ಏಕಾಏಕಿ ಮಠದ ಜಾಗ ಖಾಲಿ ಮಾಡಿಕೊಂಡು ಪರಾರಿಯಾದ ಮುರುಘಾ ಶರಣರ ಆಪ್ತೆ!

By Ravi JanekalFirst Published Jan 29, 2023, 10:05 AM IST
Highlights

ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದ ಪಡುವಲ‌ ಮಠದಲ್ಲಿದ್ದ ಮುರುಘಾ ಶರಣರ ಆಪ್ತೆ ದಿಢೀರನೇ ಜಾಗ ಖಾಲಿ ಮಾಡಿದ್ದಾಳೆ. ಅಕ್ಕ ಮತ್ತು ತನ್ನ ತಾಯಿಯೊಂದಿಗೆ ಜಿ.ಹೊಸಳ್ಳಿಯಲ್ಲಿ ನೆಲೆಸಿದ್ದ ರೇವತಿ . ಮಠದ ಜಾಗವನ್ನು ಅಭಿವೃದ್ಧಿ ಮಾಡುತ್ತೇನೆ ಎಂದಿದ್ದರು. ಹೀಗೆ ಹೇಳುತ್ತಾ ಸುಮಾರು 10-12 ವರ್ಷಗಳಿಂದ ಅಲ್ಲೆ ವಾಸವಾಗಿದ್ದ ರೇವತಿ ಇದೀಗ ನಾಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ವರದಿ : ಮಹಂತೇಶ್ ಕುಮಾರ್ , ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು

ತುಮಕೂರು (ಜ.29) :  ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದ ಪಡುವಲ‌ ಮಠದಲ್ಲಿದ್ದ ಮುರುಘಾ ಶರಣರ ಆಪ್ತೆ ದಿಢೀರನೇ ಜಾಗ ಖಾಲಿ ಮಾಡಿದ್ದಾಳೆ. 

ಚಿತ್ರದುರ್ಗದ ಮರುಘಾ ಮಠ(Murugha mutt)ದ ಶಾಖಾ ಮಠವಾಗಿದ್ದ ಪಡುವಲ ಮಠ(Paduvala mutt)ವನ್ನು  ಶಿವಮೂರ್ತಿ ಶಿವಾಚಾರ್ಯ ಆಪ್ತೆ ರೇವತಿ ನೋಡುಕೊಳ್ಳುತ್ತಿದ್ದಳು. ಕಳೆದ 10-12 ವರ್ಷದಿಂದ ಸುಮಾರು 50ಕ್ಕೂ ಹೆಚ್ಚು ಹಸುಗಳನ್ನು ಸಾಕಿಕೊಂಡಿದ್ದ ರೇವತಿ, ತನ್ನ ಅಕ್ಕ, ಅಮ್ಮನೊಂದಿಗೆ ವಾಸವಾಗಿದ್ದಳು.

Muruga Shree: ಮುರುಘಾ ಶ್ರೀಗಳನ್ನು ಗಲ್ಲಿಗೇರಿಸಲು ಆಗ್ರಹ: ಚಿತ್ರದುರ್ಗದಲ್ಲಿ ಬಿಎಸ್‌ಪಿ ಬೃಹತ್ ಪ್ರತಿಭಟನೆ

ಜಿ.ಹೊಸಳ್ಳಿಯಲ್ಲಿ ಶ್ರೀ ಜಡೆರುದ್ರ ಸ್ವಾಮಿ(Sri jaderudraswamy) ಗದ್ದುಗೆ ಮಠವಿದ್ದು, ಮಠಕ್ಕೆ‌ಸೇರಿದ 18 ಎಕರೆ ಜಾಗವಿತ್ತು.‌ ಈ ಜಾಗವನ್ನು ಗ್ರಾಮಸ್ಥರು ಮರುಘಾ ಮಠಕ್ಕೆ ಹಸ್ತಾಂತರ ಮಾಡಿದ್ದರು, ಮರುಘಾ ಮಠಕ್ಕೆ ಹಸ್ತಾಂತರವಾದ ಬಳಿಕ ಮಠದ ಪರವಾಗಿ  ಇಲ್ಲಿ ರೇವತಿ ವಾಸವಾಗಿದ್ದಳು, ಮರುಘಾ ಮಠದ ಕರ್ಮಕಾಂಡ ಬಯಲಾಗುತ್ತಿದ್ದಂತೆ ಈಕೆಯ ವಾಸ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಎತ್ತಿದ್ದರು.  ಗ್ರಾಮಸ್ಥರ ವಿರೋಧದ ಬಳಿಕ ರೇವತಿ ಹಸುಗಳೊಂದಿಗೆ ಮಠ ಖಾಲಿ ಮಾಡಿದ್ದಾಳೆ.‌

ಸುಮಾರು 12 ವರ್ಷಗಳಿಂದ ಇಲ್ಲಿಯೇ ವಾಸವಿದ್ದ ರೇವತಿ ಕುಟುಂಬ, ಹತ್ತಾರು ಹಸುಗಳನ್ನ ಕಟ್ಟಿ ಜೀವನ ಸಾಗಿಸುತ್ತಿದ್ದರು,  ಮಠದಲ್ಲಿದ್ದ ಎಲ್ಲಾ ವಸ್ತುಗಳನ್ನ ಖಾಲಿ ಮಾಡಿಕೊಂಡು  ರೇವತಿ ಕುಟುಂಬ ಮಠ ತೊರೆದಿದೆ. ಯಾವುದೇ ಅಧಿಕೃತ ಆದೇಶವಿಲ್ಲದೇ ಮುರುಘಾ ಮಠದ ಶಾಖಾಮಠದಲ್ಲಿ ರೇವತಿ ಕುಟುಂಬವಾಸವಿತ್ತು.‌ ‌ಮುರುಘಾ ಶರಣರು ನನ್ನ ತಂದೆ ಸಮಾನರು ಎನ್ನುತ್ತಿದ್ದ ರೇವತಿ, ಯಾವುದೇ ಸಂಬಳ ಪಡೆಯದೆ ಮುರುಘಾ ಮಠದ ಸೇವೆ ಮಾಡುತ್ತಿರುವುದಾಗಿ ಹೇಳುತ್ತಿದ್ದರು. ಚಿತ್ರದುರ್ಗದ ಮುರುಘಾ ಮಠದಲ್ಲಿ ಓದಿಕೊಂಡಿದ್ದ ರೇವತಿ, ಇಂಜಿನಿಯರ್ ಪದವೀಧರೆ  ಬಳಿಕ ಅಲ್ಲೆ ಸ್ಪೆಷಲ್ ಆಫೀಸರ್ ಆಗಿ ಸೇವೆಸಲ್ಲಿದ್ದರು.  

Muruga Mutt: ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯದಿದ್ದರೆ ಡಿ.26ರಿಂದ ಧರಣಿ: ಬಸವಪ್ರಭು ಶ್ರೀ

ಅಕ್ಕ ಮತ್ತು ತನ್ನ ತಾಯಿಯೊಂದಿಗೆ ಜಿ.ಹೊಸಳ್ಳಿಯಲ್ಲಿ ನೆಲೆಸಿದ್ದ ರೇವತಿ . ಮಠದ ಜಾಗವನ್ನು ಅಭಿವೃದ್ಧಿ ಮಾಡುತ್ತೇನೆ ಎಂದಿದ್ದರು. ಹೇಗೆ ಹೇಳುತ್ತಾ ಸುಮಾರು 10-12 ವರ್ಷಗಳಿಂದ ಅಲ್ಲೆ ವಾಸವಾಗಿದ್ದರು, ಸುಮಾರು 600 ವರ್ಷಗಳ ಇತಿಹಾಸವಿರುವ ಮಠದ ಜಾಗವನ್ನು ರೇವತಿ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರು, ಮಠದ ಹೆಸರಿನಲ್ಲಿರುವ ಜಾಗವನ್ನ ನೋಡಿಕೊಳ್ಳಲು ನನ್ನನ್ನು ನೇಮಿಸಿರುವುದಾಗಿ ರೇವತಿ ಗ್ರಾಮಸ್ಥರಿಗೆ ಹೇಳುತ್ತಿದ್ದರಂತೆ.

click me!