ. ವಿಚಾರನೆ ನಡೆದು 11 ಜನರು ಈತನ ವಿರುದ್ಧ ಸಾಕ್ಷ್ಯ ಹೇಳಿದ್ದರು. 

click me!