ಕಾಮಾಟಿಪುರ ಹೇಳಿಕೆ: ಡಿಸಿ ತಮ್ಮಣ್ಣ ವಿರುದ್ಧ ಮುಂಬೈ ಸೇರಿ ಸ್ಥಳೀಯ ಮತದಾರರ ಆಕ್ರೋಶ

By Web Desk  |  First Published Nov 29, 2019, 9:55 AM IST

ಮಾಜಿ ಸಚಿವ ತಮ್ಮಣ್ಣ ಅವರ ಕಾಮಾಟಿಪುರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆ. ಆರ್. ಪೇಟೆಯ ಕಿಚ್ಚು ಮುಂಬೈ ಮುಟ್ಟಿದ್ದು, ಮುಂಬೈನಲ್ಲಿ ನೆಲೆಸಿರುವ ಕ. ಆರ್. ಪೇಟೆ ಮೂಲ ನಿವಾಸಿಗಳೂ ಡಿ. ಸಿ. ತಮ್ಮಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಮಂಡ್ಯ(ನ.29): ಮಾಜಿ ಸಚಿವ ತಮ್ಮಣ್ಣ ಅವರ ಕಾಮಾಟಿಪುರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆ. ಆರ್. ಪೇಟೆಯ ಕಿಚ್ಚು ಮುಂಬೈ ಮುಟ್ಟಿದ್ದು, ಮುಂಬೈನಲ್ಲಿ ನೆಲೆಸಿರುವ ಕ. ಆರ್. ಪೇಟೆ ಮೂಲ ನಿವಾಸಿಗಳೂ ಡಿ. ಸಿ. ತಮ್ಮಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೆ. ಆರ್. ಪೇಟೆ ಕಿಚ್ಚು ಮುಂಬೈಗೆ ತಲುಪಿದ್ದು, ಕೆ. ಆರ್. ಪೇಟೆ ಉಪಚುನಾವಣಾ ಅಖಾಡದಲ್ಲಿ "ಕಾಮಾಟಿಪುರ" ಕದನ ಆರಂಭವಾಗಿದೆ. ಮದ್ದೂರು ಶಾಸಕ ಡಿ. ಸಿ. ತಮ್ಮಣ್ಣ ಕ್ಷಮೆ ಕೇಳುವಂತೆ ಮುಂಬೈನಲ್ಲಿರುವ ಕೆ. ಆರ್. ಪೇಟೆಯ ಮೂಲನಿವಾಸಿಗಳು ಹಾಗೂ ಸ್ಥಳೀಯ ಮುಖಂಡರ ಒತ್ತಾಯಿಸಿದ್ದಾರೆ.

Tap to resize

Latest Videos

undefined

'ಸರ್ಕಾರದ ಮನೆ ತೆಗೆಯದ್ದಕ್ಕೆ ರೂಂ ಮಾಡಿದ್ದೆ, ನಿಮ್ಮ ಥರ ರಾಸಲೀಲೆಗಲ್ಲ'..!

ನಾರಾಯಣಗೌಡ ಗೆದ್ದರೆ ಕೆ. ಆರ್. ಪೇಟೆಯನ್ನು ಕಾಮಾಟಿಪುರ ಮಾಡ್ತಾರೆ ಎಂದು ಡಿ. ಸಿ. ತಮ್ಮಣ್ಣ ವ್ಯಂಗ್ಯ ಮಾಡಿದ್ದರು. ಮೊನ್ನೆ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಈ ಹೇಳಿಕೆ ನೀಡಿದ್ದ ತಮ್ಮಣ್ಣ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಡಿ. ಸಿ. ತಮ್ಮಣ್ಣ ಹೇಳಿಕೆಗೆ ಕ್ಷೇತ್ರದಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಕೆ. ಆರ್. ಪೇಟೆಯನ್ನು ಕಾಮಾಟಿಪುರಕ್ಕೆ ಹೋಲಿಸಿರುವುದನ್ನು ಜನ ವಿರೋಧಿಸಿದ್ದಾರೆ. ಮುಂಬೈನ ಕೆ. ಆರ್. ಪೇಟೆ ಮೂಲನಿವಾಸಿಗಳು ಕ್ಷೇತ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಮುಂಬೈ ನಿವಾಸಿಗಳ ಜೊತೆಗೆ ಸ್ಥಳೀಯರಿಂದಲೂ  ಆಕ್ರೋಶ ವ್ಯಕ್ತವಾಗಿದೆ.

ಸುಳ್ಳು ಹೇಳಿ ಕುತ್ತಿಗೆ ಹಿಸುಕುತ್ತೀರಾ..? ಎಚ್‌ಡಿಕೆಗೆ ನಾರಾಯಣ ಗೌಡ ಟಾಂಗ್

ನಾರಾಯಣಗೌಡ ಗೆದ್ದರೆ ಕೆ. ಆರ್. ಪೇಟೆಯನ್ನ ಕಾಮಾಟಿಪುರ ಮಾಡ್ತಾರೆ ಎಂದು ಡಿ. ಸಿ ತಮ್ಮಣ್ಣ ಹೇಳಿದ್ದರು. ಮುಂಬೈಯಲ್ಲಿ ಇರುವ ನಮಗೆ ಕಾಮಾಟಿಪುರ ಎಲ್ಲಿದೆ ಎಂದು ಗೊತ್ತಿಲ್ಲ. ತಮ್ಮಣ್ಣ ಅದರ ಬಗ್ಗೆ ಹೇಳಿದ್ದಾರೆಂದರೆ ಆ‌ ಏರಿಯಾ ಬಗ್ಗೆ ಅವ್ರಿಗೆ ಗೊತ್ತಿರಬೇಕು ಎಂದು ನಾರಾಯಣ ಗೌಡ ತಮ್ಮಣ್ಣಗೆ ಟಾಂಗ್ ಕೊಟ್ಟಿದ್ದರು.

ನಾರಾಯಣಗೌಡ ಅವರ ಬಗ್ಗೆ ಮಾತಾಡಲಿ. ಆದರೆ ಕೆ. ಆರ್. ಪೇಟೆಯನ್ನು ಕಾಮಾಟಿಪುರ ಎಂದಿದ್ದು ಬೇಸರ ತಂದಿದೆ. ನಮ್ಮ ಹೆಣ್ಣು ಮಕ್ಕಳು ತಮ್ಮಣ್ಣ ಹೇಳಿಕೆಯಿಂದ ನೊಂದಿದ್ದಾರೆ. ತಮ್ಮಣ್ಣ ಹೇಳಿಕೆಯಿಂದ ಮುಂಬೈನಲ್ಲಿ ನೆಲೆಸಿರುವ ಕೆ. ಆರ್. ಪೇಟೆ ಮತದಾರರು ಸಿಟ್ಟಿಗೆದ್ದಿದ್ದಾರೆ ಎಂದಿದ್ದಾರೆ.

ತಮ್ಮಣ್ಣಗೆ ಕಾಮಾಟಿಪುರ ಗೊತ್ತಿದೆ ಅಂದ್ರೆ ಅವರಿಗೆ ಅನುಭವವಿರಬೇಕು: ನಾರಾಯಣ ಗೌಡ

ಅವರ ಹೇಳಿಕೆಗೆ ತಿರುಗೇಟು ನೀಡಲು ಜನ ನಾರಾಯಣಗೌಡ ಪರ ಮತಚಲಾಯಿಸಲು ಬರುತ್ತಾರೆ. 4-5ಸಾವಿರ ಕೆಆರ್ ಪೇಟೆಯ ಮುಂಬೈ ನಿವಾಸಿಗಳು ನಾರಾಯಣಗೌಡರ ಪರ ನಿಲ್ಲಲಿದ್ದಾರೆ. ಡಿಸಿ ತಮ್ಮಣ್ಣ ಈ ಕೂಡಲೇ ಕ್ಷಮೆ ಕೇಳಬೇಕೆಂದು ಮುಂಬೈನ ಕೆ. ಆರ್. ಪೇಟೆ ಮೂಲ ನಿವಾಸಿಗಳು, ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.

click me!