Ramanagara: ಕಾಡು ಪ್ರಾಣಿಗಳ ಭೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ನರಳಿ ಪ್ರಾಣಬಿಟ್ಟ ಚಿರತೆ

By Suvarna News  |  First Published Jan 10, 2023, 8:19 PM IST

ಕಾಡು ಪ್ರಾಣಿ ಭೇಟೆಯಾಡಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಕೂನಗಲ್ ಗ್ರಾಮದ ಬಳಿ ನಡೆದಿದ್ದು, ಚಿರತೆ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ.


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್

ರಾಮನಗರ (ಜ.10): ಕಾಡು ಪ್ರಾಣಿ ಭೇಟೆಯಾಡಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಕೂನಗಲ್ ಗ್ರಾಮದ ಬಳಿ ನಡೆದಿದ್ದು, ಚಿರತೆ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ. ಜೀವ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಸಂಕಟ ಪಟ್ಟ ಚಿರತೆ ಕೊನೆಗೂ ತನ್ನ ಪ್ರಾಣ ಕಳೆದುಕೊಂಡಿತ್ತು.  ಇಂದು  ಮುಂಜಾನೆ ರಾಮನಗರ ತಾಲೂಕಿನ ಕೂನಗಲ್ ಹಾಗೂ ಜವಳಗೆರೆ ದೊಡ್ಡಿ ಗ್ರಾಮದ ಮಧ್ಯೆ ಇರುವ ಮಾವಿನ ತೋಟದಲ್ಲಿ ಚಿರತೆ ಉರುಳಿಗೆ ಸಿಲುಕಿ ಒದ್ದಾಟ ನಡೆಸುತ್ತಿತ್ತು. ತಕ್ಷಣ ಅಲ್ಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಆದ್ರೆ ವಿಷಯ ತಿಳಿದ ತಕ್ಷಣ ಕಾರ್ಯಾಚರಣೆ ಕೈಗೊಂಡಿದ್ದರೆ ಚಿರತೆ ಜೀವ ಉಳಿಸಬಹುದಿತ್ತು. ತಡವಾಗಿ ಅರಣ್ಯ ಅಧಿಕಾರಿಗಳು ಆಗಮಿಸಿದ್ರೂ. ಅಷ್ಟರಲ್ಲಾಗಲೇ ಉರುಳಿಗೆ ಸಿಲುಕಿ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದೆ ಚಿರತೆ ಸಾವನ್ನಪ್ಪಿದೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಚಿರತೆ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Tap to resize

Latest Videos

ಅಂದಹಾಗೆ  ಚಿರತೆ ಉರುಳಿಗೆ ಸಿಲುಕಿ ಮೂರ್ನಾಲ್ಕು ಘಂಟೆ ಒದ್ದಾಡಿದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ತಡವಾಗಿ ಆಗಮಿಸಿದ್ದಾರೆ. ಬಳಿಕ ಉರುಳಿನಿಂದ ಚಿರತೆ ಮೃತ ದೇಹ ಹೊರತೆಗೆದು‌ ಮರಣೋತ್ತರ ಪರಿಕ್ಷೆ ನಡೆಸಲಾಯಿತು. ಯಾರೋ ಕಿಡಿಗೇಡಿಗಳು ಹಂದಿ ಭೇಟೆಯಾಡುವವರು ಮುಳ್ಳಿನ ಬೇಲಿಯಲ್ಲಿ ಉರುಳು ಹಾಕಿದ್ದಾರೆ.ಸುಮಾರು ಎರಡು ಮೂರು ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಜಮೀನು ಮಾಲೀಕನ ಮೇಲೆ ಕಾನೂನು ಕ್ರಮ ಜರಿಗಿಸುವುದಾಗಿ ವಲಯ ಅರಣ್ಯಾಧಿಕಾರಿಗಳು ತಿಳಿಸಿದರು.

Shivamogga News: ವಾರ​ದಿಂದ ಚಿರತೆ ಸಂಚಾ​ರ: ಆತಂಕದಲ್ಲಿ ಗ್ರಾಮಸ್ಥರು

ಒಟ್ಟಾರೆ  ಕಿಡಿಗೇಡಗಳು ಹಾಕಿದ್ದ ಉರುಳಿಗೆ ಮೂಕಪ್ರಾಣಿಯೊಂದು ಬಲಿಯಾಗಿದೆ. ಸಮಯಕ್ಕೆ ಸರಿಯಾಗಿ ಅರಣ್ಯ ಅಧಿಕಾರಿಗಳು ಬಂದಿದ್ದರೆ ಚಿರತೆ ಪ್ರಾಣ ಉಳಿಸಬಹುದಿತ್ತೇನೆ. ಒಂದಲ್ಲೊಂದು ಕಡೆ ನಡೆಯುತ್ತಿರುವ ಇಂತಹ ಘಟನೆಗಳಿಗೆ ಕಡಿವಾಣ ಬೀಳಬೇಕಿದೆ.

ಚಿತ್ರದುರ್ಗ ನಗರಕ್ಕೆ ಚಿರತೆ ಭೀತಿ: ಚಂದ್ರವಳ್ಳಿ ರಸ್ತೆಯ ಬಂಡೆ ಮೇಲೆ ಮೂರು ಚಿರತೆ ಪ್ರತ್ಯಕ್ಷ

ಚಿರತೆಗಳ ದಾಳಿ: 8 ಮೇಕೆಗಳಿಗೆ ಗಾಯ, ನಾಲ್ಕು ಮೇಕೆಗಳನ್ನು ಎಳೆದೊಯ್ದ ಚಿರತೆ
ಪಾಂಡವಪುರ: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮೇಕೆ, ಕೋಳಿಗಳ ಮೇಲೆ ಚಿರತೆಗಳು ದಾಳಿ ನಡೆಸಿ 9 ಮೇಕೆ ಕೊಂದು, ನಾಲ್ಕು ಮೇಕೆಗಳನ್ನು ಎಳೆದೊಯ್ದು, 8 ಮೇಕೆಗಳನ್ನು ಗಾಯಗೊಳಿಸಿ, ನಾಲ್ಕೈದು ಕೋಳಿಗಳನ್ನು ತಿಂದಿರುವ ಘಟನೆ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಗಿರಿಯಾರಹಳ್ಳಿಯ ನಾಗೇಗೌಡರಿಗೆ ಸೇರಿದ ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿವೆ. ಗ್ರಾಮದ ಹೊರವಲಯದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ರೈತ ನಾಗೇಗೌಡ ತನ್ನ ಮನೆ ಪಕ್ಕದ ಕೊಟ್ಟಿಗೆ ನಿರ್ಮಿಸಿಕೊಂಡು ಮೇಕೆ ಸಾಕಾಣಿಕೆ ಮಾಡುತ್ತಿದ್ದರು.

ಸುಮಾರು 20ಕ್ಕೂ ಅಧಿಕ ಮೇಕೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿತ್ತು. ಭಾನುವಾರ ಮಧ್ಯರಾತ್ರಿ ಸುಮಾರು ಎರಡು ಮೂರು ಚಿರತೆಗಳು ಏಕಕಾಲದಲ್ಲಿ ಮೇಕೆಗಳಿದ್ದ ಕೊಟ್ಟಿಗೆ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ಮೇಕೆಗಳು ಕಿರುಚಾಟ ನಡೆಸಿದಾಗ ರೈತ ನಾಗೇಗೌಡ ನೋಡಲು ಹೊರಗಡೆ ಬಂದಾಗ ಚಿರತೆಗಳು ಸ್ಥಳದಿಂದ ಪರಾರಿಯಾಗಿವೆ.

ಕೊಟ್ಟಿಗೆಯಲ್ಲಿದ್ದ ಸುಮಾರು 9 ಮೇಕೆಗಳನ್ನು ಸಾಯಿಸಿ ನಾಲ್ಕು ಮೇಕೆಗಳನ್ನು ಚಿರತೆಗಳು ಎಳೆದೊಯ್ದಿವೆ. ಸುಮಾರು 8ಕ್ಕೂ ಅಧಿಕ ಮೇಕೆಗಳು ಗಾಯಗೊಂಡು ಸಾಯುವ ಸ್ಥಿತಿಯಲ್ಲಿವೆ. ಮೇಕೆಗಳ ಜತೆಯಲ್ಲಿ ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ಕೋಳಿಗಳ ಮೇಲೂ ದಾಳಿ ನಡೆಸಿ ನಾಲ್ಕೈದು ಕೋಳಿಗಳನ್ನು ತಿಂದಿವೆ. ಘಟನೆಯಿಂದ ರೈತ ನಾಗೇಗೌಡರಿಗೆ ಲಕ್ಷಾಂತರ ರು. ನಷ್ಟವಾಗಿದೆ.

ಶಾಸಕ ಸಿಎಸ್ಪಿ ಭೇಟಿ: ಚಿರತೆ ದಾಳಿ ವಿಷಯ ತಿಳಿದು ಶಾಸಕ ಸಿ.ಎಸ್‌.ಪುಟ್ಟರಾಜು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಮೇಕೆ ಕಳೆದುಕೊಂಡ ರೈತ ನಾಗೇಗೌಡ ಅವರ ಗೋಳಾಟ ಕಂಡು ಸ್ಥಳದಿಂದಲೇ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸಾವನ್ನಪ್ಪಿರುವ, ಗಾಯಗೊಂಡಿರುವ ಮೇಕೆಗಳಿಗೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಸೂಚನೆ ನೀಡಿದರು.

click me!