'ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿವೆ ಸರ್; ಮನೇಲಿ ಎಲ್ಲರೂ ಕೆಲಸಕ್ಕೆ ಹೋದ ಮೇಲೆ ನಾವು ಈ ರೀತಿ ಚಿಕ್ ಮಕ್ಕಳನ್ನ ಕರ್ಕೊಂಡ ಬಂದು ನೀರು ತಗೊಂಡ ಹೋಗಬೇಕಾದ ಅನಿವಾರ್ಯತೆ ಇದೆ. ಶಾಸಕರು ಅಧಿಕಾರಿಗಳು ಬಂದು ಹೋಗ್ತಾರೆ ಆದರೆ ನಮ್ ಕಷ್ಟ ಕೇಳಲ್ಲ ಸ್ವಾಮಿ ಎಂದು ಅಳಲು ತೋಡಿಕೊಂಡ ಮಹಿಳೆಯರು.
ಚಿಕ್ಕೋಡಿ (ಜ.10) : ಏಳು ನದಿಗಳು ಹರಿಯುವ ಜಿಲ್ಲೆಯಲ್ಲೀಗ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕುಡಿಯುವ ನೀರಿಗಾಗಿ ಸರ್ಕಾರದಿಂದ ನಿರ್ಮಿಸಿದ್ದ ವಾಟರ್ ಟ್ಯಾಂಕ್ ಗಳು ಹಾಳಾಗಿ ಹೋಗಿವೆ. ಜನ ಮತ್ತೆ ನೀರಿಗಾಗಿ ಕಿಮೀಗಟ್ಟಲ್ಲೇ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜನರು ಬೇಸಗೆಗೂ ಮುನ್ನವೇ ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಆಳವಾದ ಬಾವಿಯಲ್ಲಿ ಜೀವದ ಹಂಗು ತೊರೆದು ನೀರು ತುಂಬಿಕೊಂಡು ಬರುತ್ತಿದ್ದಾರೆ. ಸೊಂಟದ ಮೇಲೊಂದು, ತಲೆ ಮೇಲೊಂದು ಕೊಡಗಳನ್ನಿಟ್ಟುಕೊಂಡು ಹರಸಾಹಸದಿಂದ ಸಾಗುತ್ತಿರುವ ಜನರನ್ನು ನೋಡಿದರೆ ಅಯ್ಯೋ ನೀರಿಗಾಗಿ ಎಂಥ ಬವಣೆ ಎನಿಸುತ್ತದೆ., ಕುಡಿಯುವ ನೀರು ಸಪ್ಲೈ ಮಾಡ್ತಿದ್ದ ಟ್ಯಾಂಕ್ ಬಂದ್ ಆಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ, ಚಿತ್ರದುರ್ಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಅಭಾವ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಡೋನವಾಡ ಗ್ರಾಮದಲ್ಲಿ. ಜನರು ಇದೀಗ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ದುಡಿಯುವ ಬದಲು ನೀರು ತರುವುದಕ್ಕೆ ದಿನನಿತ್ಯ ಸಮಯ ಮೀಸಲಿಡುವಂತಾಗಿದೆ. ಬೇಸಗೆ ಆರಂಭಕ್ಕೂ ಮುನ್ನವೇ ಕುಡಿಯಲು ನೀರು ಸಿಗುತ್ತಿಲ್ಲ. ಪೂರೈಕೆಯೂ ಆಗುತ್ತಿಲ್ಲ. ಇನ್ನು ಬೇಸಗಿ ಬಂದರೆ ಹೇಗೆಂದು ಗ್ರಾಮದ ಜನರಿಗೆ ಈಗಲೇ ಆತಂಕ ಶುರುವಾಗಿದೆ.
ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಏನು ಗೊತ್ತಾ? ಹನ್ನೊಂದು ಗ್ರಾಮಗಳಿಗೆ ಸಪ್ಲೈ ಆಗಬೇಕಿದ್ದ ಜಲಜೀವನ್ ಯೋಜನೆ(jalajeevn mission)ಯಡಿ ನಿರ್ಮಾಣವಾಗಿರುವ ವಾಟರ್ ಟ್ಯಾಂಕ್(water tank) ಆರು ತಿಂಗಳಿಂದ ಹಾಳಾಗಿ ಹೋಗಿರುವುದು. 16ಕೋಟಿ ವೆಚ್ಚದಲ್ಲಿ ಐದು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಟ್ಯಾಂಕ್ ಇದೀಗ ಕೆಟ್ಟು ಹೋಗಿದ್ದರಿಂದ, ಡೋನವಾಡ, ಕರಗಾಂವ್, ಉಮ್ರಾಣಿ, ಇಟ್ನಾಳ್, ನಾಗರ ಮುನವಳ್ಳಿ ಸೇರಿದಂತೆ 11ಗ್ರಾಮಗಳಿಗೆ ನೀರು ಸಪ್ಲೈ ಆಗ್ತಿಲ್ಲ. ಅಧಿಕಾರಿಗಳನ್ನು ಕೇಳಿದ್ರೆ ಒಂದು ವಾರ ಅಂತ ಟೈಂ ತಗೊಂಡು ೧೫ ದಿನ ಆದ್ರೂ ದುರಸ್ತಿ ಮಾಡಿಸುತ್ತಿಲ್ಲ ಎಂದು ಜನ ಆರೋಪಿಸಿದ್ದಾರೆ.
ಹೌದು ಡೋನವಾಡ ಗ್ರಾಮದಲ್ಲಿ ಇದೀಗ ನಿತ್ಯವೂ ಮನೆಗೆ ಒಬ್ಬರಂತೆ ನೀರು ತರುವ ಕಾಯಕ ಮಾಡುತ್ತಿದ್ದಾರೆ. ಗ್ರಾಮದಿಂದ ಒಂದರಿಂದ ಎರಡು ಕಿಮೀ ದೂರದಲ್ಲಿರುವ ಬಾವಿಗಳಿಗೆ ತೆರಳುವ ಜನರು ಬಾವಿಯಲ್ಲಿ ಪ್ರಾಣದ ಹಂಗು ತೊರೆದು ಇಳಿದು ಅಲ್ಲಿಂದ ಕೊಡಗಳಲ್ಲಿ ನೀರು ತುಂಬಿಕೊಂಡು ಬರುತ್ತಿದ್ದಾರೆ. ಇನ್ನೂ ಮಹಿಳೆಯರು, ಮಕ್ಕಳು, ವಯೋವೃದ್ದರು ಸೇರಿದಂತೆ ಎಲ್ಲರೂ ನೀರು ತರುವ ಕೆಲಸದಲ್ಲೇ ನಿರತರಾಗಿದ್ದಾರೆ. ಒಂದು ಕಡೆ ಜನರಿಗೇ ಕುಡಿಯಲು ನೀರಿಲ್ಲದಿದ್ರೇ ಇತ್ತ ಜಾನುವಾರುಳಿಗೂ ಕೂಡ ನೀರು ಸಿಗದೇ ಮೂಕ ಪ್ರಾಣಿಗಳು ರೋಧಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸ್ಥಳೀಯ ಶಾಸಕ ದುರ್ಯೋಧನ ಐಹೊಳೆ(MLA Duryodhan Aihole ) ಅವರ ಗಮನಕ್ಕೆ ತಂದ್ರೂ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ,
'ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿವೆ ಸರ್; ಮನೇಲಿ ಎಲ್ಲರೂ ಕೆಲಸಕ್ಕೆ ಹೋದ ಮೇಲೆ ನಾವು ಈ ರೀತಿ ಚಿಕ್ ಮಕ್ಕಳನ್ನ ಕರ್ಕೊಂಡ ಬಂದು ನೀರು ತಗೊಂಡ ಹೋಗಬೇಕಾದ ಅನಿವಾರ್ಯತೆ ಇದೆ. ಶಾಸಕರು ಅಧಿಕಾರಿಗಳು ಬಂದು ಹೋಗ್ತಾರೆ ಆದರೆ ನಮ್ ಕಷ್ಟ ಕೇಳಲ್ಲ ಸ್ವಾಮಿ ಎಂದು ಅಳಲು ತೋಡಿಕೊಂಡ ಮಹಿಳೆಯರು.
ಕುಡಿಯಲು ನೀರು ಕೊಡಿ; ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ನಾರಿಯರು
ಒಟ್ಟಾರೆ ಬೇಸಗೆ ಕಾಲ ಇನ್ನು ಶುರುವಾಗಿಲ್ಲ ಅಷ್ಟರೊಳಗೆ ಬೆಳಗಾವಿ(Belagavi) ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ದೂರದಿಂದ ನೀರು ಹೊತ್ತು ತಂದು ಜೀವನ ಸಾಗಿಸುತ್ತಿದ್ದಾರೆ. ಮನೆ ಮನೆಗೂ ನೀರು ಕೊಡ್ತೇವಿ ಅನ್ನೋ ಸರ್ಕಾರ ಇರೋ ವ್ಯವಸ್ಥೆಯನ್ನ ಸರಿಪಡಿಸಿ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಕೊಡಿಸುವ ಕೆಲಸ ಸರ್ಕಾರ ಮಾಡಲಿ.