ಸರ್ಕಾರದಿಂದ ಬರಗಾಲ ಪರಿಹಾರ ಯೋಜನೆ ಅಡಿಯಲ್ಲಿ 1973-74ನೇ ಸಾಲಿನಲ್ಲಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಪ್ರಾರಂಭಿಸಲಾಗಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಯೋಜನೆಗೆ ಸರ್ಕಾರದಿಂದ ಸಾಕಷ್ಟು ಅನುದಾನಗಳು ನೀರಿನಂತೆ ಹರಿದು ಬಂದಿವೆ. ಆದರೆ, ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಳು ಕಳೆಪೆ ಮಟ್ಟದಿಂದ ನಡೆಸಿ ಸಾಕಷ್ಟು ಭ್ರಷ್ಟಾಚಾರ ನಡೆದಿವೆ ಎಂಬುದಕ್ಕೆ ಅಲ್ಲಿನ ಕಾಮಗಾರಿಗಳೇ ತೋರಿಸಿಕೊಡುತ್ತವೆ: ರವಿಶಂಕರರೆಡ್ಡಿ ಮುತ್ತಂಗಿ
ಚಿಂಚೋಳಿ(ಜ.31): ತಾಲೂಕಿನ ರೈತರನಾಡಿ ಆಗಿರುವ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ಸರ್ಕಾರದಿಂದ ಮಂಜೂರಿಗೊಳಿಸಿದ ಅನುದಾನದಲ್ಲಿ ಕೈಕೊಂಡಿರುವ ಕಾಮಗಾರಿಗಳು ಸಂಪೂರ್ಣವಾಗಿ ಕಳೆಪೆಮಟ್ಟದಿಂದ ನಡೆದಿವೆ ಇವುಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ಕೈಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ತಾಲೂಕು ಜೆಡಿಎಸ್ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಒತ್ತಾಯಿಸಿದ್ದಾರೆ. ತಾಲೂಕಿನ ನಾಗರಾಳ ಗ್ರಾಮದ ಬಳಿ ಇರುವ ಕೆಳದಂಡೆ ಮುಲ್ಲಾಮಾರಿ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದಿಂದ ಬರಗಾಲ ಪರಿಹಾರ ಯೋಜನೆ ಅಡಿಯಲ್ಲಿ 1973-74ನೇ ಸಾಲಿನಲ್ಲಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಪ್ರಾರಂಭಿಸಲಾಗಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಯೋಜನೆಗೆ ಸರ್ಕಾರದಿಂದ ಸಾಕಷ್ಟು ಅನುದಾನಗಳು ನೀರಿನಂತೆ ಹರಿದು ಬಂದಿವೆ. ಆದರೆ, ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಳು ಕಳೆಪೆ ಮಟ್ಟದಿಂದ ನಡೆಸಿ ಸಾಕಷ್ಟು ಭ್ರಷ್ಟಾಚಾರ ನಡೆದಿವೆ ಎಂಬುದಕ್ಕೆ ಅಲ್ಲಿನ ಕಾಮಗಾರಿಗಳೇ ತೋರಿಸಿಕೊಡುತ್ತವೆ ಎಂದರು.
undefined
ಪಿಎಸ್‌ಐ ಹಗರಣ: ಆರ್‌ಡಿ ಪಾಟೀಲ್ ಖಾತೆಯಲ್ಲಿ 76 ಲಕ್ಷ ರು. ವಹಿವಾಟೇ ಆಗಿಲ್ಲ..!
ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ 80 ಕಿ.ಮೀ. ಮುಖ್ಯಕಾಲುವೆಯ ಆಧುನೀಕರಣ ಕಾಮಗಾರಿಗೆ ಸರ್ಕಾರದಿಂದ 124 ಕೋಟಿ ರು. ಅನುದಾನ ಮಂಜೂರಿಗೊಳಿಸಲಾಗಿದೆ. ಆದರೆ, ಮುಖ್ಯಕಾಲುವೆ ಅಧುನೀಕರಣ ಕಾಮಗಾರಿ ಕುಂಟುತ್ತಲೇ ಸಾಗಿದೆ. ಮುಖ್ಯ ಕಾಲುವೆಯ ಕೆಲವು ಸ್ಥಳಗಳಲ್ಲಿ ಕಾಲವೆ ಒಡೆದು ಹೋಗಿದೆ. ನೀರು ಸೋರಿಕೆಯಾಗುತ್ತಿರುವುರಿಂದ ರೈತರು ಬೆಳೆದ ಬೆಳೆಗಳಿಗೆ ಇನ್ನು ಸರಿಯಾಗಿ ನೀರು ಕೊಡಲು ಸಾಧ್ಯವಾಗುತ್ತಿಲ. 64 ಉಪಕಾಲುವೆಗಳು ಹೂಳು ಗಿಡಗಂಟಿಗಳು ಬೆಳೆದಿವೆ. ಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ ಇದರಿಂದ ರೈತರು ನೀರಿನಿಂದ ವಂಚಿತರಾಗಬೇಕಾಗಿದೆ. ಗೇಟಿನ ಬಳಿ ನೀರಿನ ವೇಗ ಕಡಿಮೆಗೊಳಿಸುವುದಕ್ಕಾಗಿ ಶಕ್ತಿ ವರ್ಧಕ ಕೋಟ್ಯಂತರ ರು.ಗಳಲ್ಲಿ ನಿರ್ಮಿಸಲಾಗಿದೆ. ಆದರೆ ಕಳೆಪೆಮಟ್ಟದಿಂದ ಕೂಡಿದ ಕಾಮಗಾರಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ 3 ವರ್ಷಗಳೇ ಗತಿಸಿವೆ ಎಂದರು.