ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜ.10) : ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ರಾಜ್ಯದಲ್ಲೇ ಅತ್ಯಂತ ಎತ್ತರವಾದ ಪ್ರದೇಶ. ಮುಳ್ಳನಯ್ಯನಗಿರಿಯ ಸೌಂದರ್ಯ ಸವಿಯಲು ರಾಜ್ಯ ಮಾತ್ರವಲ್ಲ ಹೊರ ರಾಜ್ಯದಿಂದಲೂ ಪ್ರವಾಸಿಗರು ಬರುತ್ತಾರೆ. ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾಗ ಟ್ರಾಫಿಕ್ ಕಿರಿ ಕಿರಿ ಉಂಟಾಗುತ್ತೆ . ಇದಕ್ಕಾಗಿ ಜಿಲ್ಲಾಡಳಿತವೇ ಟ್ರಾಫಿಕ್ ಜಾಮ್ ನ ತೊಂದರೆ ತಪ್ಪಿಸಲು ಪ್ಲಾನ್ ರೆಡಿಮಾಡಿದೆ. ಇದರಿಂದ ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಕಿರಿ ಕಿರಿಗೆ ಗುಡ್ ಬೈ ಹೇಳಿ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿಯುವ ದಿನಗಳು ಎದುರಾಗಲಿದೆ.
ಗಿರಿಭಾಗಕ್ಕೆ ಜಿಲ್ಲಾಡಳಿತದ ಗಾಡಿಗಳಲ್ಲೇ ಹೋಗಬೇಕು, ಬರಬೇಕು
ಕರ್ನಾಟಕ(Karnataka)ದ ಅತ್ಯಂತ ಎತ್ತರದ ಪ್ರದೇಶ, ಸೌಂದರ್ಯದ ಖಣಿ ಕಾಫಿನಾಡ(Coffeenadu) ಮುಳ್ಳಯ್ಯನಗಿರಿ(mullayyanagiri), ದತ್ತಪೀಠ(Dattapeetha), ಸೀತಾಳಯ್ಯನಗಿರಿ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ಮುಂದೆ ಟ್ರಾಫಿಕ್ ಜಾಮ್((Traffic jam) ಪ್ರಾಬ್ಲಂ ಇರೋದಿಲ್ಲ. ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಪ್ರವಾಸಿಗರು(Tourists) ಬೇಕಾಬಿಟ್ಟಿ ಗಾಡಿ ಹೊಡೀತಿದ್ರು. ಎಲ್ಲೆಂದರಲ್ಲಿ ಪಾರ್ಕ್ ಮಾಡಿ ಟ್ರಾಫಿಕ್ ಜಾಮ್ ಕಿರಿ-ಕಿರಿ ಮಾಡ್ತಿದ್ರು. ಗಾಡಿ ಕೆಳಗೆ ಇಳಿದ್ರೆ ಹಾಳಾಗುತ್ತೆ ಎಂಬಂತೆ ಕಿರಿದಾದ ರಸ್ತೆಯಲ್ಲಿ ಅರ್ಧ ರಸ್ತೆಗೆ ಪಾರ್ಕ್ ಮಾಡಿ ಹೋಗೋ ಕೆಲ ಪ್ರವಾಸಿಗರು ಕೂಡ ಇದ್ರು. ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್ ಆದ್ರೆ ಐದತ್ತು ನಿಮಿಷ ಅಲ್ಲ. ಗಂಟೆಗಟ್ಟಲೇ ಆಗ್ತಿತ್ತು. ಪಾರ್ಕ್ ಮಾಡಿ ಹೋದ ಪುಣ್ಯಾತ್ಮ ಬಂದು ತೆಗೆಯೋವರೆಗೂ ಉದ್ದಕ್ಕೂ ನಿಲ್ಲಬೇಕಿತ್ತು.
Chikkamagaluru: ಹಬ್ಬದ ಪ್ರಯುಕ್ತ ಮುಳ್ಳಯ್ಯನಗಿರಿಗೆ ಸರ್ಕಾರಿ ನೌಕರರಿಂದ ಚಾರಣ
ಈ ಗೋಳು ತಪ್ಪಿಸಲು ಇದೀಗ ಜಿಲ್ಲಾಡಳಿತವೇ ಗಿರಿಭಾಗದ ಪ್ರವಾಸಿತಾಣಗಳಿಗೆ ಪರ್ಮಿಟ್ ವಾಹನಗಳನ್ನ ಬಿಡೋದಕ್ಕೆ ತೀರ್ಮಾನಿಸಿದೆ. ನೀವು ಬೆಂಗಳೂರು-ಮೈಸೂರು(Bengaluru-mysuru) ಸೇರಿದಂತೆ ಎಲ್ಲಿಂದಲೇ ನಿಮ್ಮ ಗಾಡಿಯಲ್ಲಿ ಬಂದ್ರು ಚಿಕ್ಕಮಗಳೂರಿ(Chikkamagaluru)ನಿಂದ ಗಿರಿಭಾಗಕ್ಕೆ ಜಿಲ್ಲಾಡಳಿತದ ಗಾಡಿಗಳಲ್ಲೇ ಹೋಗಬೇಕು. ಜೊತೆಗೆ, ಎಲ್ಲೆಂದರಲ್ಲಿ ಗಾಡಿ ಪಾರ್ಕ್ ಮಾಡ್ಕೊಂಡು ರೋಡ್ ಮಧ್ಯೆ ಮದ್ಯ ಸೇವಿಸ್ಕೊಂಡು ಡ್ಯಾನ್ಸ್ ಮಾಡೋದು ತಪ್ಪುತ್ತೆ. ನೀಟಾಗಿ ಹೋಗಿ ಪ್ರಕೃತಿ ಸೌಂದರ್ಯವನ್ನ ಸವಿದು ನೀಟಾಗಿ ವಾಪಸ್ ಬರ್ಬೋದು.
ಮುಳ್ಳಯ್ಯನಗಿರಿ ಭಾಗದಲ್ಲಿ ಟ್ರಾಫಿಕ್ ಜಾಮ್ , ಪ್ಲಾಸ್ಟಿಕ್ ಗಳಿಂದಲೂ ಮುಕ್ತ
ನೀವು ನಿಮ್ದೇ ಗಾಡಿಗಳಲ್ಲಿ ಬಂದ್ರು ಕೂಡ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಐದು ಎಕರೆ ಜಾಗದಲ್ಲಿ ಜಿಲ್ಲಾಡಳಿತವೇ ಪಾರ್ಕಿಂಗ್ ವ್ಯವಸ್ಥೆ ಮಾಡಲಿದೆ. ಅಲ್ಲಿ ಎಲ್ಲಾ ಸೌಲಭ್ಯವೂ ಇರಲಿದೆ. ನೀವು ನಿಮ್ಮ ಗಾಡಿಗಳನ್ನ ಅಲ್ಲೇ ಬಿಟ್ಟು ಜಿಲ್ಲಾಡಳಿತದ ಪರ್ಮಿಟ್ ಗಾಡಿಗಳಲ್ಲಿ ಹೋಗಬೇಕು. ಸ್ವಂತ ವಾಹನಗಳಲ್ಲಿ ಹೋಗೋ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನ ಎಸೆಯುತ್ತಿದ್ದರು. ಆದ್ರೆ, ಇನ್ಮುಂದೆ ಅವೆಲ್ಲಕ್ಕೂ ಬ್ರೇಕ್ ಬೀಳಲಿದೆ. ಬರೀಗೈಲಿ ಹೋಗ್ಬೇಕು. ಪ್ರಕೃತಿ ಸೌಂದರ್ಯವನ್ನ ನೋಡ್ಕಂಡ್ ವಾಪಸ್ ಬರ್ಬೇಕು ಅಷ್ಟೆ.
ದೇವೀರಮ್ಮ ದೇವಸ್ಥಾನ; ಬರಿಗಾಲಲ್ಲಿ 3800 ಅಡಿ ಬೆಟ್ಟವೇರಿ ಹರಕೆ ತೀರಿಸಲು ಭಕ್ತರು ಸಜ್ಜು
ಇನ್ಮುಂದೆ ಮುಳ್ಳಯ್ಯನಗಿರಿ ಭಾಗದಲ್ಲಿ ಟ್ರಾಫಿಕ್ ಜಾಮ್ ಇಲ್ಲ. ಪ್ಲಾಸ್ಟಿಕ್‌ಗಳನ್ನು ಕೊಂಡೊಯ್ದು ಎಲ್ಲೆಂದಲ್ಲಿ ಎಸೆಯುವಂತಿಲ್ಲ. ಗಲಾಟೆ-ಗದ್ಲ ಇಲ್ಲ. ಪ್ರಕೃತಿಯು ಶುದ್ಧವಾಗಿ ಇರುತ್ತೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಜಿಲ್ಲಾಡಳಿತದಿಂದ ಈಗಾಗಲೇ ನೀಲಿ ನಕ್ಷೆ ಸಿದ್ದವಾಗಿದ್ದು ಮುಂದಿನ ತಿಂಗಳು ಇದು ಕಾರ್ಯಗತವಾಗಲಿದೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಒಟ್ಟಾರೆ, ಪ್ರವಾಸದ ಹೆಸರಲ್ಲಿ ಗಿರಿಭಾಗದಲ್ಲಿ ಮೋಜು-ಮಸ್ತಿ ಮಾಡ್ತಾರೆ ಅನ್ನೋ ಆರೋಪವೂ ಇತ್ತು. ಗಿರಿಭಾಗಕ್ಕೆ ಓನ್ ವೆಹಿಕಲ್ಗಳಿಗೆ ಬ್ರೇಕ್ ಹಾಕಿ ಎಂಬ ಪರಿಸರವಾದಿಗಳ ಆಗ್ರಹವೂ ಇತ್ತು. ಇದೀಗ, ಕಾಲ ಕೂಡಿ ಬಂದಿದೆ ಅನ್ಸತ್ತೆ. ಶನಿವಾರ-ಭಾನುವಾರವಂತೂ ಮುಳ್ಳಯ್ಯನಗಿರಿಯಲ್ಲಿ ಹೇಳತೀರದ ಟ್ರಾಫಿಕ್ ಇರುತ್ತಿತ್ತು. ಪ್ಲಾಸ್ಟಿಕ್ ಕೂಡ ಅಷ್ಟೆ ಇರುತ್ತಿತ್ತು. ಇದೀಗ, ಜಿಲ್ಲಾಡಳಿತದ ಈ ನಡೆ ಸ್ಥಳಿಯರಿಗೆ ಖುಷಿ ತಂದಿದ್ದರೂ ಕೂಡ ಗಿರಿಭಾಗದಲ್ಲಿ ನೂರಾರು ಹೋಂಸ್ಟೇ, ರೆಸಾರ್ಟ್ನವರ ಮಧ್ಯೆ ಜಿಲ್ಲಾಡಳಿತದ ಈ ತೀರ್ಮಾನ ಎಷ್ಟು ಪರಿಣಾಮಕಾರಿಯಾಗಿ, ಯಾವಾಗ ಕಾರ್ಯರೂಪಕ್ಕೆ ಬರುತ್ತೆ ಅನ್ನೋದನ್ನ ಕಾದುನೋಡ್ಬೇಕು.