ಬೆಂಗಳೂರು (ಆ.30): ಹೊಸಕೋಟೆ ಪಟ್ಟಣದ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಮೆಟ್ರೊ ರೈಲು ಸಂಚಾರ ವಿಸ್ತರಿಸುವಂತೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು ಕೇಂದ್ರ ಮತ್ತು ನಗರ ವ್ಯವಹಾರಗಳ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆಂಗೇರಿ ವರೆಗಿನ ಮೆಟ್ರೋ ರೈಲು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಕೇಂದ್ರ ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲಕ ನಾಗರಾಜ್ ಮನವಿ ಸಲ್ಲಿಸಿ ವಾಸ್ತವ ವಿವರಿಸಿದರು.
undefined
ಸಿಎಂ ಬೊಮ್ಮಾಯಿಗೆ ಉಡುಗೊರೆಯೊಂದನ್ನು ನೀಡಿದ ಎಂಟಿಬಿ
ಹೊಸಕೋಟೆ ಪಟ್ಟಣವು ಬಿಬಿಎಂಪಿ ವ್ಯಾಪ್ತಿಯಿಂದ ಕೇವಲ 10 ಕಿ.ಮಿ ದೂರದಲ್ಲಿದೆ. ಭಾರತದ ಸಿಲಿಕಾನ್ ವ್ಯಾಲಿ ವೈಟ್ ಫೀಲ್ಡ್ ಯಟಿ ಪಾರ್ಕ್‌ಗೆ ಹೊಸಕೋಟೆ ಬಹಳ ಹತ್ತಿರಲ್ಲಿದೆ. ವೈಟ್ ಫೀಲ್ಡ್ ಸುತ್ತಮುತ್ತ ನೂರಾರು ಐಟಿ ಕಂಪನಿಗಳಿವೆ. ವಾಣಿಜ್ಯ ಕಟ್ಟಡ ಬೃಹತ್ ಕಟ್ಟಡಗಳು ಹೆಚ್ಚಿದ್ದು ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿವೆ. ಇದರಿಂದಾಗಿ ಹೊಸಕೋಟೆಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ ಎಂದು ತಿಳಿಸಿದರು.
ಕೈಗಾರಿಕೆಗಳ ಹೆಬ್ಬಾಗಿಲು : ಹೊಸಕೋಟೆಯು ಮಾಲೂರು ಕೈಗಾರಿಕಾ ಪ್ರದೇಶ ನಂದಗುಡಿ ಮತ್ತು ಕೋಲಾರ ಕೈಗಾರಿಕಾ ಪ್ರದೇಶಗಳ ಹೆಬ್ಬಾಗಿಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ಬದಲಿ ರಸ್ತೆಯು ಹೊಸಕೋಟೆ ತಾಲೂಕಿನ ಮೂಲಕ ಹಾದು ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹೊಸಕೋಟೆಯಲ್ಲಿನ ಜೀವನ ಮಟ್ಟ ಬೆಂಗಳೂರು ನಗರಕ್ಕಿಂತ ಕಡಿಮೆ ಇರುವುದರಿಂದ ಬೆಂಗಳೂರು ಉದ್ಯೋಗಿಗಳು ಬೆಂಗಳೂರು ಹೊರವಲಯ ಹಾಗು ಹೊಸಕೋಟೆ ಪಟ್ಟಣದಲ್ಲಿ ಭಾರಿ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅವರು ಬೆಂಗಳೂರಿಗೆ ತೆರಳಲು ಮೆಟ್ರೋ ರೈಲು ಸಂಚಾರ ಕಲ್ಪಿಸಿದರೆ ರಸ್ತೆ ಮಾರ್ಗದ ಮೇಲೆ ಇರುವ ದೊಡ್ಡ ಒತ್ತಡವನ್ನು ತಪ್ಪಿಸಬಹುದು ಎಂದರು.